Advertisement

ಅಧ್ಯಕ್ಷ ಟ್ರಂಪ್‌ ಖಾತೆ ಡಿಲೀಟ್‌

09:52 AM Nov 04, 2017 | Team Udayavani |

ವಾಷಿಂಗ್ಟನ್‌: ಸಾಮಾಜಿಕ ಅಂತರ್ಜಾಲ ತಾಣ ಟ್ವಿಟರ್‌ನಲ್ಲಿ ಅತ್ಯಂತ ಸಕ್ರಿಯವಾಗಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಖಾತೆ ಕೆಲವು ನಿಮಿಷಗಳವರೆಗೆ ನಾಪತ್ತೆಯಾಗಿತ್ತು! ಟ್ರಂಪ್‌ ಖಾತೆಯನ್ನು ಡಿಲೀಟ್‌ ಮಾಡಲಾ ಗಿದೆಯೇ ಎಂಬ ಗುಸುಗುಸು ಏಳುತ್ತಿದ್ದಂ ತೆಯೇ, ಟ್ವಿಟರ್‌ ಕ್ಷಮೆ ಕೇಳಿ ಖಾತೆಯನ್ನು ಪುನಃ ಚಾಲ್ತಿಗೊಳಿಸಿದೆ. ಸುಮಾರು 11 ನಿಮಿಷಗಳ ಕಾಲ ಟ್ರಂಪ್‌ ಟ್ವಿಟರ್‌ ಖಾತೆಯೇ ಇರಲಿಲ್ಲ!

Advertisement

ಆರಂಭದಲ್ಲಿ “ಮಾನವ ಸಹಜ ದೋಷ ದಿಂದ ಖಾತೆ ಡಿಲೀಟ್‌ ಆಗಿದೆ’ ಎಂದು ಟ್ವಿಟರ್‌ ಹೇಳಿಕೊಂಡಿತ್ತು. ಆದರೆ ನಂತರ ಸ್ಪಷ್ಟನೆ ನೀಡಿದ ಸಂಸ್ಥೆ, ಇದು ಕೆಲಸ ತೊರೆದು ಹೋಗುತ್ತಿರುವ ಒಬ್ಬ ಉದ್ಯೋಗಿಯ ಉದ್ದೇಶಪೂರ್ವಕ ಕೃತ್ಯ ಎಂದಿದೆ.  ಈ ಬಗ್ಗೆ ಆಂತರಿಕ ತನಿಖೆಯನ್ನು ನಡೆಸುತ್ತಿದ್ದೇವೆ ಎಂದು ಸರಕಾರಕ್ಕೆ ಟ್ವಿಟರ್‌ ಹೇಳಿಕೆ ತಿಳಿಸಿದೆ. ಈ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಒಬ್ಬ ಸಾಮಾನ್ಯ ಟ್ವಿಟರ್‌ ಉದ್ಯೋಗಿಯು ಅಮೆರಿಕ ಅಧ್ಯಕ್ಷರ ಖಾತೆಯನ್ನು ಡಿಲೀಟ್‌ ಮಾಡಬಹುದೇ? ಒಂದು ವೇಳೆ ಏನನ್ನಾ ದರೂ ಟ್ವೀಟ್‌ ಮಾಡಿದ್ದರೆ ಅದರ ಪರಿಣಾಮ ವಿಪರೀತವಾಗಿರುತ್ತಿತ್ತು. ಇದು ಟ್ರಂಪ್‌ ಭದ್ರತೆಯ ವಿಚಾರದಲ್ಲಿ ಗಂಭೀರ ವಿಷಯ ವಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಇದೇ ವೇಳೆ, ಟ್ರಂಪ್‌ ವಿರೋಧಿಗಳು ಈ ಘಟನೆಗೆ ಕಾರಣನಾದ ಉದ್ಯೋಗಿಯನ್ನು ಶ್ಲಾ ಸಿದ್ದು, “ಎಲ್ಲ ಹೀರೋಗಳೂ ಕ್ಯಾಪ್‌ ಧರಿಸಿರುವುದಿಲ್ಲ. ಈ ಕೆಲಸ ಮಾಡಿದವನಿಗೆ ಮೆಡಲ್‌ ನೀಡಬೇಕು’ ಎಂದಿದ್ದಾರೆ. 

ಟ್ರಂಪ್‌ಗೆ ಟ್ವಿಟರ್‌ನಲ್ಲಿ 4.17 ಕೋಟಿ ಜನರು ಫಾಲೋವರ್‌ಗಳು ಇದ್ದಾರೆ. ಟ್ವಿಟರ್‌ನಲ್ಲಿ ಸಕ್ರಿಯವಾಗಿರುವ ಟ್ರಂಪ್‌, ಹೊಸ ನೀತಿಗಳು ಹಾಗೂ ಇತರ ಮಹತ್ವದ ನಿರ್ಧಾರಗಳನ್ನೂ ಟ್ವೀಟ್‌ ಮೂಲಕ ಪ್ರಕಟಿಸುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next