Advertisement

ಹವ್ಯಕ ಮಹಾಸಭಾದ ನೂತನ ಪದಾಧಿಕಾರಿಗಳ ಆಯ್ಕೆ

11:12 PM Dec 15, 2019 | Lakshmi GovindaRaj |

ಬೆಂಗಳೂರು: ಶ್ರೀ ಅಖೀಲ ಹವ್ಯಕ ಮಹಾಸಭೆಗೆ ಅಧ್ಯಕ್ಷರಾಗಿ ಡಾ. ಗಿರಿಧರ ಕಜೆಯವರು 5ನೇ ಬಾರಿಗೆ ಸರ್ವಾನು ಮತದಿಂದ ಪುನರಾಯ್ಕೆಯಾದರು. ಮಲ್ಲೇಶ್ವರದ ಹವ್ಯಕ ಭವನದಲ್ಲಿ ಭಾನುವಾರ ನಡೆದ 76ನೇ ವರ್ಷದ ಸರ್ವಸದಸ್ಯರ ಸಭೆಯಲ್ಲಿ ಉತ್ತರ ಕನ್ನಡ, ಬೆಂಗಳೂರು, ಶಿವಮೊಗ್ಗ, ಕೊಡಗು, ಕಾಸರಗೋಡು ವ್ಯಾಪ್ತಿಯ 15 ನಿರ್ದೇಶಕ ಸ್ಥಾನಗಳಿಗೆ ಚುನಾವಣೆ ನಿಗದಿಯಾಗಿತ್ತು.

Advertisement

ಆದರೆ, ಎಲ್ಲ 15 ಸ್ಥಾನಗಳಿಗೂ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗುವ ಮೂಲಕ ಹವ್ಯಕ ಸಮಾಜದ ಸಂಘಟನೆಯ ಒಗ್ಗಟ್ಟು ಪ್ರದರ್ಶಿತ ವಾಯಿತು. ಚುನಾವಣಾಧಿ ಕಾರಿ ರಾಮಭಟ್‌ ಅವಿರೋಧ ಆಯ್ಕೆಯನ್ನು ಹಾಗೂ ನೂತನ ನಿರ್ದೇಶಕರನ್ನು ಉದ್ಘೋಷಿಸಿದರು.

ಡಾ.ಗಿರಿಧರ ಕಜೆ ಮಾತನಾಡಿ, ಮಹಾಸಭೆಯ ಕಾರ್ಯಕ್ರಮಗಳಿಗೆ ಸಮಾಜದಿಂದ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗುತ್ತಿದೆ. ಕಳೆದ ವರ್ಷಗಳಲ್ಲಿ ಅನೇಕ ಕಾರ್ಯಕ್ರಮಗಳನ್ನು ಆಯೋಜಿ ಸುವ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸಿದೆ. ಇಂತಹ ಕಾರ್ಯಕ್ರಮಗಳಿಗೆ ಹೆಚ್ಚಿನ ಬಲ ತುಂಬಲು 25 ವಿವಿಧ ಹವ್ಯಕ ವೇದಿಕೆಗಳಿಗೆ ಚಾಲನೆ ನೀಡಲಾಗಿದೆ ಎಂದರು.

ಗಾಯತ್ರೀ ಮಹೋತ್ಸವ: ಹವ್ಯಕ ಮಹಾಸಭೆಯಿಂದ ಗಾಯತ್ರಿ ಮಂತ್ರದ ಮಹತ್ವವನ್ನು ತಿಳಿಸುವ ಸಲುವಾಗಿ ಈ ವರ್ಷ ಗಾಯತ್ರಿ ಮಹೋತ್ಸವ ಆಚರಿ ಸಲು ನಿರ್ಧರಿಸಲಾಗಿದೆ ಎಂದರು.

ನೂತನ ಪದಾಧಿಕಾರಿಗಳ ಆಯ್ಕೆ: ಅಧ್ಯಕ್ಷರಾಗಿ ಡಾ.ಗಿರಿಧರ ಕಜೆ 5ನೇ ಬಾರಿಗೆ ಸರ್ವಾನುಮತದಿಂದ ಪುನರಾಯ್ಕೆಯಾದರು. ಉಪಾಧ್ಯಕ್ಷರಾಗಿ ಶ್ರೀಧರ ಜೆ.ಭಟ್‌ ಹಾಗೂ ಆರ್‌. ಎಂ.ಹೆಗಡೆ, ಪ್ರಧಾನ ಕಾರ್ಯದರ್ಶಿಯಾಗಿ ವೇಣು ವಿಘ್ನೇಶ ಸಂಪ, ಕಾರ್ಯದರ್ಶಿಗಳಾಗಿ ಪ್ರಶಾಂತ ಕುಮಾರ ಭಟ್‌ ಯಲ್ಲಾಪುರ ಹಾಗೂ ಶ್ರೀಧರ ಭಟ್‌ ಸಾಲೇಕೊಪ್ಪ, ಕೋಶಾಧಿಕಾರಿಯಾಗಿ ಕೃಷ್ಣಮೂರ್ತಿ ಎಸ್‌.ಭಟ್‌ ಆಯ್ಕೆಯಾದರು.

Advertisement

ನೂತನ ನಿರ್ದೇಶಕರು: ಉತ್ತರ ಕನ್ನಡ – ರಾಮಚಂದ್ರ ಗಣೇಶ ಹೆಗಡೆ, ರಾಮಚಂದ್ರ ಎಂ.ಹೆಗಡೆ, ಹಂಡ್ರಮನೆ ಗೋಪಾಲಕೃಷ್ಣ ಭಟ್‌. ಬೆಂಗಳೂರು – ಶ್ರೀಧರ ಭಟ್‌ ಕೆಕ್ಕಾರು, ಡಾ.ಗಿರಿಧರ ಕಜೆ, ಯು.ಎಸ್‌.ಜಿ.ಭಟ್‌, ಮೋಹನ ಭಾಸ್ಕರ ಹೆಗಡೆ, ನಾರಾಯಣ ಭಟ್‌ ಹುಳೇಗಾರು, ರಮಾನಾಥ ಹೆಗಡೆ. ಶಿವಮೊಗ್ಗ – ಬಾಲಸುಬ್ರಮಣ್ಯ ಕೆ., ಅಶೋಕ ಎಚ್‌.ಬಿ, ರಾಜಲಕ್ಷ್ಮೀ ದೇವಪ್ಪ. ಕೊಡಗು – ಪುರುಷೋತ್ತಮ ಡಿ.ಐ. ಕಾಸರಗೋಡು – ಗೋವಿಂದ ಭಟ್‌. ಹೊರರಾಜ್ಯ – ರಮಣ ಎಸ್‌. ಭಟ್‌.

Advertisement

Udayavani is now on Telegram. Click here to join our channel and stay updated with the latest news.

Next