Advertisement

ಗರ್ಭಿಣಿಯರಿಗೆ ಮೆಟ್ರೋ ನಿಲ್ದಾಣದಲ್ಲಿ ಪ್ರತ್ಯೇಕ ಗೇಟ್

06:19 AM Jan 31, 2019 | Team Udayavani |

ಬೆಂಗಳೂರು: ಮೆಟ್ರೋ ನಿಲ್ದಾಣಗಳಲ್ಲಿ ಗರ್ಭಿಣಿಯರಿಗೆ ಆತಂಕ ಮೂಡಿಸಿದ್ದ ಸ್ವಯಂ ಚಾಲಿತ ಟೋಕನ್‌ ಸ್ವೀಕರಿಸುವ ಎಎಫ್ಸಿ ಗೇಟ್ ಸಮಸ್ಯೆಗೆ ಮುಕ್ತಿ ಸಿಕ್ಕಿದ್ದು, ಗರ್ಭಿಣಿಯರಿಗೆ ಮೆಟ್ರೋ ಸಿಬ್ಬಂದಿಗೆ ಮೀಸಲಿರುವ ಸಾಮಾನ್ಯ ಬಾಗಿಲು ಬಳಸಿಕೊಳ್ಳುವ ಅವಕಾಶವನ್ನು ಬಿಎಂಆರ್‌ಸಿಎಲ್‌ ಮಾಡಿಕೊಟ್ಟಿದೆ. ಮೆಟ್ರೋ ನಿಲ್ದಾಣದಲ್ಲಿ ಎಲ್ಲಾ ಪ್ರಯಾಣಿಕರು ಪ್ಲಾಟ್ಫಾರಂಗೆ ತೆರಳಲು ಹಾಗೂ ಅಲ್ಲಿಂದ ಹೊರಬರಲು ಎಎಫ್ ಗೇಟ್ ಮೂಲಕವೇ ತೆರಳಬೇಕು.

Advertisement

ಈ ಗೇಟ್ ಟೋಕನ್‌ ತೋರಿದ ಕೂಡಲೇ ಕೆಲ ಸೆಕೆಂಡ್‌ ಮಾತ್ರ ತೆರದು ಆ ನಂತರ ಥಟ್ಟನೆ ಮುಚ್ಚುತ್ತದೆ. ಒಂದು ವೇಳೆ ತಡವಾದರೆ ಇದರಿಂದ ಏನಾದರೂ ಸಮಸ್ಯೆ ಉಂಟಾಗ ಬಹುದು ಎಂದು ಗರ್ಭಿಣಿಯರು ಹಾಗೂ ಹಿರಿಯ ನಾಗರೀಕರು ಇದನ್ನು ಬಳಸಲು ಹಿಂದೇಟು ಹಾಕುತ್ತಿದ್ದರು. ಈ ಸಮಸ್ಯೆ ಕುರಿತು ಸಾಕಷ್ಟು ಮಹಿಳೆಯರು ಮೆಟ್ರೋ ನಿಲ್ದಾಣದ ಅಧಿಕಾರಿಗಳ ಗಮನಕ್ಕೆ ತಂದಿದ್ದರು. ಹೀಗಾಗಿ, ಗರ್ಭಿಣಿಯರಿಗೆ ತೊಂದರೆಯಾಗದಿರವ ಹಾಗೆ ಎಎಫ್ಸಿ ಗೇಟ್ ಪಕ್ಕದ ಮೆಟ್ರೋ ಸಿಬ್ಬಂದಿ ಬಳಸುವ ಗಾಜಿನ ಬಾಗಿಲ ಮೂಲಕ ಪ್ಲಾಟ್ಫಾರಂ ಪ್ರವೇಶಿಸಲು ಹಾಗೂ ಹೊರಹೋಗಲು ಅವಕಾಶ ಕಲ್ಪಿಸಿಕೊಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next