Advertisement

ಕೌಟುಂಬಿಕ ಕಲಹ ಹಿನ್ನಲೆ ಕುಡುಗೋಲಿನಿಂದ ಹಲ್ಲೆ : ಓರ್ವನಿಗೆ ಗಾಯ

06:05 PM Jun 24, 2022 | Team Udayavani |

ಕುಣಿಗಲ್: ಕೌಟುಂಬಿಕ ವಿಚಾರವಾಗಿ ಇಬ್ಬರು ವ್ಯಕ್ತಿಗಳ ನಡುವೆ ಜಗಳವಾಗಿ ಕುಡುಗೋಲಿನಿಂದ ಹೊಡೆದಾಡಿದ್ದು, ಓರ್ವ ಗಾಯಗೊಂಡಿರುವ ಘಟನೆ ತಾಲೂಕಿನ ಎಡಿಯೂರು ಹೋಬಳಿ ನಾಗೇಗೌಡನಪಾಳ್ಯ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.

Advertisement

ನಾಗೇಗೌಡನಪಾಳ್ಯ ಗ್ರಾಮದ ನಿವಾಸಿ ಲೋಕೇಶ್ ಗಾಯಗೊಂಡ ವ್ಯಕ್ತಿ.

ಘಟನೆ ವಿವರ: ಲೋಕೇಶ್ ಹಾಗೂ ಉಮೇಶ್ ಇಬ್ಬರು ಸಂಬಂಧಿಕರಾಗಿದ್ದು, 2021 ರಲ್ಲಿ ಉಮೇಶ್ ಅವರ ದೊಡ್ಡಪ್ಪನ ಮಗಳು ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉಮೇಶ್ ಅವರ ಅಣ್ಣ ಜೈಲಿಗೆ ಹೋಗಿದ್ದರು ಎನ್ನಲಾಗಿದ್ದು, ಈ ವಿಚಾರವಾಗಿ ಶುಕ್ರವಾರ ಗ್ರಾಮದಲ್ಲಿ ಲೋಕೇಶ್ ಹಾಗೂ ಉಮೇಶ್ ನಡುವೆ ಮಾತಿನ ಚಕಾಮಕಿ ನಡೆದು, ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಕುಡುಗೋಲಿನಿಂದ ಹೊಡೆದುಕೊಂಡಿದ್ದಾರೆ.

ಇದನ್ನೂ ಓದಿ: ಉದ್ಧವ್ ಠಾಕ್ರೆಯೂ ಅಸ್ಸಾಂ ಪ್ರವಾಸಕ್ಕೆ ಬರಲಿ : ಸಿಎಂ ಶರ್ಮಾ ಲೇವಡಿ

ಘಟನೆಯಲ್ಲಿ ಲೋಕೇಶ್‌ ಗಾಯಗೊಂಡಿದ್ದು, ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಕರೆದ್ಯೋಯಲಾಗಿದೆ.  ಅಮೃತೂರು ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ತನಿಖೆ ಕೈಗೊಂಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next