Advertisement

ಭವಿಷ್ಯದ ಭರವಸೆಯ ಯುವ ನಾಯಕ; ಮಲ್ಲಿಕಾರ್ಜುನ ಚರಂತಿಮಠ

04:58 PM Nov 01, 2023 | Team Udayavani |

ದಕ್ಷನಾದವನಿಗೆ ಒಂದು ಸಮರ್ಥ, ನಿರ್ದಿಷ್ಟ, ಸ್ಪಷ್ಟ, ನಿಖರವಾದ ದೃಷ್ಟಿಕೋನ ಇರುತ್ತದೆ. ನಾಯಕನಾದವನ ಕಾರ್ಯ ಕ್ಷಮತೆಯೂ ದಕ್ಷತೆಯಿಂದ ಕೂಡಿರುತ್ತದೆ. ಸಾಮಾನ್ಯ ಮಿತಿಗಳನ್ನು ಮೀರಿದ ವ್ಯಕ್ತಿತ್ವ ಹೊಂದಿದವನು ಮಾತ್ರ ನಿಜವಾದ
ಜನ ನಾಯಕನಾಗುತ್ತಾನೆ ಎಂಬ ನಿಲುವು ಮಲ್ಲಿಕಾರ್ಜುನ ಚರಂತಿಮಠ ಅವರದು.

Advertisement

ಜನರ ಸೇವೆ ಮಾಡಲು ಅಧಿಕಾರವೇ ಬೇಕಿಲ್ಲ. ಇಚ್ಛಾಶಕ್ತಿ, ಸಾಮಾಜಿಕ ಮನೋಭಾವ ಇದ್ದರೆ ಸಾಕು. ಜತೆಗೆ ಕುಟುಂಬದ ಹಿರಿಯರು ಹಾಕಿಕೊಟ್ಟ ಪರಂಪರೆ ಮುನ್ನಡೆಸಬೇಕೆಂಬ ಹಂಬಲವೊಂದಿದ್ದರೆ ಸಮಾಜದಲ್ಲಿ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಬಹುದು. ಅಂತಹ ಸಾಲಿಗೆ ಬಾಗಲಕೋಟೆಯ ಭವಿಷ್ಯದ ಭರವಸೆಯ ನಾಯಕರಾಗಿ ನಿಲ್ಲುತ್ತಾರೆ ಮಲ್ಲಿಕಾರ್ಜುನ ಸಿ. ಚರಂತಿಮಠ.

ಹೌದು. ಮಲ್ಲಿಕಾರ್ಜುನ ಇವರ ಹೆಸರೀಗ ಎಲ್ಲೆಡೆ ಚಿರಪರಿಚಿತ. ಅಧಿಕಾರಕ್ಕಾಗಿ ಹಂಬಲಿಸಿದವರಲ್ಲ, ಸಮಾಜ ಸೇವೆ ಬಿಟ್ಟವರಲ್ಲ. ತಾವೇ ನಾಯಕರಾಗಿ ಬೆಳೆಯಬೇಕೆಂಬ ಹಂಬಲವೂ ಇಲ್ಲ. ಹಲವಾರು ನಾಯಕರಾದವರ ಹೆಗಲಿಗೆ ಹೆಗಲು ಕೊಟ್ಟು ಸಂಘಟನೆ ಮಾಡಿದವರು. ಇಂತಹ ಯುವ ಮುಖಂಡ, ಸದ್ಯ ಬಾಗಲಕೋಟೆಯ ಯುವಕರ, ಜನರ ಕಣ್ಣಲ್ಲಿ ಭರವಸೆಯ ನಾಯಕರಾಗಿ ಹೊರ ಹೊಮ್ಮಿದ್ದಾರೆ.

ರಾಜಕೀಯ ಹಾದಿ: 1994ರಲ್ಲಿ ಸಕ್ರಿಯ ರಾಜಕಾರಣ ಪ್ರವೇಶಿಸಿದ ಮಲ್ಲಿಕಾರ್ಜುನ ಚರಂತಿಮಠ ಇವರು 1996ರ ಲೋಕಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷವನ್ನು ತಳಮಟ್ಟದಿಂದ ಸಂಘಟಿಸಲು ಕೆಲಸ ಮಾಡಿದ್ದಾರೆ. 1997ರಲ್ಲಿ ರಾಮಕೃಷ್ಣ ಹೆಗಡೆ ನೇತೃತ್ವದ ಲೋಕಸಭಾ ಚುನಾವಣೆಯಲ್ಲಿ ಲೋಕಶಕ್ತಿ ಪಕ್ಷದ ಅಭ್ಯರ್ಥಿ ಗೆಲುವಿಗಾಗಿ ದುಡಿದಿದ್ದಾರೆ. ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಪಿ.ಎಚ್‌. ಪೂಜಾರ ಅವರ ಎರಡು ವಿಧಾನಸಭೆ ಚುನಾವಣೆಯಲ್ಲಿ ಅವರ ಗೆಲುವಿಗಾಗಿ, 2004ರ ವಿಧಾನಸಭಾ-ಲೋಕಸಭಾ ಚುನಾವಣೆ, 2008 ಮತ್ತು 2013ರ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಗೆಲ್ಲಿಸಲು ಬಾಗಲಕೋಟೆಯ ಹಳ್ಳಿ ಹಳ್ಳಿ-ಮನೆ ಮನೆಗಳ ಕದ ತಟ್ಟಿದವರು.

Advertisement

2014ರ ಲೋಕಸಭೆ ಚುನಾವಣೆಯಲ್ಲಿ ಅಂದಿನ ಗುಜರಾತ್‌ ಮುಖ್ಯಮಂತ್ರಿಯಾಗಿದ್ದ ಹಾಗೂ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಲ್ಪಟ್ಟಿದ್ದ ನರೇಂದ್ರ ಮೋದಿಜಿಯವರ ಬೃಹತ್‌ ಜನಸಂಪರ್ಕ ಸಭೆಯನ್ನು ಬಾಗಲಕೋಟೆಯಲ್ಲಿ ಸಂಘಟಿಸಿ ಯಶಸ್ವಿ ಸಮಾವೇಶಕ್ಕೆ ಕಾರಣರಾದವರು. ಬಾಗಲಕೋಟೆಯಲ್ಲಿ ಕಳೆದ 20 ವರ್ಷಗಳಿಂದ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ಹೆಚ್ಚಿನ ಅಭ್ಯರ್ಥಿಗಳನ್ನು ಗೆಲ್ಲಿಸಲು ಶ್ರಮಿಸಿದ್ದಾರೆ.

ನಿರಂತರ ಸಮಾಜ ಸೇವೆ: ಕೋವಿಡ್‌ ಸಂಕಷ್ಟದ ಸಂದರ್ಭದಲ್ಲಿ ದೇಶಾದ್ಯಂತ ಜನತಾಕಫೂìÂ, ಸೀಲ್‌ಡೌನ್‌ ಹೇರಲಾಗಿತ್ತು. ದುಡಿಮೆಯನ್ನೇ ನಂಬಿಕೊಂಡು ಬದುಕುವ ಕೂಲಿಕಾರರ ಬದುಕು ದುಸ್ತರವಾಗಿತ್ತು. ಸ್ನೇಹಿತರು, ವಿಶ್ವಾಸಿಕರೊಂದಿಗೆ ಹುಟ್ಟು ಹಾಕಿದ ನಮ್ಮ ಕಾಮಧೇನು ಸಂಸ್ಥೆಯ ಅಡಿಯಲ್ಲಿ ಪ್ರತಿದಿನ 1000 ಆಹಾರದ ಕಿಟ್‌ಗಳನ್ನು ಅಶಕ್ತರು, ಅಸಹಾಯಕರು, ಬಡವರು ಮತ್ತು ನಿರ್ಗತಿಕರಿಗೆ ವಿತರಿಸಿ ಬಡವರ ಹಸಿವು ನೀಗಿಸುವ ಪ್ರಯತ್ನ ಮಾಡಿದರು. ಕೋವಿಡ್‌ 2ನೇ ಅಲೆಯ ಸಂದರ್ಭದಲ್ಲಿ, ಎಲ್ಲೆಡೆ ಹೊಟೇಲ್‌ಗ‌ಳು ಬಂದ್‌ ಆಗಿದ್ದವು.

ಬಾಗಲಕೋಟೆಗೆ ರೋಗಿಗಳನ್ನು ಕರೆದುಕೊಂಡು ಬರುವ ಸಾವಿರಾರು ಜನರಿಗೆ 39 ದಿನಗಳ ಕಾಲ ಪ್ರತಿದಿನ ಸುಮಾರು 800ರಿಂದ 850 ಜನರಿಗೆ ಊಟ ಸಿದ್ಧಪಡಿಸಿ ಅವರ ಹಸಿವು ನೀಗಿಸುವ ಕೆಲಸ ಮಾಡಿದ್ದಾರೆ. ಆಗ ಒಟ್ಟು 32,000ಕ್ಕೂ ಹೆಚ್ಚು ಆಹಾರದ ಪೊಟ್ಟಣಗಳನ್ನು ಬಡವರು ಮತ್ತು ಅಸಹಾಯಕ ಜನರಿಗೆ ನೀಡಿರುವ ಸಾರ್ಥಕತೆ ಇವರಿಗಿದೆ.

ಸಂಘಟನೆ, ರಾಜಕಾರಣ ಕೆಲಸದ ಜತೆ ದೇಶಭಕ್ತಿಯ ಜಾಗೃತಿ ಮೂಡಿಸುವ ಮಹತ್ವದ ಕಾರ್ಯಗಳನ್ನು ಅವರ ಸ್ನೇಹಿತರೊಂದಿಗೆ ಮಾಡಿದರು. ಅಮಾಯಕ ಕಾಶ್ಮೀರಿ ಪಂಡಿತರ ಹತ್ಯಾಕಾಂಡದ ಕಥಾನಕವುಳ್ಳ ದಿ. ಕಾಶ್ಮೀರಿ ಫೈಲ್ಸ್‌ ಚಲನಚಿತ್ರದ ಉಚಿತ ಪ್ರದರ್ಶನ ಏರ್ಪಡಿಸಿದ್ದು ಇನ್ನೂ ನೆನಪಿನಲ್ಲಿದೆ. ಸುಮಾರು 4 ದಿನಗಳ ಕಾಲ ನಗರದ ವಾಸವಿ ಚಿತ್ರ ಮಂದಿರದಲ್ಲಿ ಉಚಿತ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಿರುವುದು ಜನರ ಮೆಚ್ಚುಗೆಗೆ ಪಾತ್ರವಾಗಿತ್ತು.

ಧಾರ್ಮಿಕ ಕಾರ್ಯಕ್ಕೂ ಸೈ: ಮೊದಲಿನಿಂದಲೂ ಧಾರ್ಮಿಕ ಕಾರ್ಯಕ್ರಮಗಳಿಗೆ ಹೆಚ್ಚು ಉತ್ತೇಜನ ಕೊಟ್ಟ ಕುಟುಂಬದವರಾದ ಕಾರಣ ಧರ್ಮ ಕಾರ್ಯಗಳಲ್ಲಿ ಇವರಿಗೆ ಅತೀವ ಆಸಕ್ತಿಯಿದೆ. ಕೊರೊನಾ ವೇಳೆ ಲಾಕ್‌ಡೌನ್‌ ಬಳಿಕ ಸಾರ್ವಜನಿಕ ಗಣೇಶೋತ್ಸವ ಬಹುತೇಕ ನಿಂತೇ ಹೋಗಿತ್ತು. ಆ ಸಂದರ್ಭದಲ್ಲಿ ಬಾಗಲಕೋಟೆಯಲ್ಲಿ ಮತ್ತೆ ಸಾರ್ವಜನಿಕ ಗಣೇಶೋತ್ಸವ ಆರಂಭಿಸಲು ಕ್ಷೇತ್ರಾದ್ಯಂತ ಪ್ರತಿ ಗಣಶೋತ್ಸವ ಸಮಿತಿಗೆ ಸ್ವತಃ ಭೇಟಿ ನೀಡಿ ತಲಾ 5000 ರೂ.ಗಳಂತೆ ಸುಮಾರು 120 ಸಮಿತಿಗಳಿಗೆ ಹಲವು ವರ್ಷಗಳಿಂದ ಸುಮಾರು 6ಲಕ್ಷ ರೂ. ಪ್ರೋತ್ಸಾಹ ರೂಪದ ಆರ್ಥಿಕ ನೆರವು ನೀಡುತ್ತಿದ್ದಾರೆ.

ಬಾಗಲಕೋಟೆಯ ಪ್ರಸಿದ್ಧ ಹೋಳಿ ಹಬ್ಬದ ಸಂಭ್ರಮ ಇಮ್ಮಡಿಗೊಳಿಸಲು ಪ್ರತಿ ಬಣ್ಣದ ಬಂಡಿಗೆ ತಲಾ 3 ಸಾವಿರ ಪ್ರೋತ್ಸಾಹಧನ ನೀಡುವ ಮೂಲಕ ಸಂಪ್ರದಾಯ, ಪರಂಪರೆ ಹಬ್ಬಗಳಿಗೆ ಬೆನ್ನೆಲುಬಾಗಿ ನಿಂತಿದ್ದಾರೆ.

ಒಟ್ಟಾರೆ ಬಾಗಲಕೋಟೆಯಲ್ಲಿ ಎಂಸಿಸಿ ಗ್ರುಪ್‌ ಹಾಗೂ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಸೇವೆಗಾಗಿ ತಮ್ಮ ಕುಟುಂಬದ ಹಿರಿಯರ ಸೇವೆ ಮುಂದುವರಿಸಲು-ಅವರ ಸ್ಮರಣೆಗಾಗಿ ಸ್ಥಾಪಿಸಿದ ಚರಂತಿಮಠ ಮತ್ತು ವಸ್ತ್ರದ ಫೌಂಡೇಶನ್‌ ಮೂಲಕ ಸದಾ ಬಡವರಿಗಾಗಿ ಹಂಬಲಿಸುವ ಮಲ್ಲಿಕಾರ್ಜುನ ಸಿ. ಚರಂತಿಮಠ, ಭವಿಷ್ಯದ ಬಾಗಲಕೋಟೆಯ ನಾಯಕರಾಗಿ ಹೊರ ಹೊಮ್ಮುವುದರಲ್ಲಿ ಸಂಶಯವಿಲ್ಲ. ಅವರ ವಿಚಾರ, ಕನಸು-ಜನರ ಬಯಕೆ ಈಡೇರಲು ಜನಸಮೂಹ ಅವರೊಂದಿಗೆ ನಿಲ್ಲಬೇಕೆನ್ನುತ್ತಾರೆ ಅವರನ್ನು ಹತ್ತಿರದಿಂದ ಕಂಡವರು.

Advertisement

Udayavani is now on Telegram. Click here to join our channel and stay updated with the latest news.

Next