Advertisement

Kapu ರೆಸಿಡೆನ್ಸಿ ಬಳಿ ನಿಲ್ಲಿಸಿದ್ದ ಪಲ್ಸರ್‌ ಬೈಕ್‌ ಕಳವು

10:01 PM Sep 09, 2023 | Team Udayavani |

ಕಾಪು: ಕಾಪು ರೆಸಿಡೆನ್ಸಿ ಬಳಿ ಪಾರ್ಕ್‌ ಮಾಡಿ ಹೋಗಿದ್ದ ಬೈಕ್‌ನ್ನು ಕಳ್ಳರು ಕದ್ದೊಯ್ದ ಘಟನೆ ಸೆ. 7ರಂದು ರಾತ್ರಿ ನಡೆದಿದೆ.

Advertisement

ಕಾಪು ಸ್ಮಾಲ್‌ ವರ್ಲ್ಡ್ ಬಿಲ್ಡಿಂಗ್‌ನಲ್ಲಿ ಸೆಲೂನ್‌ ನಡೆಸುತ್ತಿರುವ ಉತ್ತರ ಪ್ರದೇಶ ಮೂಲದ ಶಾರುಖ್‌ ಹಸನ್‌ ಎಂಬವರು ಕಾಪು ರೆಸಿಡೆನ್ಸಿ ಬಳಿ ಸೆ. 7ರಂದು ರಾತ್ರಿ ನಿಲ್ಲಿಸಿದ್ದ ಬೈಕ್‌ ಸೆ. 8ರಂದು ಬೆಳಗ್ಗೆ ನಾಪತ್ತೆಯಾಗಿದೆ.

ಕಳವಾದ ಪಲ್ಸರ್‌ ಬೈಕ್‌ ಅನುಪ್‌ ಕುಮಾರ್‌ ಎಂಬವರಿಗೆ ಸೇರಿದ್ದಾಗಿದ್ದು ಬೈಕ್‌ನ ಮೌಲ್ಯ 15,000 ರೂ. ಆಗಿದೆ. ಈ ಬಗ್ಗೆ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next