Advertisement

ಗುಡ್ಡ ಅಗೆದು ಭತ್ತ ಬೆಳೆದ ಸ್ವಾವಲಂಬಿ ಕೃಷಿಕ

09:49 PM Jan 04, 2020 | Sriram |

ಕೃಷಿತೋ ನಾಸ್ತಿ ದುರ್ಭಿಕ್ಷಂ ಎಂಬ ನಾಣ್ನುಡಿ ಯೊಂದಿದೆ. ಎಲ್ಲಿ ಕೃಷಿ ಇದೆಯೋ, ಅಲ್ಲಿ ನೆಮ್ಮದಿ ಇದೆ ಎನ್ನುವುದು ಅದರ ಅರ್ಥ. ಈಗಿನ ತಲೆಮಾರಿನ ಮಂದಿ ತಮ್ಮದು ಕೃಷಿಕ ಕುಟುಂಬವಾಗಿದ್ದರೂ ಕೃಷಿಯ ಕಡೆ ನಿರಾಸಕ್ತಿ ತೋರುತ್ತಿದ್ದಾರೆ. ಇದರ ಫ‌ಲವಾಗಿ ಒಂದೊಮ್ಮೆ ಫ‌ಲವತ್ತಾಗಿದ್ದ ನೆರ ಬರಡು ಭೂಮಿಯಾಗುತ್ತಿದೆ. ಈ ಸಂದರ್ಭದಲ್ಲಿ ಇಲ್ಲೊಬ್ಬರು ರೈತರು ಆದರ್ಶಪ್ರಾಯರಾಗಿ ತೋರುತ್ತಿದ್ದಾರೆ.

Advertisement

ಇರುವ ಕೃಷಿಭೂಮಿಯಲ್ಲೇ ಉಳುಮೆ ಮಾಡಲು ಹಿಂದೆ ಮುಂದೆ ನೋಡುತ್ತಿರುವ ಈ ಹೊತ್ತಿನಲ್ಲಿ ಬೆಳ್ತಂಗಡಿಯ ನಾರಾವಿ ಗ್ರಾಮದ ಸಂಜೀವ ದೇವಾಡಿಗ ಅವರು ಗುಡ್ಡವನ್ನು ಅಗೆದು ಗದ್ದೆ ಮಾಡಿ ವ್ಯವಸಾಯ ಮಾಡಿದ್ದಾರೆ. ಅಡಿಕೆ, ತೆಂಗು ತೋಟವಿದ್ದರೂ ತಾವು ಉಣ್ಣುವ ಅನ್ನವನ್ನು ತಾವೇ ಬೆಳೆಯಬೇಕು ಎಂಬ ಯೋಚನೆ ಅವರಿಗೆ ಬಂದಿದ್ದೇ ಇದಕ್ಕೆ ಕಾರಣ. 70ನೇ ವಯಸ್ಸಿನಲ್ಲಿ ಈ ಪರಿಯ ಉತ್ಸಾಹ ತೋರಿರುವುದು ಗಮನಾರ್ಹ. ಅರ್ಧ ಎಕ್ರೆಯಷ್ಟಿದ್ದ ತಮ್ಮದೇ ಗುಡ್ಡವನ್ನು ಅಗೆದು ಗದ್ದೆ ಮಾಡಿದ್ದಾರೆ. ಅದೇ ಹೊಲದಲ್ಲಿ 10 ಕ್ವಿಂಟಾಲ್‌ ಭತ್ತದ ಫ‌ಸಲನ್ನು ತೆಗೆದಿದ್ದಾರೆ.

ಇಲ್ಲಿಂದಲೇ ದನಕರುಗಳಿಗೆ ಮೇವು ಕೂಡಾ ಸಿಗುತ್ತಿದೆ. ನೀರಿನ ಸಮಸ್ಯೆಯಾದರೆ ಪಂಪ್‌ ಸೆಟ್‌ನ ಮೂಲಕ ನೀರಿನ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಇವರ ಗದ್ದೆಯಲ್ಲಿ ಮೂರು ಬೆಳೆ ಬೆಳೆಯುತ್ತಿದ್ದಾರೆ. ಇದರಲ್ಲಿ ಏಣೇಲು ಮತ್ತು ಸುಗ್ಗಿ ಬೇಸಾಯ ಮಾಡುತ್ತಾರೆ. ನಮ್ಮಲ್ಲಿರುವ ಗದ್ದೆಗಳನ್ನು ಬಂಜರು ಬಿಡದೆ ವ್ಯವಸಾಯ ಮಾಡಬೇಕು. ಯುವಕರು ಕೃಷಿ ಕಡೆಗೆ ಗಮನ ಹರಿಸಬೇಕು. ರೈತರಿಗೆ ಸರಿಯಾದ ಗೌರವ ಸಿಗಬೇಕು. ಕೃಷಿ ಬೆಳೆಸಿ ದೇಶ ಉಳಿಸುವ ಕಾಯಕದಲ್ಲಿ ನಾವೆಲ್ಲ ತೊಡಗಬೇಕು ಎನ್ನುವ ಅವರ ಬದುಕು ಕೃಷಿಕರೆಲ್ಲರಿಗೂ ಸ್ಫೂರ್ತಿ.

-ಸುರೇಂದ್ರ ಜೈನ್‌ ನಾರಾವಿ

Advertisement

Udayavani is now on Telegram. Click here to join our channel and stay updated with the latest news.

Next