Advertisement

ಉಗ್ರ ಸಂಘಟನೆಗೆ ಸೇರಿದ ಸಂಶೋಧನಾ ವಿದ್ಯಾರ್ಥಿ

06:50 AM Jan 09, 2018 | Harsha Rao |

ಹೊಸದಿಲ್ಲಿ: ಅಲಿಗಢ ಮುಸ್ಲಿಂ ವಿವಿಯಲ್ಲಿ ಭೂಗರ್ಭ ಶಾಸ್ತ್ರದಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿದ್ದ ಮನ್ನಾನ್‌ ಬಶೀರ್‌ ವಾನಿ ಎಂಬಾತ ರಜೆಗೆಂದು ಕಾಶ್ಮೀರಕ್ಕೆ ತೆರಳಿದ್ದವನು ಹಿಜ್ಬುಲ್‌ ಮುಜಾಹಿದೀನ್‌ ಉಗ್ರ ಸಂಘಟನೆಗೆ ಸೇರಿರುವ ವಿಷಯ ಬೆಳಕಿಗೆ ಬಂದಿದೆ. ಬಶೀರ್‌ ಬಂದೂಕು ಹಿಡಿದಿರುವ ಫೋಟೋ ಜಾಲತಾಣಗಳಲ್ಲಿ ಹರಿದಾಡುತ್ತಿದೆ. 

Advertisement

ಕಳೆದ ವರ್ಷ ಶ್ರೀನಗರಕ್ಕೆ ತೆರಳುತ್ತಿದ್ದಾಗ ಸೇನಾ ಸಿಬಂದಿ ನನ್ನನ್ನು ಅವಮಾನಿಸಿದ್ದರು ಎಂದು ಆತ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದ. ಆ ಘಟನೆಯೇ ಆತ ಉಗ್ರ ಸಂಘಟನೆಗೆ ಸೇರಲು ಪ್ರೇರೇಪಿಸಿರಬಹುದು ಎಂದು ಆತನ ಸ್ನೇಹಿತರೊಬ್ಬರು ಹೇಳಿದ್ದಾರೆ. ಮೂಲತಃ ಆತ ಮಾನವ ಹಕ್ಕುಗಳ ಪ್ರತಿಪಾದಕ. ಆತ ಉಗ್ರ ಸಂಘಟನೆಗೆ ಸೇರಿದ್ದು ನಮಗೂ ಆಶ್ಚರ್ಯ ತರಿಸಿದೆ ಎಂದು ಸ್ನೇಹಿತರು ತಿಳಿಸಿದ್ದಾರೆ. ಘಟನೆ ಹಿನ್ನೆಲೆಯಲ್ಲಿ ಅಲಿಗಡ ವಿವಿಯಿಂದ ವಾನಿಯನ್ನು ವಜಾ ಮಾಡಲಾಗಿದೆ.

ಈ ನಡುವೆ, ಶ್ರೀನಗರದಲ್ಲಿ ಕ್ರಿಕೆಟ್‌ ಪಂದ್ಯಕ್ಕೂ ಮುನ್ನ ಪಾಕಿಸ್ಥಾನದ ರಾಷ್ಟ್ರಗೀತೆ ಹಾಡಿದ ಆರೋಪದಲ್ಲಿ ನಾಲ್ವರು ವಿದ್ಯಾರ್ಥಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next