ಅದು ತೆಹರಿಗಡ್ವಾಲ್ ಎಂಬ ಜಿಲ್ಲೆಯ ಗಂಗಾ ನದಿ ತಟದ ಒಂದು ಹಳ್ಳಿ. ಅಲ್ಲೇ ಒಂದು ಆಶ್ರಮ. ಸುಮಾರು 25 ಜನರಿದ್ದಿರಬಹುದು. ಒಬ್ಬರು ಖಾದಿ ದಿರಿಸಿನ, ತಲೆಯ ಮೇಲೆ ಬೆಳ್ಳನೆಯ ಕರ್ಚಿಪು ಕಟ್ಟಿಕೊಂಡ ಸಂತ ಇದ್ದರು. ಅವರೇ ಸುಂದರಲಾಲ್ ಬಹುಗುಣ. ಅವರ ಬಳಿ ಹೋಗಿ ಪರಿಚಯಿಸಿಕೊಂಡೆ. ಇಷ್ಟೆಲ್ಲ ಓದಿದವನು ನೌಕರಿಗೆ ಹೋಗುವುದಾದರೆ ಚಳವಳಿಗೆ ಬರುವುದು ಬೇಡ ಎಂದರು. ಮುಂದೆ ನೋಡೋಣ ಏನಾಗುತ್ತದೆ ಎಂದು ಸೇರಿಕೊಂಡೆ. ಅದೇ ನನ್ನ ಬದುಕಿಗೂ ಪ್ರೇರಣೆಯಾಯಿತು. ಇಷ್ಟು ದೂರ ನನ್ನನ್ನೂ ನಡೆಸಿತು.
Advertisement
ಗಾಂಧೀಜಿ ಅವರ ಸಾಬರಮತಿ ಆಶ್ರಮದಂತೆ ಬಹುಗುಣರದ್ದೂ ಸಿಲಿಯಾರದ ನವಜೀವನ ಆಶ್ರಮ. ಬೆಳಗ್ಗೆ ಪ್ರಾರ್ಥನೆ, ಆ ಬಳಿಕ ದೈಹಿಕ ಶ್ರಮ. ಅನಂತರ ಹೋರಾಟ. ಹೋರಾಟದ ಸಂಗತಿ ಜನರ ನಡುವೆ ಹಬ್ಬಿಸಲು ಪಾದಯಾತ್ರೆ ಹಮ್ಮಿಕೊಂಡಿದ್ದರು. ಅದರ ರೂಪುರೇಷೆಗಳ ಚರ್ಚೆ ಕೂಡ ನಡೆದಿದ್ದ ಕಾಲ. ನನಗೂ ಭಾಗವಹಿಸಲು ಅವಕಾಶ ಸಿಕ್ಕಿತು. ಮರಗಳ ಹನನದ ವಿರುದ್ಧ ಮರವನ್ನೇ ಬಿಗಿದಪ್ಪಿ ನಡೆಸುವ ಚಿಪ್ಕೋ ಚಳವಳಿ ಅದು. ವಂದನಾ ಶಿವ ಸೇರಿದಂತೆ ಇಂದಿನ ಪ್ರಮುಖ ಪರಿಸರ ಹೋರಾಟಗಾರರಿದ್ದರು.
ಪ್ರತಿಜ್ಞೆ ಮಾಡಿಸಿದ್ದರು. ಅದೇ ಅಪ್ಪಿಕೋ ಚಳವಳಿಗೆ ನಾಂದಿ ಆಯಿತು.
Related Articles
Advertisement
ಇದೇ ಮಾದರಿ ಹೋರಾಟ ದಕ್ಷಿಣ ಕನ್ನಡದಲ್ಲೂ ನಡೆಯಿತು. ಚಂಪಾ ದೈತೋಟರು ಕರೆಸಿದ್ದರು. ಕೊಡಗಿನಲ್ಲೂ ಆಯಿತು. ಸ್ನೇಹಕುಂಜದ ಕುಸುಮಕ್ಕನನ್ನೂ ಭೇಟಿ ಮಾಡಿ ಪರಿಸರದ ಮಾತುಕತೆ ಆಡುತ್ತಿದ್ದರು. ಅಲ್ಲಿನ ಚಿಪ್ಕೋ ಇಲ್ಲಿ ಅಪ್ಪಿಕೋ ಆಗಿ ಮುಂದುರಿಯಿತು. ಉತ್ತರ ಕನ್ನಡದ ಅಪ್ಪಿಕೋ ಅಭಿಯಾನ, ಪಾದಯಾತ್ರೆಯಿಂದ ಉಳಿಸು-ಬೆಳೆಸು-ಬಳಸು’ ಅಭಿಯಾನ ಶುರುವಾಯಿತು. ಅಂದಿನ ಸಿಎಂ ರಾಮಕೃಷ್ಣ ಹೆಗಡೆ ದೊಡ್ಮನೆ ಅವರನ್ನು ಭೇಟಿ ಮಾಡಿ ಅರಣ್ಯ ನೀತಿಯಲ್ಲಿನ ಬದಲಾವಣೆಗೂ ಮನವಿ ಮಾಡಿದ್ದರು. ಸರಕಾರಿ ನೀತಿಯಲ್ಲೂ ಬದಲಾವಣೆಗೆ ಕಾರಣರಾದರು ಬಹುಗುಣ.
ಪಶ್ಚಿಮ ಘಟ್ಟಕ್ಕೂ ಹೋರಾಟದ ಸ್ಪರ್ಶ 2008ರಲ್ಲಿ ಅಪ್ಪಿಕೋ ಚಳವಳಿಯ ರಜತ ಮಹೋತ್ಸವಕ್ಕೆ ಬಂದು ಮಕ್ಕಳ ಜತೆ ಸಂವಾದದಲ್ಲೂ ಪಾಲ್ಗೊಂಡಿದ್ದರು. ಅಲ್ಲಿಂದಲೇ ಪಶ್ಚಿಮ ಘಟ್ಟ ಉಳಿಸಿ ಅಭಿಯಾನಕ್ಕೂ ಚಾಲನೆ ಸಿಕ್ಕಿತು. ಖಾದಿ ಬಟ್ಟೆ ತೊಟ್ಟು, ಸರಳ ಹಿಂದಿಯಲ್ಲಿ ಮಾತನಾಡುತ್ತ, ಮನೆ ಮಂದಿಯಂತೆ ಸರಳವಾಗಿ, ಮುಗ್ಧ ಮಗುವಿನಂತೆ ಕೆಲಸ ಮಾಡುತ್ತಿದ್ದ ಬಹುಗುಣರು ಅನೇಕ ಕಾರ್ಯಕರ್ತರಿಗೆ, ಪರಿಸರದ ಆಸಕ್ತರಿಗೆ ಪ್ರೇರಣೆ ಆಗಿದ್ದರು. ಬಹುಗುಣರು ನನಗೆ ಇಷ್ಟವಾಗಿದ್ದು ಅವರ ಸರಳತೆ. ಮುಗ್ಧ ಮನಸ್ಸು, ಕ್ರಿಯಾಶೀಲತೆ, ಪರಿಸರ ಉಳಿಸುವ ತುಡಿತದಿಂದ. – ಪಾಂಡುರಂಗ ಹೆಗಡೆ, ಬಹುಗುಣರ ಒಡನಾಡಿ, ಪರಿಸರ ಹೋರಾಟಗಾರ