Advertisement

ಗಾಂಧೀಜಿ ಅಪರೂಪದ ಛಾಯಾಚಿತ್ರ ಪ್ರದರ್ಶನ

03:55 PM Nov 04, 2019 | Suhan S |

ಕಾರವಾರ: ಮಹಾತ್ಮಾಗಾಂಧೀಜಿ ಅಪರೂಪದ ಛಾಯಾಚಿತ್ರ ಪ್ರದರ್ಶನಕ್ಕೆ ಜಿಲ್ಲಾಧಿಕಾರಿ ಡಾ| ಹರೀಶಕುಮಾರ ಗಾಂಧಿ ಪ್ರತಿಮೆಗೆ ಹೂಹಾರ ಹಾಕುವ ಮೂಲಕ ಚಾಲನೆ ನೀಡಿದರು.

Advertisement

ಹಾಗೂ ಗಾಂಧಿಜೀ ಜೀವನ ಕಟ್ಟಿಕೊಡುವ ಛಾಯಚಿತ್ರಗಳನ್ನು ವೀಕ್ಷಿಸಿದರು. ಜಿಲ್ಲಾ ರಂಗಮಂದಿರದಲ್ಲಿ ಏರ್ಪಟ್ಟಿರುವ ಜಿಲ್ಲಾ ವಾರ್ತಾಧಿಕಾರಿ ಹಿಮಂತರಾಜು ಗಾಂಧೀಜಿ ಅಪರೂಪದ ಛಾಯಾಚಿತ್ರಗಳ ಕುರಿತು ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಪರಿಚಯಿಸಿದರು.

ಮಹಾತ್ಮಾ ಗಾಂಧೀಜಿ ಜೀವನದ ಪ್ರಮುಖ ಘಟನೆಗಳ ಆಧಾರಿತ ಅಪರೂಪದ ಛಾಯಾಚಿತ್ರಗಳು ಹಾಗೂ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಕಾರವಾರ ಸೇರಿದಂತೆ ರಾಜ್ಯದ ವಿವಿಧ ಸ್ಥಳಗಳಿಗೆ ಮಹಾತ್ಮಾ ಗಾಂಧೀಜಿ ಭೇಟಿ ನೀಡಿದ ಅಪರೂಪದ ಛಾಯಾಚಿತ್ರಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ.

ಛಾಯಾಚಿತ್ರ ಪ್ರದರ್ಶನವನ್ನು ಹೆಚ್ಚು ಆಕರ್ಷಕಗೊಳಿಸಲು ಕರಕುಶಲ ಪಾರಂಪರಿಕ ಕಂಬಗಳನ್ನು ವಿನ್ಯಾಸಗೊಳಿಸಿ, ಸುವರ್ಣ ಚೌಕಟ್ಟಿನ ಅಲಂಕೃತ ಫ್ರೇಮನಲ್ಲಿ ಗಾಂಧೀಜಿ ಜೀವನ ಚರಿತ್ರೆ ಹಾಗೂ ಸ್ವಾತಂತ್ರ್ಯ ಹೋರಾಟದ ಕಪ್ಪು ಬಿಳುಪಿನ ಛಾಯಾಚಿತ್ರಗಳನ್ನು ಪ್ರದರ್ಶಿಸಲಾಗುತ್ತಿದೆ. ಸ್ವಾತಂತ್ರ್ಯ ಚಳವಳಿಯಲ್ಲಿ ಹೆಜ್ಜೆ ಹಾಕುತ್ತಿರುವ ಮಹಾತ್ಮಾ ಗಾಂಧೀಜಿ ಪ್ರತಿಮೆ ವಿಶೇಷ ಆಕರ್ಷಣೆಯಾಗಿದೆ. ಮರದಿಂದ ತಯಾರಿಸಿದ ಚರಕ ಎಲ್ಲರ ಗಮನ ಸೆಳೆಯುತ್ತಿದ್ದು, ಮಕ್ಕಳಿಂದ ಹಿಡಿದು ಹಿರಿಯ ಅಧಿಕಾರಿ ವರ್ಗದವರೆಗೂ ಸೆಲ್ಫಿ  ತೆಗೆದುಕೊಂಡು ಖುಷಿ ಪಟ್ಟರು. ಸಾಕ್ಷ್ಯಚಿತ್ರ ಪ್ರದರ್ಶನವನ್ನು ಎಲ್‌ಇಡಿ ಟಿ.ವಿ ಮೂಲಕ ಬಿತ್ತರಿಸಲಾಯಿತು.

ಮಹಾತ್ಮಾ ಗಾಂಧೀಜಿ ಬಾಲ್ಯ ಶೈಕ್ಷಣಿಕ ಜೀವನ, ವಿದೇಶ ಪ್ರವಾಸ, ಸ್ವಾತಂತ್ರ್ಯ ಹೋರಾಟ, ಉಪ್ಪಿನ ಸತ್ಯಾಗ್ರಹ, ಪ್ರಾಣಿಗಳ ಮೇಲೆ ಇರುವ ಪ್ರೀತಿ, ಇಂಡಿಯನ್‌ ಓಪಿನಿಯನ್‌, ಯಂಗ್ಇಂಡಿಯಾ ಹಾಗೂ ಹರಿಜನ ಪತ್ರಿಕೆಗಳನ್ನು ಮುನ್ನೆಡಿಸಿದ ಪತ್ರಿಕಾ ಜೀವನ, ಪತ್ನಿ ಕಸ್ತೂರ ಬಾ ಹಾಗೂ ಗುಂಡೇಟಿನಿಂದ ಹೇ ರಾಮ ಎಂದು ಕೊನೆಯುಸಿರೆಳೆದ ಕ್ಷಣದ ವರೆಗಿನ ಮಾಹಿತಿ ನೀಡುವ ಅಪರೂಪದ ಛಾಯಾಚಿತ್ರಗಳು ಸಾರ್ವಜನಿಕರನ್ನು ಆಕರ್ಷಿಸುತ್ತಿವೆ. ಈ ಛಾಯಾಚಿತ್ರಗಳ ಪ್ರದರ್ಶನ ನ.5 ವರೆಗೆ ನಡೆಯಲಿದೆ. ಶಾಲಾ ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಕರು ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಿಸಿ ಸದುಪಯೋಗ ಪಡಿಸಿಕೊಳ್ಳಬೇಕೆಂದು ವಾರ್ತಾ ಇಲಾಖೆ ವಿನಂತಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next