Advertisement

Mangaluru ಪೊಲೀಸರಿಗೆ ಸವಾಲಾದ ದರೋಡೆ ಪ್ರಕರಣ

11:10 PM Jun 26, 2024 | Team Udayavani |

ಮಂಗಳೂರು: ಕಳೆದ ಶುಕ್ರವಾರ ಮಂಗಳೂರು ಗ್ರಾಮಾಂತರ ಪೊಲೀಸ್‌ ಠಾಣಾ ವ್ಯಾಪ್ತಿಯ ಉಳಾಯಿಬೆಟ್ಟು ಪೆರ್ಮಂಕಿಯಲ್ಲಿ ಉದ್ಯಮಿ ಪದ್ಮನಾಭ ಕೋಟ್ಯಾನ್‌ ಅವರ ಮನೆಯಲ್ಲಿ ನಡೆದ ದರೋಡೆ ಪ್ರಕರಣ ಭೇದಿಸುವುದು ಮಂಗಳೂರು ಪೊಲೀಸರಿಗೆ ಸವಾಲಾಗುತ್ತಿದೆ.

Advertisement

ನಗರ ಅಪರಾಧ ಪತ್ತೆದಳದ ನೇತೃತ್ವದಲ್ಲಿ ಪೊಲೀಸ್‌ ತಂಡಗಳು ತನಿಖೆ ತೀವ್ರಗೊಳಿಸಿವೆ. ಆದರೆ ದರೋಡೆಕೋರರ ಜಾಡು ಹಿಡಿಯುವುದು ಸಾಧ್ಯವಾಗಿಲ್ಲ. ದರೋಡೆಗೆ ಬಳಸಿರುವ ಕಾರಿನ ಪತ್ತೆಗೆ ಕಾರ್ಯಾಚರಣೆ ಕೇಂದ್ರೀಕರಿಸಲಾಗಿದ್ದು ನಗರ ಹಾಗೂ ಹೊರವಲಯದ ಎಲ್ಲ ಆಯಕಟ್ಟಿನ ಸಿಸಿ ಕೆಮರಾಗಳ ದೃಶ್ಯ ಪರಿಶೀಲನೆ ನಡೆಸಲಾಗುತ್ತಿದೆ.

ದರೋಡೆಕೋರರು ಸಾಕಷ್ಟು ಯೋಜನಾಬದ್ದವಾಗಿಯೇ ಕೃತ್ಯ ಎಸಗಿದ್ದಾರೆ. ಬಾಡಿಗೆ ಕಾರು ಬಳಸಿರುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ ಎಂದು ಮೂಲಗಳು ತಿಳಿಸಿವೆ.

ಶೀಘ್ರ ಸೆರೆ ವಿಶ್ವಾಸ
ಇದುವರೆಗೆ ಲಭ್ಯವಾಗಿರುವ ಸುಳಿವಿನ ಬೆನ್ನು ಹತ್ತಿರುವ ಪೊಲೀಸರು ಪ್ರಕರಣವನ್ನು ಶೀಘ್ರ ಭೇದಿಸುವ ಪೂರ್ಣ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ನಾಲ್ಕು ದಿನಗಳಲ್ಲಿ ಸ್ಪಷ್ಟ ಚಿತ್ರಣ ಸಿಗುವ ವಿಶ್ವಾಸ ಪೊಲೀಸರಲ್ಲಿದೆ.

ಒತ್ತಡ
ದರೋಡೆ ನಡೆದು ವಾರ ಸಮೀಪಿಸುತ್ತಿದ್ದರೂ ಪ್ರಕರಣ ಭೇದಿಸದಿರುವುದರಿಂದ ಪೊಲೀಸರ ಮೇಲೆ ವಿವಿಧ ಕೋನಗಳಲ್ಲಿ ಒತ್ತಡಗಳು ಕೂಡ ಬರುತ್ತಿವೆ ಎಂದು ತಿಳಿದುಬಂದಿದೆ.

Advertisement

9 ಲ.ರೂ ಮೌಲ್ಯದ ಸೊತ್ತು
ದರೋಡೆಕೋರರು ಪದ್ಮನಾಭ ಕೋಟ್ಯಾನ್‌ ಅವರಿಗೆ ಚೂರಿಯಿಂದ ಇರಿದು ಅವರನ್ನು, ಪತ್ನಿ ಪುತ್ರನನ್ನು ಕಟ್ಟಿ ಹಾಕಿ 1.50 ಲ.ರೂ ನಗದು, ಚಿನ್ನಾಭರಣ ಸಹಿತ ಸುಮಾರು 9 ಲ.ರೂ. ಮೌಲ್ಯದ ಸೊತ್ತುಗಳನ್ನು ದರೋಡೆ ಮಾಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next