Advertisement

ಅನ್ಯಾಯವಾದರೆ ಪ್ರತ್ಯೇಕ ರಾಜ್ಯ ಕೂಗು ಅನಿವಾರ್ಯ; ಇಟಗಿ ಮಠದ ಶಾಂತವೀರ ಶ್ರೀ

05:11 PM Jan 21, 2021 | Nagendra Trasi |

ಬಸವನಬಾಗೇವಾಡಿ: ಉತ್ತರ ಕರ್ನಾಟಕಕ್ಕೆ ಅನ್ಯಾಯ ಮಾಡಿದರೆ ಮುಂದೊಂದು ದಿನ ಪ್ರತ್ಯೇಕ ರಾಜ್ಯದ ಕೂಗು ಅನಿರ್ವಾವಾಗುತ್ತದೆ. ಸರಕಾರ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು ಎಂದು ಇಟಗಿ ಮಠದ ಶಾಂತವೀರ ಶ್ರೀಗಳು ಹೇಳಿದರು.

Advertisement

ಉತ್ತರ ಕರ್ನಾಟಕ ಸಮಗ್ರ ಅಭಿವೃದ್ಧಿಗೆ ಆಗ್ರಹಿಸಿ ರೈತ ಅಭಿವೃದ್ಧಿ ಸಂಘ ಹಮ್ಮಿಕೊಂಡಿರುವ ಬೆಂಗಳೂರು ಪಾದಯಾತ್ರೆ ಮುನ್ನ ಬುಧವಾರ ವಿರಕ್ತಮಠದಲ್ಲಿ ನಡೆದ ಸಾರ್ವಜನಿಕರ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಆಲಮಟ್ಟಿ ಆಣೆಕಟ್ಟು ಇದ್ದರು ಅನೇಕ ಹಳ್ಳಿಗಳಿಗೆ ಕುಡಿಯುವ ನೀರು ಸಿಗದುರುವುದು ದುರ್ದೈವ ಎಂದರು.

ಮನಗೂಳಿ ಹಿರೇಮಠದ ಸಂಗನಬಸವ ಶಿವಾಚಾರ್ಯ ಶ್ರೀಗಳು ಮಾತನಾಡಿ, ದಕ್ಷಿಣ ಕರ್ನಾಟಕದ ಹೋರಾಟಕ್ಕೂ ಉತ್ತರ ಕರ್ನಾಟಕ ಹೋರಾಟಕ್ಕೂ ಭಿನ್ನವಾಗಿದೆ. ದಕ್ಷಿಣ ಕರ್ನಾಟಕ ಭಾಗದ ಹೋರಾಟದಲ್ಲಿ ಒಗ್ಗಟ್ಟಿನ ಬಲ ಇದೆ.  ಆದರೆ ಉತ್ತರ ಕರ್ನಾಟಕ ಹೋರಾಟದಲ್ಲಿ ಒಗ್ಗಟ್ಟಿನ ಕೊರತೆಯಿಂದ ಹೋರಾಟಗಳು ಯಶಸ್ಸು ಕಾಣುತ್ತಿಲ್ಲ. ಈ ಭಾಗದ ಜನರು ಜಾಗೃತರಾದಾಗ ಮಾತ್ರ ನಮ್ಮ ಹೋರಾಟಕ್ಕೆ ಶಕ್ತಿ ಬರುತ್ತದೆ ಮತ್ತು ನಮ್ಮ ಹಕ್ಕನ್ನು ಪಡೆಯಲು
ಸಾಧ್ಯವಾಗುತ್ತದೆ ಎಂದು ಹೇಳಿದರು.

ಕೊಲ್ಹಾರದ ದಿಗಂಬರೇಶ್ವರ ಮಠದ ಕಲ್ಲಿನಾಥ ಶ್ರೀಗಳು ಮಾತನಾಡಿ, ಇಲ್ಲಿವರೆಗೆ ನಮ್ಮನ್ನಾಳಿದ ಮುಖ್ಯಮಂತ್ರಿಗಳು ದಕ್ಷಿಣ ಕರ್ನಾಟಕ, ಉತ್ತರ ಕರ್ನಾಟಕ ಎಂಬ ಬೇಧ ಭಾವ ಇಲ್ಲವೆಂದು ಮಾತಿನಲ್ಲಿ ಹೇಳುತ್ತಾರೆ. ಆದರೆ ಇಲ್ಲಿವರೆಗೆ ಯಾವೊಬ್ಬ ಮುಖ್ಯಮಂತ್ರಿ ಕೂಡಾ ಕಾರ್ಯ ಮಾಡುತ್ತಿಲ್ಲ. ಉತ್ತರ ಕರ್ನಾಟಕ್ಕೆ ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಹೇಳಿದರು.

ಪಟ್ಟಣದ ವಿರಕ್ತಮಠದ ಸಿದ್ದಲಿಂಗ ಶ್ರೀಗಳು ಮಾತನಾಡಿ, ಉತ್ತರ ಕರ್ನಾಟಕ ಭಾಗದಲ್ಲಿ ಅನೇಕ ಧಾರ್ಮಿಕ ಮತ್ತು ಐತಿಹಾಸಿಕ ಸ್ಥಳಗಳಿದ್ದು ಅವುಗಳ ಅಭಿವೃದ್ಧಿಗೆ ಸರಕಾರ ಮುದಾಗಬೇಕು. ನೀರಾವರಿ, ಕೈಗಾರಿಕೆ, ಶಿಕ್ಷಣ ಸೇರಿದಂತೆ ಇತರ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕಾರ್ಯಗಳು ನಡೆದರೆ
ಮಾತ್ರ ಉತ್ತರ ಕರ್ನಾಟಕದ ಜನರ ಭವಿಷ್ಯ ಬದಲಾಗುತ್ತದೆ ಎಂದರು.

Advertisement

ಉತ್ತರ ಕರ್ನಾಟಕ ರೈತರ ಅಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಯಾಸೀನ್‌ ಜವಳಿ, ಬಸವ ಸೈನ್ಯ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ, ಸಂಗಮೇಶ ಓಲೇಕಾರ ಮಾತನಾಡಿ, ಈ ಹೋರಾಟ ಯಾವುದೇ ಪಕ್ಷದ ವಿರುದ್ಧವಲ್ಲ. ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿ ದೃಷ್ಟಿಕೋನ ಇಟ್ಟುಕೊಂಡು ಹೋರಾಟ ಮಾಡುತ್ತಿದ್ದೇವೆ ಎಂದು ಹೇಳಿದರು.

ಮಸಬಿನಾಳ ವಿರಕ್ತಮಠದ ಸಿದ್ದರಾಮ ಶ್ರೀ, ಕಾಮನಕೇರಿಯ ಪರಮಾನಂದ ಶ್ರೀ, ಅರಕೇರಿಯ ಅವಧೂತ ಮಹಾರಾಜರು ಸಾನ್ನಿಧ್ಯ ವಹಿಸಿದ್ದರು. ಉದಯಕುಮಾರ ಮಾಂಗಲೇಕರ, ಅಲ್ಲಾಭಕ್ಸ್‌ ಬಿಜಾಪುರ, ಅಶೋಕ ಹಾರಿವಾಳ, ಸಂಜು ಬಿರಾದಾರ, ಜಗದೇವಿ ಗುಂಡಳ್ಳಿ, ಖಾಜಂಬರ ನದಾಫ್‌,
ಅಜೀಜ್‌ ಬಾಗವಾನ, ಧರಗೀರ್‌ ಮುಲ್ಲಾ, ಇಂದುಮತಿ ಲಮಾಣಿ, ಶಾಂತಾ ಹೂವಿನಹಳ್ಳಿ, ಕಮಲಸಾಬ ಕೊರಬು, ಮಹಾದೇವಿ ಹನುಮಶೆಟ್ಟಿ ಸೇರಿದಂತೆ ಅನೇಕರು ಇದ್ದರು. ನಂತರ ಬಸವ ಜನ್ಮ ಸ್ಮಾರಕ, ಮೂಲ ನಂದೀಶ್ವರ ದೇವಸ್ಥಾನದಿಂದ ತೆಲಗಿ ರಸ್ತೆ ಮಾರ್ಗವಾಗಿ ಪಾದಯಾತ್ರೆ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next