ಏನೇನು ಕೃಷಿ: ಕೆಂದಾಳೆ, ತೆಂಗು
ವಯಸ್ಸು: 45
ಕೃಷಿ ಪ್ರದೇಶ: 3 ಎಕ್ರೆ
Advertisement
ನಾವು ಅದೆಷ್ಟು ಆಧುನಿಕಗೊಂಡರೂ ಉಣ್ಣುವ ಅನ್ನವನ್ನು ಸೃಷ್ಟಿಸಲಾರೆವು; ಅದನ್ನು ಬಿತ್ತಿ ಬೆಳೆದೇ ಆಗಬೇಕು. ಆದ್ದರಿಂದಲೇ ಭೂಮಿಯ ಜತೆಗೆ ಒಡನಾಡುವ ಕೃಷಿಗೆ ಮಹ ಣ್ತೀದ ಸ್ಥಾನವಿದೆ. ಇದೇ ಹಿನ್ನೆಲೆ ಯಲ್ಲಿ ಉದಯವಾಣಿಯು ಕಿಸಾನ್ ದಿನಾಚರಣೆಯ ಸಂದರ್ಭ ರೈತರ ಸಾಧನೆಯ ಚಿತ್ರಣ ನೀಡುವ “ಕೃಷಿ ಕಥನ’ವನ್ನು ಆರಂಭಿಸಿದೆ. ಈ ಹೊಸ ಸರಣಿಯು ಇನ್ನಷ್ಟು ಮಂದಿಗೆ ಪ್ರೇರಣೆಯಾಗಲೆಂದು ಸರಕಾರದಿಂದ ಪ್ರಶಸ್ತಿ ಪುರಸ್ಕಾರಗಳಿಂದ ಗುರುತಿಸಲ್ಪಟ್ಟ ರೈತರನ್ನು ಪರಿಚಯಿಸುವ ಪ್ರಯತ್ನ.
ಸಾಫ್ಟ್‌ವೇರ್ ಉದ್ಯೋಗವನ್ನು ಅನಿರೀಕ್ಷಿತ ಕಾರಣ ದಿಂದ ತೊರೆದ ಗಟ್ಟಿಯವರು ಹೆಚ್ಚಿನ ಸಮಯವನ್ನು ತನ್ನ ಕೃಷಿಗಾಗಿ ಮೀಸಲಿರಿಸಲು ಕೃಷಿಯನ್ನೇ ವೃತ್ತಿಯಾಗಿಸಿ ಕೊಂಡರು. ಆ ಸಂದರ್ಭ ಕೆಂದಾಳೆ ಎಳನೀರಿಗೆ ಔಷಧೀಯ ಗುಣವಿದ್ದು ಮಾರುಕಟ್ಟೆಯಲ್ಲಿ ಅತ್ಯುತ್ತಮ ಧಾರ ಣೆ ಯನ್ನು ಅರಿತು ಕೆಂದಾಳೆ ಕೃಷಿಯತ್ತ ತನ್ನ ದೃಷ್ಟಿ ನೆಟ್ಟರು. ಕಾಸರಗೋಡು, ದ.ಕ. ಜಿಲ್ಲೆ ಸೇರಿದಂತೆ ತೆಂಗು ಕೃಷಿ ಅದರಲ್ಲೂ ಕೆಂದಾಳೆ ಕೃಷಿಯತ್ತ ಅಧ್ಯಯನ ನಡೆಸಿ ಕ್ಷೇತ್ರ ಕಾರ್ಯ ನಡೆಸಿ ತನ್ನ ತೋಟದಲ್ಲಿ ದೊಡ್ಡ ಪ್ರಮಾಣದಲ್ಲಿ ಬೆಳೆದು ಯಶಸ್ವಿಯಾದರು. ಪಾರಂಪರಿಕವಾಗಿ ತೆಂಗು ಕೃಷಿ ಯನ್ನು ಮಾಡಿ ಹೊಸ ಹೊಸ ಪ್ರಯೋಗಗಳೊಂದಿಗೆ ಕೆಂದಾಳೆ ಕೃಷಿಯನ್ನು ಆಧುನೀಕರಣಗೊಳಿಸಿದರು.ಸಾಫ್ಟ್‌ವೇರ್ ಉದ್ಯಮ
22 ವರ್ಷಗಳ ಕೃಷಿ ಅನುಭವದೊಂದಿಗೆ ಹಿಂದಿನ ವೃತ್ತಿಯಾಗಿದ್ದ ಸಾಫ್ಟ್‌ವೇರ್ ಉದ್ಯಮವನ್ನು ಆರಂಭಿಸುವ ನಿಟ್ಟಿನಲ್ಲಿ ಮನೆಯಲ್ಲೇ ವಿದೇಶದಲ್ಲಿರುವ ಸಂಸ್ಥೆಗೆ ಹೊರ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸಲು ಆರಂಭಿ ಸಿದ್ದು ಮೂರು ತಿಂಗಳಿನಿಂದ ಮನೆಯಲ್ಲೇ ಸಾಫ್ಟ್‌ವೇರ್ ಉದ್ಯಮವನ್ನು ಆರಂಭಿಸಿ 6 ಮಂದಿಗೆ ಉದ್ಯೋಗ ನೀಡಿದ್ದಾರೆ. ಇವರು ಸತತ ಮೂರು ವರ್ಷ ತೆಂಗು ಕೃಷಿಯ ವಿವಿಧ ತಳಿಗಳ ಪ್ರದರ್ಶನ, ಹೊಸ ದಿಲ್ಲಿ ಯಲ್ಲಿ ನಡೆದ ರಾಷ್ಟ್ರೀಯ ಕೃಷಿ ಸಮ್ಮೇಳನದಲ್ಲಿ ತೆಂಗು ಕೃಷಿಯ ಪ್ರದರ್ಶನ, ಪ್ರಾತ್ಯಕ್ಷತೆ ನೀಡಿದ್ದಾರೆ. ಕೃಷಿ ಚಟುವಟಿಕೆಗಳ ಅಧ್ಯಯ ನಕ್ಕೆಂದೇ ಕಾಲೇಜು ವಿದ್ಯಾರ್ಥಿಗಳು, ಸಂಶೋ ಧ ಕರು ಕೊಂಡಾಣದ ಗಟ್ಟಿಯವರ ಕಾರ್ಯಕ್ಷೇತ್ರಕ್ಕೆ ಆಗಮಿಸಿ ಅಧ್ಯಯನ ನಡೆಸುತ್ತಿದ್ದಾರೆ.
Related Articles
ಚಂದ್ರಶೇಖರ್ ಗಟ್ಟಿ ಅವರ ಕೃಷಿ ಸಾಧನೆಗೆ ಹಲವಾರು ಪ್ರಶಸ್ತಿ, ಪುರಸ್ಕಾರಗಳು ಬಂದಿವೆ. ಕೆಂದಾಳೆ ತೆಂಗು ಕೃಷಿಯಲ್ಲಿ ಮಾಡಿದ ಸಾಧನೆಗೆ ಭಾರತದ ಕೃಷಿ ಮಂತ್ರಾಲಯದ ತೆಂಗು ಅಭಿವೃದ್ಧಿ ಮಂಡಳಿ ನೀಡುವ ರಾಷ್ಟ್ರೀಯ ವಿಶೇಷ ವಾರ್ಷಿಕ ಪ್ರಶಸ್ತಿಯನ್ನು 2011ರ ಸೆಪ್ಟಂಬರ್ ತಿಂಗಳಿನಲ್ಲಿ ಅಸ್ಸಾಂನ ಗುವಾಹಾಟಿಯಲ್ಲಿ ನಡೆದ ಮಂಡಳಿಯ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅಸ್ಸಾಂನ ಅಂದಿನ ಮುಖ್ಯಮಂತ್ರಿ ತರುಣ್ ಗೊಗೋಯಿ ಅವರು ಪ್ರದಾನ ಮಾಡಿದ್ದು ರಾಷ್ಟ್ರದ ಐದು ಮಂದಿ ಉದಯೋನ್ಮುಖ ತೆಂಗು ಬೆಳೆಗಾರರಲ್ಲಿ ಚಂದ್ರಶೇಖರ್ ಗಟ್ಟಿಯವರು ಓರ್ವರು. 2011ರಲ್ಲಿ ಸಮಗ್ರ ಕೃಷಿಯಲ್ಲಿ ಜಿಲ್ಲಾ ಶ್ರೇಷ್ಠ ರೈತ ಪ್ರಶಸ್ತಿ, 2019ರಲ್ಲಿ ಕೃಷಿ ಕಾರ್ಯದಲ್ಲಿ ನೀರು ನಿರ್ವಹಣೆಗೆ ತಾಲೂಕು ಮಟ್ಟದ ಪ್ರಶಸ್ತಿ ಪಡೆದಿದ್ದಾರೆ.
ಮೊಬೈಲ್ ಸಂಖ್ಯೆ: 9741828152
Advertisement
ಕೃಷಿಯಿಂದ ಯಶಸ್ಸು ಸಾಧ್ಯಕೃಷಿಯಲ್ಲಿರುವ ಪ್ರತಿಯೊಂದು ವಿಷಯಗಳನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಿ ಅದರೊಟ್ಟಿಗೆ ನಮ್ಮ ಪೂರ್ವಜರ ನಂಬಿಕೆಗಳನ್ನೂ ಉಳಿಸಿಕೊಂಡು ಸಮಗ್ರವಾಗಿ ಕೃಷಿ ಮಾಡಿದರೆ ಯಶಸ್ಸು ಸಾಧ್ಯ. ಕೃಷಿಯಲ್ಲಿ ಶ್ರದ್ಧೆ, ತಾಳ್ಮೆಯೊಂದಿಗೆ ಕಠಿನ ಪರಿಶ್ರಮ ಮತ್ತು ಸತತ ಪ್ರಯತ್ನ ನಡೆಸಿದರೆ ಯಶಸ್ವಿಯಾಗಲು ಸಾಧ್ಯ. ಐಟಿ ಸಂಸ್ಥೆಗಳಲ್ಲಿರುವ ಯುವಜನತೆ ಕೃಷಿಯತ್ತ ಒಲವು ತೋರಿಸುತ್ತಿದ್ದು ಅದರ ಬಗ್ಗೆ ಅಧ್ಯಯನ ಮಾಡಲು ಬರುತ್ತಿದ್ದು ಇದೊಂದು ಉತ್ತಮ ಬೆಳವಣಿಗೆಯಾಗಿದ್ದು, ಇಂದಿನ ವಿದ್ಯಾರ್ಥಿಗಳಿಗೆ ಪ್ರಾಥಮಿಕ ಹಂತದಿಂದಲೇ ಕೃಷಿ ಶಿಕ್ಷಣ ನೀಡುವ ಅಗತ್ಯವಿದೆ.ಇದಕ್ಕೆ ಹೆತ್ತವರ ಪ್ರೋತ್ಸಾಹ ಅಗತ್ಯ. ನನ್ನ ಕೃಷಿ ಅಭಿವೃದ್ಧಿಗೆ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ತೋಟಗಾರಿಕೆ ಮತ್ತು ಕೃಷಿ ಇಲಾಖೆಯ ಅಧಿಕಾರಿಗಳ ಪ್ರೋತ್ಸಾಹ ನೀಡಿದ್ದಾರೆ. ಉಜಿರೆಯ ರುಡ್‌ಸೆಟ್ ಸಂಸ್ಥೆಯ ತರಬೇತಿ, ಆರ್ಥಿಕ ಸಹಕಾರ ನೀಡುತ್ತಿರುವ ಮಂಗಳೂರು ಪ್ರಾಥಮಿಕ ಭೂ ಅಭಿವೃದ್ಧಿ ಬ್ಯಾಂಕ್ ಮತ್ತು ಕೋಟೆಕಾರು ಸೇವಾ ಸಹಕಾರಿ ಬ್ಯಾಂಕ್ ಪ್ರೋತ್ಸಾಹದಿಂದಾಗಿ ಕೃಷಿಯಲ್ಲಿ ಸಾಧನೆ ಮಾಡಲು ಸಾಧ್ಯವಾಗಿದೆ. – ಚಂದ್ರಶೇಖರ ಗಟ್ಟಿ,
ಪ್ರಗತಿಪರ ಕೃಷಿಕ ವಸಂತ ಎನ್. ಕೊಣಾಜೆ