Advertisement

ಸರಣಿ ಕಳ್ಳತನಕ್ಕೆ ಬೆಚ್ಚಿದ ದೊಡ್ಡಬಳ್ಳಾಪುರ ಜನತೆ

11:23 AM Feb 21, 2017 | Team Udayavani |

ದೊಡ್ಡಬಳ್ಳಾಪುರ: ನಗರದಲ್ಲಿ ಭಾನುವಾರ ರಾತ್ರಿ ನಡೆದ ಪ್ರತ್ಯೇಕ ಘಟನೆಗಳಲ್ಲಿ ಒಂಟಿ ಮಹಿಳೆ ಇದ್ದ ಮನೆಯೂ ಸೇರಿದಂತೆ ಆರು ಅಂಗಡಿಗಳಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನ ಹಾಗೂ ನಗದು ಲೂಟಿ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಪಟ್ಟಣದ ನಾಗರಿಕರು ಬೆಚ್ಚಿ ಬಿದ್ದಿದ್ದಾರೆ.

Advertisement

ಶಾಂತಿನಗರದ ಮಾಂಗಲ್ಯ ಕಲ್ಯಾಣ ಮಂಟಪದ ಮುಖ್ಯ ರಸ್ತೆಯಲ್ಲಿರುವ ಮಂಜುನಾಥ್‌ ಎಂಬುವವರ ಮನೆಯಲ್ಲಿ ಮಹಿಳೆ ಒಂಟಿಯಾಗಿರುವ ಸಮಯ ನೋಡಿ ರಾತ್ರಿ 9 ಗಂಟೆ ಸಮಯದಲ್ಲಿ ಲಗ್ನ ಪತ್ರಿಕೆ ಕೊಡುವ ನೆಪದಲ್ಲಿ ಮನೆ ಪ್ರವೇಶಿದ ಅಪರಿಚಿತ ಮಹಿಳೆ ಹಾಗೂ ಒಬ್ಬ ಪುರುಷ ತಕ್ಷಣ ಮಹಿಳೆಗೆ ಪ್ರಜೆ` ತಪ್ಪಿಸಿ ಮನೆಯಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನ ಮತ್ತು ವಜ್ರದ ಆಭರಣಗಳನ್ನು ಲೂಟಿ ಮಾಡಿದ್ದಾರೆ. 

ಘಟನೆಯ ವಿವರ: ಶಾಂತಿನಗರದ ನಿವಾಸಿಗಳಾದ ಮಂಜುನಾಥ್‌ ಮತ್ತು ವಿಶ್ವನಾಥ್‌ ಎಂಬ ಸಹೋದರರು ನಗರದಲ್ಲಿ ಸೀಮೆಎಣ್ಣೆ ಬಂಕ್‌ ಹಾಗೂ ಎಂ.ಅರ್‌.ಎಫ್.ಟೈರ್‌ ಶೋ ರೂಮ್‌ ಹೊಂದಿದ್ದಾರೆ. ಭಾನುವಾರ ಮಂಜುನಾಥ್‌ ತಮ್ಮ ತಾಯಿ, ಪತ್ನಿಯೊಂದಿಗೆ ಸಿರಾಕ್ಕೆ ತೆರಳಿದ್ದರು. ವಿಶ್ವನಾಥ್‌ ಸಂಜೆ 5 ಗಂಟೆಗೆ ತಿರುಪತಿಗೆ ತೆರಳಿದ್ದರು. ಮನೆಯಲ್ಲಿ ವಿಶ್ವನಾಥ್‌ ಪತ್ನಿ ಕಾವ್ಯ ಹಾಗೂ 5 ವರ್ಷದ ಮಗು ಮಾತ್ರ ಇತ್ತು.

ರಾತ್ರಿ ಸುಮಾರು 9 ಗಂಟೆಯಲ್ಲಿ ಇಬ್ಬರು ಅಪರಿಚಿತರು ಬಾಗಿಲು ಬಡಿದಿದ್ದಾರೆ. ಅವರನ್ನು ಕಾವ್ಯ ವಿಚಾರಿಸಿದ್ದಾರೆ. ಮಂಜುನಾಥ್‌ ಮತ್ತು ವಿಶ್ವನಾಥ್‌ರನ್ನು ಕೇಳಿದ ಅಪರಿಚಿತರು, ಲಗ್ನಪತ್ರಿಕೆ ಕೊಡಬೇಕು ಎಂದಾಗ ಕಾವ್ಯ ಬಾಗಿಲು ತೆರೆದಿದ್ದಾರೆ. ಈ ವೇಳೆ ಕಾವ್ಯಾ ಅವರನ್ನು ಪ್ರಜ್ಞೆ ತಪ್ಪಿಸಿರುವ ಆಗಂತುಕರು ಮನೆ ದೋಚಿದ್ದಾರೆ. ಅಪರಿಚಿತರು ಒಳಗೆ ಬಂದಿದ್ದಷ್ಟೇ ಗೊತ್ತು ಎನ್ನುತ್ತಾರೆ ಕಾವ್ಯ. ರಾತ್ರಿ 9 ಗಂಟೆಯಿಂದಲೂ ಮಂಜುನಾಥ್‌ ಮನೆಗೆ ಕರೆ ಮಾಡಿದರೂ ಕಾವ್ಯ ಕರೆ ಸ್ವೀಕರಿಸಿಲ್ಲ.

ನಂತರ ರಾತ್ರಿ 11.30 ಕ್ಕೆ ಸಿರಾದಿಂದ ವಾಪಸ್ಸು ಬಂದು ನೋಡಿದಾಗ ಹೊರಗಿನಿಂದ ಚಿಲಕ ಹಾಕಿರುವುದು ಕಂಡು ಬಂದಿದೆ. ಒಳಗೆ ಬಂದು ನೋಡಿದಾಗ ರೂಮಿನಲ್ಲಿ ಕಾವ್ಯಾ ಪ್ರಜಾ`ಹೀನಸ್ಥಿತಿಯಲ್ಲಿ ಬಿದ್ದಿದ್ದಾರೆ. ನಂತರ ಮನೆ ಪರಿಶೀಲಿಸಿದಾಗ ಬೆಳ್ಳಿಯ ಒಡವೆಗಳನ್ನು ಬಿಟ್ಟು, 1.5 ಕೆ.ಜಿ.ಚಿನ್ನದ ಹಾಗೂ ವಜ್ರದ ಒಡವೆ, ಒಂದು ಲಕ್ಷ ರೂ ನಗದು ದೋಚಿರುವುದು ಪತ್ತೆಯಾಗಿದೆ. 

Advertisement

ಅಂಗಡಿಗಳಲ್ಲಿ ಸರಣಿ ಕಳ್ಳತನ: ಒಂದೆಡೆ ಮನೆ ಲೂಟಿಯಾಗಿದ್ದರೆ, ಇನ್ನೊಂದು ಕಡೆ ನಗರದ ಮುಖ್ಯರಸ್ತೆಯಲ್ಲಿ ಅದೂ ಪೊಲೀಸ್‌ ಠಾಣೆಯ ಪಕ್ಕದಲ್ಲಿಯೇ 6 ಅಂಗಡಿಗಳಲ್ಲಿ ಕಳ್ಳತನವಾಗಿವೆ. ಈ ಅಂಗಡಿಗಳು ಮರದ ಬಾಗಿಲುಗಳನ್ನು ಹೊಂದಿದ್ದು, ಅಂಗಡಿಯ ಬಾಗಿಲು ಹಾಗೂ ಡೋರ್‌ಲಾಕ್‌ಗಳನ್ನು ಒಡೆದು ಕಳ್ಳತನ ಮಾಡಲಾಗಿದೆ. ಪ್ಲಾಸ್ಟಿಕ್‌ ಅಂಗಡಿ ಟಿಫ‌ನ್‌ ಸೆಂಟರ್‌ಗಳನ್ನೂ ಕಳ್ಳರು ಬಿಟ್ಟಿಲ್ಲ.

ಮುಖ್ಯರಸ್ತೆಯಲ್ಲಿನ ಅನ್ನಪೂರ್ಣೇಶ್ವರಿ ಫ್ಯಾನ್ಸಿ ರೆಡಿಮೇಡ್‌ ಸೆಂಟರ್‌ನಲ್ಲಿ 8 ಸಾವಿರ ನಗದು, ಮಂಜುನಾಥ್‌ ಪ್ಲಾಸ್ಟಿಕ್‌ ಅಂಗಡಿಯಲ್ಲಿ 15 ಸಾವಿರ ನಗದು, ಮಂಜುನಾಥ್‌ ಟಿಫ‌ನ್‌ ಸೆಂಟರ್‌ನಲ್ಲಿ 2 ಸಾವಿರ ನಗದು, ಬಸವೇಶ್ವರ ಸ್ಟೌವ್‌ ಅಂಗಡಿಗಳಲ್ಲಿ 2,500 ನಗದು, ಮಹೇಶ್‌ ಟಿಫ‌ನ್‌ ಸೆಂಟರ್‌ನಲ್ಲಿ 1000 ರೂ ನಗದು ದೋಚಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next