Advertisement
ಕೋಡಿಯಲ್ಲಿ ಸುಮಾರು 900 ಮೀ. ಹಾಗೂ ಗಂಗೊಳ್ಳಿಯಲ್ಲಿ 700 ಮೀ. ಉದ್ದದ 102 ಕೋ.ರೂ. ಬ್ರೇಕ್ ವಾಟರ್ ಕಾಮಗಾರಿ ಪೂರ್ಣಗೊಂಡಿದೆ. ಇದರಲ್ಲಿ ಗಂಗೊಳ್ಳಿ ಭಾಗದಲ್ಲಿ ತಡೆಗೋಡೆ ನಿರ್ಮಾಣಕ್ಕೆ ಭಾರೀ ಗಾತ್ರದ ಟೆಟ್ರಾಫೈಡ್‌ಗಳನ್ನು, ಘನ ಗಾತ್ರದ ಕಲ್ಲುಗಳನ್ನು ಸಾಗಾಟ ಮಾಡಲು ಘನ ವಾಹನಗಳು ಇಲ್ಲಿನ ಒಳ ರಸ್ತೆಗಳನ್ನು ಬಳಸಿಕೊಂಡಿದ್ದವು. ಈ ಘನ ಗಾತ್ರದ ವಾಹನಗಳ ಸಂಚಾರದಿಂದ ಈಗ ಬಂದರಿನ ಒಳಗಿನ ರಸ್ತೆಗಳೆಲ್ಲ ಸಂಪೂರ್ಣ ಹದಗೆಟ್ಟು ಹೋಗಿದೆ.
Related Articles
ಬಂದರಿನ ಒಳಗಿನ ರಸ್ತೆಯನ್ನು ಅವರ ಅಗತ್ಯಕ್ಕೆ ಬಳಸಿಕೊಂಡು, ರಸ್ತೆಯೆಲ್ಲ ಸಂಪೂರ್ಣ ಹಾಳಾಗಿದೆ. ದುರಸ್ತಿ ಮಾಡಿಕೊಡುವುದು ಅವರ ಜವಾಬ್ದಾರಿಯಾಗಿದೆ. ಈ ಬಗ್ಗೆ ಮೀನುಗಾರರೆಲ್ಲ 2 ಬಾರಿ ಸಭೆ ಸೇರಿ ರಸ್ತೆ ದುರಸ್ತಿಗೆ ಆಗ್ರಹಿಸಿದ್ದೇವು. ಆದರೂ ಯಾವುದೇ ಪ್ರಗತಿ ಮಾತ್ರ ಆಗಿಲ್ಲ. – ಅರುಣ್ ಕುಮಾರ್, ಮೀನುಗಾರ ಮುಖಂಡರು
Advertisement
ಶೀಘ್ರ ರಸ್ತೆ ಡಾಮರೀಕರಣಈ ಬಗ್ಗೆ ಬ್ರೇಕ್‌ವಾಟರ್ ಕಾಮಗಾರಿ ವಹಿಸಿಕೊಂಡಿರುವ ಗುತ್ತಿಗೆದಾರರಿಗೆ ವಾರದ ಹಿಂದೆ ನೋಟಿಸ್ ಕೂಡ ನೀಡಲಾಗಿದೆ. ಆದಷ್ಟು ಬೇಗ ರಸ್ತೆ ಕಾಮಗಾರಿಗೆ ಎಲ್ಲ ಕ್ರಮವಹಿಸಲಾಗುವುದು. 100 ಕೋ.ರೂ. ಪೈಕಿ 71 ಕೋ.ರೂ. ಅನುದಾನ ನೀಡಲಾಗಿದೆ. ಆದರೆ ಇನ್ನೂ ಬಾಕಿ 28 ಕೋ.ರೂ. ಅನುದಾನ ಬಾಕಿಯಿದೆ.
– ಉದಯಕುಮಾರ್, ಸಹಾಯಕ ಇಂಜಿನಿಯರ್, ಬಂದರು ಮತ್ತು ಮೀನುಗಾರಿಕಾ ಇಲಾಖೆ ಉಡುಪಿ ಸಂಸದರ ಸೂಚನೆ
ಈ ರಸ್ತೆಯನ್ನು ಅಭಿವೃದ್ಧಿಪಡಿಸಬೇಕು ಎನ್ನುವ ಗಂಗೊಳ್ಳಿಯ ಮೀನುಗಾರರ ಬೇಡಿಕೆಗೆ ಭೇಟಿ ಕೊಟ್ಟಿದ ಸಂಸದ ಬಿ.ವೈ. ರಾಘವೇಂದ್ರ ಅವರು ಸೂಚಿಸಿದ್ದು, ಇದಲ್ಲದೆ ರಸ್ತೆ ಅಭಿವೃದ್ಧಿಪಡಿಸದೇ ಬಾಕಿ ಉಳಿದ ಹಣವನ್ನು ಬಿಡು ಗಡೆ ಮಾಡಲು ಬಿಡುವುದಿಲ್ಲ ಎಂದು ಕೂಡ ತಿಳಿಸಿದ್ದರು. ಶಾಸಕ ಬಿ.ಎಂ. ಸುಕುಮಾರ್ ಶೆಟ್ಟಿ ಅವರು ಕೂಡ ರಸ್ತೆ ಅಭಿವೃದ್ಧಿಗೆ ಒತ್ತಾಯಿಸಿದ್ದರು. ಇತ್ತೀಚೆಗೆ ಬಂದರು ಮತ್ತು ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಇಲ್ಲಿಗೆ ಭೇಟಿ ನೀಡಿದ್ದಾಗಲೂ ರಸ್ತೆ ಕಾಮಗಾರಿ ಆಗದೇ ಬಾಕಿ ಹಣ ಬಿಡುಗಡೆ ಮಾಡುವುದಿಲ್ಲ ಎಂದು ಎಚ್ಚರಿಸಿದ್ದರು. ಬಂದರು ಕೂಡ ನಿರ್ಲಕ್ಷ್ಯ
ಇಲ್ಲಿನ ಬಂದರಿನ ಎರಡನೇ ಹರಾಜು ಪ್ರಾಂಗಣದ ಜೆಟ್ಟಿ ಕುಸಿದು ಒಂದೂವರೆ ವರ್ಷಗಳೇ ಕಳೆದರೂ, ಇನ್ನೂ ಇದರ ಅಭಿವೃದ್ಧಿ ಕುರಿತಂತೆ ಯಾವುದೇ ಕ್ರಮಕೈಗೊಂಡಿಲ್ಲ. ಇದರ ಮರು ನಿರ್ಮಾಣಕ್ಕಾಗಿ 12 ಕೋ.ರೂ. ಅನುದಾನದ ಅಗತ್ಯವಿದೆಯೆಂದು ಇಂಜಿನಯರ್‌ಗಳು ವರದಿ ತಯಾರಿಸಿ ಸರಕಾರಕ್ಕೆ ಸಲ್ಲಿಸಿದ್ದು, ಅದಕ್ಕಿನ್ನು ಪ್ರಸ್ತಾವನೆ ಸಿಗಬೇಕಿದೆ.