Advertisement

ಕಾರನ್ನೇ ಮೂರು ಬಾರಿ ಪಲ್ಟಿ ಮಾಡಿ ಚಟ್ನಿ ಮಾಡಿದ ಖಡ್ಗಮೃಗ!

10:03 AM Aug 30, 2019 | Hari Prasad |

ಹೂಡೆನ್‌ ಹೆಗೆನ್: ಕೋಪ ಬಂದರೆ ಕಾಡು ಪ್ರಾಣಿಗಳು ಏನು ಮಾಡುತ್ತವೆ ಎನ್ನುವುದು ತಿಳಿಯಲಾರದು. ಇನ್ನು ಶಕ್ತಿಶಾಲಿ ಪ್ರಾಣಿಯಾದ ಖಡ್ಗಮೃಗ ಬಗ್ಗೆ ಕೇಳಬೇಕೆ? ಜರ್ಮನಿಯ ಹೂಡೆನ್‌ ಹೆಗೆನ್ ಎಂಬಲ್ಲಿ ಅದ್ಯಾಕೋ ಘೇಂಡಾಮೃಗಕ್ಕೆ ಕೋಪಬಂದಿದ್ದು, ಎದುರಿಗೆ ಸಿಕ್ಕಿದ ಕಾರನ್ನು ಮೂರು ಬಾರಿ ಪಲ್ಟಿ ಮಾಡಿದೆ.

Advertisement

ಈ ಖಡ್ಗಮೃಗ ಇಲ್ಲಿನ ಸೆರೆಂಗೆಟಿ ಸಾರಿಗೆ ಸೇರಿದ್ದು, 30 ವರ್ಷ ವಯಸ್ಸಿನದ್ದು. ಅದರ ಹೆಸರು ಕ್ಯುಸಿನಿ. ಕಾರನ್ನು ಚಾಲನೆ ಮಾಡಿಕೊಂಡು ಸಾರಿಯ ಪಾಲಕನೊಬ್ಬ ಬಂದಿದ್ದು, ಆತ ಕಾರಿನಲ್ಲಿದ್ದಾಗಲೇ ಎದುರಾದ ಖಡ್ಗಮೃಗ ತನ್ನ ತಾಕತ್ತು ಪ್ರದರ್ಶಿಸಿದೆ.

ಪಾರ್ಕ್‌ಗೆ ಪ್ರವಾಸ ಬಂದ ಪ್ರವಾಸಿ ಇಗೋರ್ ಪಿಟ್ರೋವ್ ಎಂಬವರು  ಖಡ್ಗಮೃಗದ ಕೋಪವನ್ನು ವೀಡಿಯೋ ಮಾಡಿದ್ದಾರೆ. ಅದರ ಕೋಪಕ್ಕೆ ಕಾರು ಪುಡಿಯಾಗಿದೆ. ಈ ಕ್ಯುಸಿನಿ ಯಾಕೆ ಹೀಗೆ ಮಾಡಿತು ಎಂದು ಯಾರಿಗೂ ತಿಳಿದಿಲ್ಲ. 18 ತಿಂಗಳ ಹಿಂದೆ ಅದು ಪಾರ್ಕ್‌ಗೆ ಬಂದಿದ್ದು, ಇಲ್ಲಿಯತನಕ ಈ ಖಡ್ಗಮೃಗ ಪ್ರವಾಸಿಗರಿಗೆ ಯಾವುದೇ ಹಾನಿ ಮಾಡಿಲ್ಲ ಎಂದು ಪಾರ್ಕ್‌ನ ಅಧೀಕ್ಷಕರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next