Advertisement
ಕೊಲ್ಯ ಬಳಿ ವಾಹನಗಳ ಬಾಡಿ ವರ್ಕ್ಸ್ನ ಗ್ಯಾರೇಜ್ ಹೊಂದಿದ್ದ ವಿಕ್ರಮ್‌ಗೆ ಆರ್ಥಿಕವಾಗಿ ಯಾವುದೇ ಸಮಸ್ಯೆಗಳಿರಲಿಲ್ಲ. ಕೊಣಾಜೆ ಪುಳಿಂ ಚಾಡಿ ಬಳಿ ಪತ್ನಿಯ ಪಿತ್ರಾರ್ಜಿತ ಜಾಗದಲ್ಲಿ ಮನೆ ಕಟ್ಟಿಸಿದ್ದರು.
ವಿಕ್ರಮ್‌ನ ಕಾರು ನೇತ್ರಾವತಿ ಸೇತುವೆ ಬಳಿ ಪತ್ತೆಯಾಗಿದ್ದು, ಅದರ ಬಾಗಿಲು ತೆರೆದ ಸ್ಥಿತಿಯಲ್ಲಿತ್ತು. ಲೈಟ್ ಉರಿಯುತ್ತಿತ್ತು ಹಾಗೂ ಮತ್ತು ಎಂಜಿನ್ ಚಾಲನಾ ಸ್ಥಿತಿಯಲ್ಲಿತ್ತು. ಕಂಕನಾಡಿ ಪೊಲೀಸರು ಆಗಮಿಸಿ ಪರಿಶೀಲಿಸಿದಾಗ ವಿಕ್ರಮ್‌ಗೆ ಸೇರಿದ ಬ್ಯಾಂಕ್ ಪುಸ್ತಕ, ಕಾರಿನ ದಾಖಲೆ ಮತ್ತು ಪಾನ್ ಕಾರ್ಡ್ ಪತ್ತೆಯಾ ಗಿದೆ. ಅದರ ಆಧಾರದಲ್ಲಿ ಆತನ ಮನೆಯ ವರನ್ನು ಸಂಪರ್ಕಿಸಿ ಶೋಧ ಕಾರ್ಯ ಆರಂಭಿಸಿದ್ದಾರೆ. ವಿಕ್ರಮ್ ಮೊಬೈಲ್ ಕೂಡ ಸ್ವಿಚ್ ಆಫ್ ಬರುತ್ತಿದೆ. ಶಾಸಕ ಖಾದರ್ ಆಗ ಮಿಸಿ ಪರಿಶೀಲಿಸಿದ್ದು, ಸಿಸಿಟಿವಿ ಮತ್ತು ತಂತಿ ಬೇಲಿ ಅಳವಡಿಕೆಗೆ ಆಗ್ರಹಿಸಿದರು.
Related Articles
ಉಳ್ಳಾಲ ಸೇತುವೆಯ ಇಕ್ಕೆಲಗಳಲ್ಲಿ ತಂತಿ ಬೇಲಿ ಹಾಗೂ ಸಿಸಿಟಿವಿ ಅಳವಡಿಕೆ ಕಾಮಗಾರಿಗೆ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಈ ವಾರದಲ್ಲೇ ಟೆಂಡರ್ ಕರೆಯಲಾಗುವುದು ಎಂದು ಶಾಸಕ ವೇದವ್ಯಾಸ್ ಕಾಮತ್ ತಿಳಿಸಿದ್ದಾರೆ.
Advertisement