Advertisement
ಜೆಡಿಎಸ್‌ನ ಪ್ರಧಾನ ಕಚೇರಿಯಲ್ಲಿ ಶನಿವಾರ ಮಾತನಾಡಿ, ಡಿಸಿಎಂ ಆಗಿದ್ದಾಗ ನೀವು ಯಾರ ಜಾಗವನ್ನು ಲಪಟಾಯಿಸಿ ಮನೆ ಕಟ್ಟಿದಿರಿ? ಅದರ ದಾಖಲೆ ಬೇಕಾ? ದಲಿತರಿಗೆ ಮುಡಾದಿಂದ ಹಂಚಿಕೆ ಆಗಿದ್ದ ನಿವೇಶನದಲ್ಲಿ ಅಕ್ರಮವಾಗಿ ಮನೆ ಕಟ್ಟಿದವರು ಯಾರು, ಹೇಳುತ್ತೀರಾ? 15 ನಿವೇಶನ ಬರೆಸಿಕೊಂಡದ್ದಷ್ಟೇ ಅಲ್ಲ, ಅದಕ್ಕೆ ಮೀರಿದ ಹಗರಣಗಳನ್ನು ಮಾಡಿದ್ದಾರೆ ಎಂದು ಸಿದ್ದರಾಮಯ್ಯ ವಿರುದ್ಧ ಸ್ಫೋಟಕ ಆರೋಪವನ್ನು ಹೊರಿಸಿದ್ದಾರೆ.ದಲಿತ ವಿಶೇಷ ಚೇತನರೊಬ್ಬರ ಬಳಿ 24,000 ರೂ. ಕಟ್ಟಿಸಿಕೊಂಡು ಮುಡಾದಲ್ಲಿ ಸೈಟ್ ಹಂಚಿಕೆ ಮಾಡಲಾಗಿತ್ತು.
Related Articles
ಸಿಎಂ ಹಾಗೂ ರಾಜ್ಯ ಸರಕಾರದ ವಿರುದ್ಧ ನಿತ್ಯ ಕೇಳಿಬರುತ್ತಿರುವ ಭ್ರಷ್ಟಾ ಚಾರ ಹಗರಣಗಳಿಂದ ಜನರ ಗಮನ ವನ್ನು ಬೇರೆಡೆಗೆ ಸೆಳೆಯಲು ಸರಕಾರ ನಾಗ ಮಂಗಲ ಗಲಭೆಯನ್ನು ಸೃಷ್ಟಿಸಿರುವ ಸಾಧ್ಯತೆ ಇದೆ. ಎಸ್‌ಐಟಿ ತನಿಖೆಯ ಆರೋಪ ಪಟ್ಟಿಗಳ ಬಗ್ಗೆ, ವೈಯಕ್ತಿಕ ಚಾಟ್ ಬಗ್ಗೆ ಚರ್ಚೆ ಆರಂಭವಾಗುತ್ತದೆ. ಇದೆಲ್ಲ ಹೇಗೆ ಬಹಿರಂಗವಾಗಲು ಸಾಧ್ಯ? ತನಿಖಾ ಸಂಸ್ಥೆಗಳೇ ಸೋರಿಕೆ ಮಾಡು ತ್ತಿವೆ. ಜನರ ಗಮನವನ್ನು ಬೇರೆಡೆಗೆ ಹೊರಳಿಸಲು ಸರಕಾರ ಇಂಥ ತಂತ್ರ ಗಾರಿಕೆ ಮಾಡುತ್ತಿದೆ ಎಂದು ಕುಮಾರ ಸ್ವಾಮಿ ದೂರಿದರು.
Advertisement