Advertisement

ಅವಳಿಗಳ ಮೊದಲ ಮತದಾನಕ್ಕೆ ವೇದಿಕೆಯಾದ ಕಲಿತ ಶಾಲೆ

10:50 PM Apr 23, 2019 | sudhir |

ವಿದ್ಯಾನಗರ:ಭಾರತೀಯ ಪ್ರಜಾಪ್ರಭುತ್ವ ನೀತಿಯ ಸಬಲೀಕರಣಕ್ಕಾಗಿ ಮತ ಚಲಾಯಿಸಲು ಆಗಮಿಸಿದ ಅವಳಿಗಳ ಮೊದಲ ಮತದಾನಕ್ಕೆ ವೇದಿಕೆಯಾದುದು ತಾವು ಕಲಿಯುವ ಶಾಲೆ ಎನ್ನುವುದು ಇವರ ಸಂತೋಷವನ್ನು ಇಮ್ಮಡಿಗೊಳಿಸಿದೆ. ಚಟ್ಟಂಜಾಲ್‌ ಸರಕಾರಿ ಹೆ„ಯರ್‌ ಸೆಕೆಂಡರಿ ಶಾಲೆಯ 35ನೇ ನಂಬರಿನ ಮತಗಟ್ಟೆಯಲ್ಲಿ ಪ್ರಜಾಪ್ರಭುತ್ವ ನೀತಿಗೆ ಬೆಂಬಲ ನೀಡುವ ನಿಟ್ಟಿನಲ್ಲಿ ಅವಳಿಗಳಾದ ಅಶ್ವತಿ ಮತ್ತು ಆದಿರಾ ಮತದಾನಕ್ಕಾಗಿ ಆಗಮಿಸಿದ್ದರು. ಅಮ್ಮ ಪ್ರಸನ್ನ, ಅಜ್ಜಿ ದಾûಾಯಿಣಿ ಅವರೊಂದಿಗೆ ಕುಟುಂಬದ ಮೂರು ತಲೆಮಾರಿನವರು ಮತದಾನಕ್ಕೆ ಆಗಮಿಸಿದ್ದರು.

Advertisement

ತಾವು ಕಲಿಯುತ್ತಿರುವ ಶಾಲೆಯಲ್ಲೇ ಪ್ರಥಮ ಮತದಾನಕ್ಕೆ ಅವಕಾಶ ಲಭಿಸಿದ್ದು ಇವರಿಗೆ ಸಂತಸ ತಂದಿದೆ.ಈ ಶಾಲೆಯಲ್ಲಿ ಅವಳಿಗಳು ಪ್ಲಸ್ಟು ಕಲಿಕೆ ನಡೆಸಿ, ಪರೀಕ್ಷೆಯ ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ. ತೆಕ್ಕಿಲ್‌ ಮಹಾಲಕ್ಷ್ಮೀಪುರಂ ನಿವಾಸಿ ದಿ.ಕೆ.ಭಾಸ್ಕರನ್‌ ಅವರ ಮಕ್ಕಳಾದ ಈ ಅವಳಿಗಳು ಚುನಾವಣಾ ಗುರುತುಚೀಟಿ ಲಭಿಸಿದ ಮೇಲೆ ಮತದಾನಕ್ಕಾಗಿ ಕಾತರರಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next