Advertisement
ಅಮೆರಿಕಾದ ಖ್ಯಾತ ಗಾಯಕಿ ಟೇಲರ್ ಸ್ವಿಫr… ತನ್ನ ಹೊಸ ಆಲ್ಬಮ್ “ರೆಪ್ಯೂಟೇಷನ್’ ಅನ್ನು ಬಿಡುಗಡೆ ಮಾಡಿದ್ದೇ ತಡ, ಅಭಿಮಾನಿಗಳಲ್ಲಿ ಹೊಸದೊಂದು ಹುಚ್ಚೆದ್ದಿದೆ. ಜನರನ್ನು ಮರುಳು ಮಾಡಿರುವುದು ಆ ಆಲ್ಬಮ್‌ನಲ್ಲಿರುವ ಹಾಡುಗಳಷ್ಟೇ ಅಲ್ಲ, ಆಲ್ಬಮ್ ಪೋಸ್ಟರ್‌ನಲ್ಲಿ ಗಾಯಕಿ ಸ್ವಿಫ್ಟ್ ಟೇಲರ್ ಸ್ವಿಫr… ತೊಟ್ಟ ಉಡುಪು ಕೂಡ. ಅದು ವಸ್ತ್ರ ವಿನ್ಯಾಸಕರ ಮೆಚ್ಚುಗೆಯನ್ನೂ ಪಡೆದಿದೆ. ಅದ್ಯಾವ ಉಡುಪು ಅಂತೀರಾ? ಅದುವೇ ರೇನ್‌ಬೋ ಡ್ರೆಸ್.
ಈ ಟ್ರೆಂಡ್ ಅನ್ನು ಡ್ರೆಸ್, ಅಂಗಿ, ಸ್ಕರ್ಟ್ (ಲಂಗ), ಪ್ಯಾಂಟ್, ಗೌನ್, ಶಾರ್ಟ್ಸ್ ಮುಂತಾದವುಗಳಲ್ಲಿ ಅಳವಡಿಸಲಾಗಿದೆ. ಈ ಶೈಲಿ ತುಂಬಾ ಸರಳ. ಇದರಲ್ಲಿ, ಚೌಕ, ವೃತ್ತ, ತ್ರಿಕೋನ ಅಥವಾ ಬೇರೆ ಯಾವುದೇ ಚಿಹ್ನೆ ಅಥವಾ ಆಕಾರ ಬಳಸಲಾಗುವುದಿಲ್ಲ. ಕೇವಲ ಏಳು ಬಣ್ಣಗಳನ್ನು ಉದ್ದ ಅಥವಾ ಅಗಲವಾಗಿ ಬಿಡಿಸಲಾಗುತ್ತದೆ. ಬೇರೆ ಯಾವುದೇ ರೀತಿಯ ಮಿಕÕ… ಆ್ಯಂಡ್‌ನ ಕಾಂಬಿನೇಶನ್ ಇರುವುದಿಲ್ಲ. ಎರಡು ತಿಂಗಳು ಹಿಂದೆ ಇಂಗ್ಲಿಷ್ ಟಿವಿ ನಿರೂಪಕಿ ಹಾಲಿ ವಿÇÉೋಬೈ ಇದೇ ರೀತಿಯ ಉಡುಪು ತೊಟ್ಟು ಫ್ಯಾಷನ್ ಪ್ರಿಯರಿಂದ ಸೈ ಎನಿಸಿಕೊಂಡಿದ್ದರು. ವಿಶೇಷವೆಂದರೆ, ಗಾಯಕಿ ಟೇಲರ್ ಅವರ ಈ ಉಡುಪಿಗೆ ನಿರೂಪಕಿ ಹಾಲಿ ಅವರ ಉಡುಪೇ ಪ್ರೇರಣೆಯಂತೆ. ಆದರೆ ಈ ಶೈಲಿ ಟ್ರೆಂಡ್ ಆಗಿದ್ದು ಗಾಯಕಿ ಟೇಲರ್ ಸ್ವಿಫr… ರೇನ್‌ಬೋ ಉಡುಪು ತೊಟ್ಟಾಗ.
Related Articles
ಬಾಲಿವುಡ್ ನಟಿ ಸೋನಂ ಕಪೂರ್ ಕೂಡ ರೇನ್‌ಬೋ ಫ್ಯಾಷನ್ ಉಳ್ಳ ಉಡುಗೆ ತೊಟ್ಟು ಸಾಮಾಜಿಕ ಜಾಲತಾಣಗಳಲ್ಲಿ ಫೋಟೊಗಳನ್ನು ಹಾಕಿದ್ದು ಸುದ್ದಿಯಾಗಿತ್ತು. ಫ್ಯಾಷನ್ ಲೋಕದ ವಿಭಿನ್ನ ಶೈಲಿಯ ಉಡುಗೆಗಳನ್ನು ಅಭಿಮಾನಿಗಳಿಗೆ ಪರಿಚಯಿಸುವಲ್ಲಿ ಸೋನಂ ಕಪೂರ್ ಯಾವತ್ತಿಗೂ ಮುಂದು. ಆ ವಿಷಯದಲ್ಲಾಕೆ ಹಾಲಿವುಡ್ ನಟಿಯರಿಗಿಂತಲೂ ಒಂದು ಕೈ ಮೇಲು.
Advertisement
ವರ್ಷಗಳ ಹಿಂದೆ ಅಮೆರಿಕಾದ ಮಾಡೆಲ… ಹಾಗೂ ಉದ್ಯಮಿ ಪ್ಯಾರಿಸ್ ಹಿಲ್ಟನ್ ಇದೇ ರೇನ್‌ಬೋ ವಿನ್ಯಾಸದ ಉಡುಗೆ ತೊಟ್ಟಿದ್ದ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು. ತನ್ನ ಫೋನ್ ಕಳೆದು ಹೋಗಿರುವ ಬಗ್ಗೆ ವಿಷಾದ ವ್ಯಕ್ತ ಪಡಿಸುತ್ತಾ ಹಾಕಿದ್ದ ಚಿತ್ರದಲ್ಲಿ ಫೋನ್ ಆಗಲಿ, ಕಳ್ಳತನವಾಗಲಿ ಸುದ್ದಿಯಾಗಲಿಲ್ಲ. ಬದಲಿಗೆ ಪ್ಯಾರಿಸ್ ಉಟ್ಟಿದ್ದ ಉಡುಗೆ ಚರ್ಚೆಯ ವಿಷಯವಾಗಿತ್ತು. ರೇನ್‌ಬೋ ಸ್ಟ್ರೈಪ್ಸ್ ಉಳ್ಳ ಸಮ್ಮರ್ ಜಂಪ್ ಸೂಟ್ ಫ್ಯಾಷನ್ ಪ್ರಿಯರು ಮತ್ತು ಅಭಿಮಾನಿಗಳಿಗೆ ಬಹಳ ಇಷ್ಟವಾಗಿತ್ತು. ಶಿಲ್ಪಾ ಶೆಟ್ಟಿ, ಪ್ರಿಯಾಂಕಾ ಚೋಪ್ರಾ ಮುಂತಾದ ಬಾಲಿವುಡ್ ನಟಿಯರಷ್ಟೇ ಅಲ್ಲದೆ ನಮ್ಮ ಕನ್ನಡದ ತಾರೆಯರೂ ರೇನ್‌ಬೋ ರಂಗಿಗೆ ಮೈಯೊಡ್ಡಿದ್ದಾರೆ.
ದೇಸೀ ಕಾಮನಬಿಲ್ಲುಈ ಶೈಲಿ ವೆಸ್ಟರ್ನ್ (ಪಾಶ್ಚಾತ್ಯ) ಉಡುಗೆಗಳಿಗೆ ಸೀಮಿತವಾಗಬೇಕಿಲ್ಲ. ಕುರ್ತಾ, ಬಿಳಿ ಬಣ್ಣದ ಪಂಜಾಬಿ ಸೂಟ್‌ನ ದುಪಟ್ಟಾ, ಸೀರೆ, ರವಿಕೆ ಮತ್ತು ಚೂಡಿದಾರದ ಜಾಕೆಟ್, ಕ್ರಾಪ್ ಟಾಪ್ ಜೊತೆ ತೊಡುವ ಉದ್ದ ಲಂಗದಂಥ ಇಂಡಿಯನ್ ಉಡುಗೆಗಳಲ್ಲೂ ಕಾಣಿಸಿಕೊಂಡಿದೆ.ಈ ಟ್ರೆಂಡ್‌ನ ವೈಶಿಷ್ಟ್ಯ ಎಂದರೆ ರೇನ್‌ಬೋ ಸ್ಟ್ರೈಪ್ಸ್ ಇರುವ ಉಡುಪಿನ ಜೊತೆ ಬಣ್ಣ-ಬಣ್ಣದ ಆಕ್ಸೆಸರೀಸ್ ತೊಡಬಹುದು. ಅಂದರೆ, ಕಿವಿಯೋಲೆ ಒಂದು ಬಣ್ಣ, ಬಳೆಗಳೊಂದು ಬಣ್ಣ, ಪಾದರಕ್ಷೆಗಳು ಮತ್ತೂಂದು ಬಣ್ಣ ಹಾಗೂ ಬ್ಯಾಗ್‌ಗೆ ಮಗದೊಂದು ಬಣ್ಣ! ಈ ಟ್ರೆಂಡ್ ಹೋಗಿ ಹೊಸ ಟ್ರೆಂಡ್ ಬರುವ ಮುನ್ನ ನಿಮ್ಮ ವಾರ್ಡ್‌ರೋಬ್‌ಗ ಬಣ್ಣ ಹಚ್ಚಿ. ನೀವೂ ಕಾಮನಬಿಲ್ಲಿನ ಬಣ್ಣಗಳನ್ನು ನಿಮ್ಮ ಬಟ್ಟೆಯ ಮೇಲೆ ಮೂಡಿಸಿ. – ಅದಿತಿಮಾನಸ.ಟಿ.ಎಸ್