Advertisement

ಸುಲಲಿತ ಶ್ರೀಮಂತ ಭಾಷೆ ಕನ್ನಡ: ಹಳ್ಳಿ

02:01 PM Nov 13, 2021 | Team Udayavani |

ಶಹಾಬಾದ: ಅತ್ಯಂತ ಸರಳ, ಸುಲಲಿತ ಶ್ರೀಮಂತ ಭಾಷೆಯಾದ ಕನ್ನಡವನ್ನು ಬಳಸಿ ಉಳಿಸುವ ಕೆಲಸವನ್ನು ಪ್ರತಿಯೊಬ್ಬ ನಾಗರಿಕರು ಮಾಡಬೇಕು ಎಂದು ದಸಂಸ ರಾಜ್ಯ ಸಂಘಟನಾ ಸಂಚಾಲಕ ಮರಿಯಪ್ಪ ಹಳ್ಳಿ ಹೇಳಿದರು.

Advertisement

ಶುಕ್ರವಾರ ತಾಲೂಕಿನ ಹೊನಗುಂಟಾ ಗ್ರಾಮದಲ್ಲಿ ಕರವೇ ತಾಲೂಕಾ ಘಟಕದ ವತಿಯಿಂದ ಆಯೋಜಿಸಲಾಗಿದ್ದ ಹೊನಗುಂಟಾ ಕನ್ನಡ ಉತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಅಂದು ಕನ್ನಡದ ಜಾಗೃತಿ, ಅಸ್ಮಿತೆ ಮೂಡಿಸಿದ 1982ರ ಗೋಕಾಕ್‌ ಚಳವಳಿಯ ಸ್ಮರಣೆಯನ್ನು ನಾವು ಮಾಡಿಕೊಳ್ಳಬೇಕಿದೆ. ಕಾರಣ ಸಾಮಾನ್ಯ ಜನತೆಯಲ್ಲೂ ಕನ್ನಡ ಜಾಗೃತಿ ಮೂಡಿಸಿದ್ದ ಗೋಕಾಕ್‌ ಚಳವಳಿ ಡಾ| ರಾಜಕುಮಾರ ಪಾಲ್ಗೊಳ್ಳುವಿಕೆಯಿಂದ ಮನೆ ಮನೆಗೂ ತಲುಪುವಂತಾಗಿತ್ತು. ಈ ಯಶಸ್ವಿ ಚಳವಳಿ ಮೆಲುಕು ಹಾಕಿ, ಕನ್ನಡವನ್ನು ರಕ್ಷಣೆ ಮಾಡುವಲ್ಲಿ ಕನ್ನಡಪರ ಸಂಘಟನೆಗಳು ಮುಂದಾಗಬೇಕೆಂದು ಹೇಳಿದರು.

ಕರವೇ ಉತ್ತರ ಕರ್ನಾಟಕ ಅಧ್ಯಕ್ಷ ಶರಣು ಗದ್ದುಗೆ ಮಾತನಾಡಿ, ನಮ್ಮ ನಾಡಿನ ಭಾಷೆ, ನೆಲ ಮತ್ತು ಜಲ ವಿಷಯಕ್ಕೆ ಧಕ್ಕೆಯುಂಟಾದರೆ ಕರವೇ ಅದರ ರಕ್ಷಣೆ ಮಾಡುವುದಲ್ಲದೇ, ಅದಕ್ಕಾಗಿ ಯಾವ ತ್ಯಾಗಕ್ಕಾದರೂ ಕರವೇ ಕಾರ್ಯಕರ್ತರು ಸಿದ್ಧ ಎಂದರು.

ರಾವೂರಿನ ಸಿದ್ಧಲಿಂಗೇಶ್ವರ ಸಂಸ್ಥಾನ ಮಠದ ಸಿದ್ಧಲಿಂಗ ದೇವರು ಸಾನ್ನಿಧ್ಯ ವಹಿಸಿದ್ದರು. ಕರವೇ ತಾಲೂಕಾಧ್ಯಕ್ಷ ವಿಶ್ವರಾಜ ಫಿರೋಜಬಾದ, ಹೊನಗುಂಟಾ ಗ್ರಾಪಂ ಅಧ್ಯಕ್ಷೆ ಭೀಮಬಾಯಿ ಮಲ್ಲಪ್ಪ, ವಿಶ್ವಜ್ಯೋತಿ ಪ್ರತಿಷ್ಠಾನದ ಅಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸುರೇಶ ಬಡಿಗೇರ, ಶಿಕ್ಷಕ ಸಿದ್ಧಲಿಂಗ ಬಾಳಿ, ಸೋಮಶೇಖರ ನಂದಿಧ್ವಜ, ಬಿಜೆಪಿ ಮುಖಂಡ ರವಿ ವಿಠ್ಠಲ ನಾಯಕ, ದೇವೆಂದ್ರ ಕಾರೊಳ್ಳಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ಶಿವಪುತ್ರ ಕರಣಿಕ್‌, ಕರವೇ ಜಿಲ್ಲಾಧ್ಯಕ್ಷ ಸಂತೋಷ ಚೌಧರಿ, ಗೌರವಾಧ್ಯಕ್ಷ ಮಂಜು ಕುಸನೂರ, ಚಿತ್ತಾಪುರ ಕರವೇ ಅಧ್ಯಕ್ಷ ನರಹರಿ ಕುಲಕರ್ಣಿ, ಬಿಜೆಪಿ ಮುಖಂಡ ಬಸವರಾಜ ಮದ್ರಿಕಿ, ಕುರುಬ ಸಮಾಜದ ತಾಲೂಕಾಧ್ಯಕ್ಷ ಮಲ್ಕಣ್ಣ ಮುದ್ದಾ, ಎಎಸ್‌ಐ ಸಾತಲಿಂಗಪ್ಪ, ವಾಡಿ ಕರವೇ ಅಧ್ಯಕ್ಷ ಸಿದ್ಧು ಪೂಜಾರಿ, ವಿವಿಧ ವಲಯದ ಅಧ್ಯಕ್ಷರಾದ ಶ್ರೀನಿವಾಸ ವಗ್ಗರ್‌, ನಾಗೇಂದ್ರ ಜಡಿ, ಗ್ರಾಪಂ ಸದಸ್ಯ ಸಂಗಣ್ಣ ಇಜೇರಿ, ಸಿದ್ಧು ವಾರಕರ್‌, ಪೂಜಪ್ಪ ಮೇತ್ರೆ, ಮರೆಪ್ಪ ಮೇತ್ರೆ, ಮಲ್ಲೇಶಿ ಭಜಂತ್ರಿ, ರಾಯಪ್ಪ ಹುರಮುಂಜಿ ಮತ್ತಿತರರು ಇದ್ದರು.

Advertisement

ಹೊನಗುಂಟಾ ಗ್ರಾಮದ ಮುಖಂಡ ಭೀಮಾಶಂಕರ ಖೇಣಿ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಶಿಕ್ಷಕರಾದ ಎಚ್‌. ವೈ.ರಡ್ಡೇರ್‌, ಲಿಯಾಕತ್‌ ಅಲಿಖಾನ್‌, ಪಿಡಿಒ ನಿಂಗಣ್ಣ ಇಂಗಳಗಿ, ರಾಜ್ಯಮಟ್ಟದ ಕ್ರೀಡಾಪಟು ಸಾಯಬಣ್ಣ ಇಜೇರಿ, ಪ್ರತಿಭಾವಂತ ವಿದ್ಯಾರ್ಥಿಯಾದ ಮೌನೇಶ ನಿಂಗಣ್ಣ ಹಾಗೂ ಅಂಗನವಾಡಿ, ಆಶಾ ಕಾರ್ಯಕರ್ತರನ್ನು ಸನ್ಮಾನಿಸಲಾಯಿತು. ಶರಣು ಎಂ.ಗೋಳಾ ನಿರೂಪಿಸಿದರು, ಉಪನ್ಯಾಸಕ ಪೀರಪಾಶಾ ಸ್ವಾಗತಿಸಿದರು, ಮಲ್ಲೇಶಿ ಭಜಂತ್ರಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next