Advertisement

ಎಸಿಬಿ ಬಲೆಗೆ ಬಿದ್ದಿದ್ದ ಅಧಿಕಾರಿ ನೇಮಕ ವಿರೋಧಿಸಿ ಪ್ರತಿಭಟನೆ

01:54 PM Aug 27, 2022 | Team Udayavani |

ಶಹಾಬಾದ: ಲಂಚ ಪ್ರಕರಣದಲ್ಲಿ ಎಸಿಬಿ ಬಲೆಗೆ ಬಿದ್ದಿದ್ದ ಕಾರ್ಮಿಕ ನಿರೀಕ್ಷಕಿ ಕವಿತಾ ಜೆ. ಹೊನ್ನಾಳಿ ಅವರನ್ನು ಚಿತ್ತಾಪುರ ವಲಯಕ್ಕೆ ನಿಯೋಜನೆ ಮಾಡಿರುವದನ್ನು ವಿರೋಧಿಸಿ ಹಾಗೂ ಅವರನ್ನು ಕೂಡಲೇ ವರ್ಗಾವಣೆ ಮಾಡುವಂತೆ ಒತ್ತಾಯಿಸಿ ಶುಕ್ರವಾರ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್‌ ನಗರ ಘಟಕದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

Advertisement

ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್‌ ಜಿಲ್ಲಾ ಕಾರ್ಯದರ್ಶಿ ನಾಗಯ್ನಾಸ್ವಾಮಿ ಮಾತನಾಡಿ, ಬೀದರ ಜಿಲ್ಲೆಯ ಕಾರ್ಮಿಕ ಇಲಾಖೆಯಲ್ಲಿ ನಿರೀಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದ ಕವಿತಾ ಜೆ. ಹೊನ್ನಳಿ ಕಾರ್ಮಿಕ ಇಲಾಖೆ ಯೋಜನೆಯಡಿ ಮದುವೆಯಾದ ದಂಪತಿಗೆ ಇಲಾಖೆ ಯಿಂದ ಸಹಾಯಧನ ನೀಡಲು ಕಾರ್ಮಿಕನಿಂದ ಲಂಚ ಪಡೆಯುವಾಗ ಎಸಿಬಿ ಬಲೆಗೆ ಬಿದ್ದು, ಜೈಲಿಗೆ ಹೋಗಿದ್ದರು. ಇಂತಹ ಅಧಿಕಾರಿಯನ್ನು ನಿಯೋಜನೆ ಮಾಡಿದ ಮೇಲಧಿಕಾರಿಗಳ ನಡೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕ ಪ್ರಾಂತ ರೈತ ಸಂಘದ ಚಿತ್ತಾಪುರ ತಾಲೂಕು ಅಧ್ಯಕ್ಷ ಸಾಯಬಣ್ಣಾ ಗುಡುಬಾ ಮಾತನಾಡಿ, ಕಾರ್ಮಿಕ ನಿರೀಕ್ಷಕಿ ಕವಿತಾ ಅವರನ್ನು ವಾರದೊಳಗೆ ವರ್ಗಾವಣೆ ಮಾಡದಿದ್ದರೇ ಮುಖ್ಯ ರಸ್ತೆ ಬಂದ್‌ ಮಾಡಿ ಪ್ರತಿಭಟಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಜಿಲ್ಲಾ ಜಂಟಿ ಕಾರ್ಯದರ್ಶಿ ಹನು ಮಂತರಾಯ ಪೂಜಾರಿ, ನಾಗಪ್ಪ ರಾಯ ಚೂರಕರ್‌ ಮಾತನಾಡಿದರು. ಪ್ರಾಂತ ರೈತ ಸಂಘದ ಸಂಚಾಲಕ ರಾಯಪ್ಪ ಹುರುಮುಂಜಿ, ಭೀಮಶ್ಯಾ ಹಳ್ಳಿ, ಪ್ರಕಾಶ ಮತ್ತಿತರರು ಈ ಸಂದರ್ಭದಲ್ಲಿದ್ದರು. ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಂಡಳಿ ರಾಜ್ಯ ಕಾರ್ಯದರ್ಶಿಗೆ ಬರೆದ ಮನವಿ ಪತ್ರವನ್ನು ಗ್ರೇಡ್‌-2 ತಹಶೀಲ್ದಾರ್‌ ಗುರುರಾಜ ಸಂಗಾವಿಗೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next