Advertisement

ಅಪರೂಪದ ಮದುವೆ: 38 ಇಂಚು ಎತ್ತರದ ವರನಿಗೆ, 5.3 ಅಡಿ ಎತ್ತರದ ವಧು: ಕೂಡಿಬಂದ ಕಂಕಣ ಭಾಗ್ಯ

12:29 PM Feb 21, 2022 | Team Udayavani |

ಕುಳಗೇರಿ ಕ್ರಾಸ್:ನೀಲಗುಂದ ಗ್ರಾಮದ ಬಸವೇಶ್ವರ ದೇವಸ್ಥಾನದ ಸನ್ನಿಧಿಯಲ್ಲಿ ಭಾನುವಾರ ಅಪರೂಪದ ಮದುವೆ ನಡೆಯಿತು.

Advertisement

ವರನ ಎತ್ತರ 38″ ಇಂಚು ಇದ್ದರೆ, ವಧುವಿಗೆ 5.3 ಅಡಿ ಎತ್ತರ ಇದ್ದಾರೆ. ಗ್ರಾಮಸ್ಥರು ಸೇರಿದಂತೆ ಇಬ್ಬರ ಮನೆಯವರು ಈ ಮದುವೆಗೆ ಒಪ್ಪಿಗೆ ನೀಡಿ ಹಿಂದೂ ಸಂಪ್ರದಾಯದಂತೆ ಗ್ರಾಮದ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಮದುವೆ ಮಾಡಿಸಿದರು.

ಬಾದಾಮಿ ತಾಲೂಕಿನ ನೀಲಗುಂದ ಗ್ರಾಮದ 38 ಇಂಚು ಎತ್ತರದ ಬಸವರಾಜನಿಗೆ 30 ವಯಸ್ಸು. ಕುಬ್ಜನಾಗಿದ್ದ ಬಸವರಾಜ ಕುಂಬಾರ ಕನ್ಯೆಗಾಗಿ ಹುಡುಕುತ್ತಿದ್ದ, ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಗಣಿ ಗ್ರಾಮದಲ್ಲಿನ 22 ವಯಸ್ಸಿನ ಯುವತಿ ರುಕ್ಮಿಣಿಯೊಂದಿಗೆ ಮದುವೆ ಮಾಡಿಸಿದ್ದಾರೆ.

ತಾನೆ ಒಪ್ಪಿ ಯುವಕನನ್ನು ವರಿಸಲು ಮುಂದಾದ ರುಕ್ಮಿಣಿ, ಬಸವರಾಜ ಜೊತೆ ಮದುವೆಯಾಗಿ ಹೊಂದಾಣಿಕೆಯಿಂದ ಜೀವನ ನಡೆಸುತ್ತೆನೆ. ಯಾರ ಒತ್ತಡವೂ ಇಲ್ಲ ಪ್ರೇಮದಿಂದಲೇ  ಮದುವೆಯಾಗುತ್ತಿದ್ದೇನೆ ಎಂದು ರುಕ್ಮಿಣಿ ಹೇಳಿಕೊಂಡರು.

5 ವರ್ಷಗಳಿಂದ ನನ್ನ ಮಗನಿಗೆ ಕನ್ಯಾ ನೋಡುತ್ತಿದ್ದೆ ಆದರೂ ಸಿಕ್ಕಿರಲಿಲ್ಲ. ಈಗ ಎಲ್ಲರಂತೆ ನನ್ನ ಮಗನಿಗೆ ಕನ್ಯಾ ಸಿಕ್ಕಿದೆ ಮದುವೆಯು ನಡೆಯಿತು ಎಂದು ಸಂತಸಗೊಂಡ ಬಸವರಾಜನ ತಾಯಿ ಶಾಂತಮ್ಮ ನನಗಂತು ಬಹಳ ಖುಷಿಯಾಗಿದೆ ಎಂದರು.

Advertisement

ಇಂದು ನಮ್ಮೂರಲ್ಲಿ ನಡೆದ ಮದುವೆ ಬಹಳ ವಿಶೇಷವಾದದ್ದು. ಇಬ್ಬರ ಮನೆಯವರ ಒಪ್ಪಿಗೆಯನ್ನು ಪಡೆದು ಮದುವೆ ಮಾಡಿಸಿದ್ದೇವೆ, ಮುಖಂಡರು ಗ್ರಾಮಸ್ಥರು ಸೇರಿದಂತೆ 600 ಕ್ಕೂ ಹೆಚ್ಚು ಜನ ಪಾಲ್ಗೊಂಡು ಶುಭ ಹಾರೈಸಿದರು. –ನೀಲಗುಂದ  ಮಲ್ಲಪ್ಪ ಸೋಮಪ್ಪ ಹೂಗಾರ ಗ್ರಾಪಂ ಮಾಜಿ ಅಧ್ಯಕ್ಷ

ನನ್ನ ಸಹೋದರನಂತಿರುವ ಬಸವರಾಜನಿಗೆ ಮದುವೆ ಕುರಿತು ಎಲ್ಲರು ವ್ಯಂಗ್ಯ ಮಾಡುತ್ತಿದ್ದರು ಆದರೆ ಇಂದು ಅವನಿಗೆ ಮದುವೆಯಾಗಿದ್ದು ಇಡಿ ಗ್ರಾಮಸ್ಥರಿಗೆ ಸಂತಸ ತಂದಿದೆ. –ಟಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷರು

 

Advertisement

Udayavani is now on Telegram. Click here to join our channel and stay updated with the latest news.

Next