Advertisement

Clay Pot: ಬಡವರ ಫ್ರಿಡ್ಜ್ ಮಣ್ಣಿನ ಮಡಕೆ

05:10 PM Apr 24, 2024 | Team Udayavani |

ಭಾರತದಲ್ಲಿ ಮಣ್ಣಿನ ಮಡಕೆಗಳಿಗೆ ಶತಮಾನಗಳ ಇತಿಹಾಸವಿದೆ. ಅನೇಕ ಮನೆಗಳಲ್ಲಿ ಇಂದಿಗೂ ಕೂಡ ಮಣ್ಣಿನ ಮಡಕೆಗಳು ಬಳಕೆಯಲ್ಲಿದೆ. ಸ್ವಲ್ಪ ದುಬಾರಿಯಾದರೂ ಶುದ್ಧ ಮಣ್ಣಿನಿಂದ ಮಾಡಿರುವಂತಹ ಮಣ್ಣಿನ ಮಡಕೆಯಲ್ಲಿಡುವ ಶುದ್ಧವಾದ ನೀರು ಆರೋಗ್ಯಕ್ಕೆ ಉತ್ತಮ ಮಾತ್ರವಲ್ಲದೆ ತಂಪಾಗಿಯೂ ಇರುತ್ತದೆ.

Advertisement

ಪಂಚಭೂತಗಳಲ್ಲಿ ಒಂದಾದ ನೀರು ಸಂಜೀವಿನಂತೆ ಕೆಲಸ ಮಾಡುತ್ತದೆ. ನಮ್ಮ ಅನೇಕ ಆರೋಗ್ಯ ಸಮಸ್ಯೆಗಳನ್ನು ದೂರಮಾಡುವ ಶಕ್ತಿ ನೀರಿಗಿದೆ ಎಂದರೆ ತಪ್ಪಾಗಲಾರದು. ಇಂತಹ ಹಲವು ಪ್ರಯೋಜನವುಳ್ಳ ನೀರನ್ನು ಹಿತ ಮಿತವಾಗಿ ಉಪಯೋಗಿಸಿ ಸಂರಕ್ಷಣೆ ಮಾಡಿಕೊಳ್ಳುವುದು ನಮ್ಮೆಲ್ಲರ ಜವಬ್ದಾರಿಯಾಗಿದೆ.

ಮಣ್ಣಿನಲ್ಲಿ ಆರೋಗ್ಯಕ್ಕೆ ಹಿತವಾಗಿರುವಂತಹ ಕ್ಯಾಲ್ಸಿಯಂ, ಕಬ್ಬಿಣ ಮತ್ತು ಮ್ಯಾಗೀ°ಸಿಯಂನಂತಹ ಖನಿಜಗಳು ಸಮೃದ್ಧವಾಗಿವೆ. ಇವುಗಳ ಸಣ್ಣ ಸಣ್ಣ ಕಣಗಳು ನೀರಿನಲ್ಲಿರುವ ವಿಷಕಾರಿಯ ಅಂಶಗಳನ್ನು ಹೀರಿಕೊಳ್ಳುತ್ತವೆ.

ಆದರೆ ಈಗಿನ ಪೀಳಿಗೆ ಬಾಟಲಿಯಲ್ಲಿ ಸಿಗುವ ನೀರಿಗೆ ಅವಲಂಬಿತರಾಗಿದ್ದಾರೆ. ಆದರೆ ಈ ಪ್ಲಾಸ್ಟಿಕ್‌ ಬಾಟಲಿಗಳು ಬಿಸಿಲಿಗೆ ಸೋಕಿದಾಗ ಪ್ಲಾಸ್ಟಿಕ್‌ನಲ್ಲಿರುವ ಬಿ, ಪಿ, ಎ ಎಂಬ ಹಾನಿಕಾರಕ ಕಣ ಕರಗಿ ನೀರಿನಲ್ಲಿ ಸೇರಿಕೊಳ್ಳುತ್ತವೆ. ಈ ನೀರನ್ನು ಕುಡಿಯುವುದರಿಂದ ಹಲವು ಆರೋಗ್ಯ ಸಮಸ್ಯೆಗಳು ಎದುರಾಗುವ ಸಾಧ್ಯತೆಗಳು ಹೆಚ್ಚಿರುತ್ತವೆ. ಆದರೆ ಮಡಕೆಯಲ್ಲಿ ಇಟ್ಟಿರುವ ನೀರನ್ನು ಕುಡಿಯುವುದರಿಂದ ಇಂತಹ ಯಾವುದೇ ಹಾನಿ ಸಂಭವಿಸುವ ಪ್ರಮಾಣ ತುಂಬಾ ವಿರಳ.

ಮಣ್ಣಿನ ಮಡಕೆಯಲ್ಲಿ ಕ್ಷಾರೀ ಗುಣಗಳಿರುತ್ತವೆ. ಮನುಷ್ಯರ ದೇಹವು ಸಾಮಾನ್ಯವಾಗಿ ಆಮ್ಲಿàಯ ಗುಣವನ್ನು ಹೊಂದಿದೆ, ಮಣ್ಣಿನ ಮಡಕೆಯಲ್ಲಿ ಶೇಖರಣೆ ಮಾಡಿದ ನೀರನ್ನು ಕುಡಿದರೆ ಅದು ಮನುಷ್ಯರ ದೇಹದಲ್ಲಿ ಪಿಎಚ್‌ ಮಟ್ಟವನ್ನು ಸಮತೋಲನದಲ್ಲಿರಿಸುತ್ತದೆ. ಅದೇ ರೀತಿ ಮಣ್ಣಿನ ಮಡಕೆಯ ನೀರು ಕುಡಿಯುವುದರಿಂದ ಅಸಿಡಿಟಿ, ಗ್ಯಾಸ್ಟಿಕ್‌ ಸಮಸ್ಯೆಯೂ ದೂರವಾಗುತ್ತದೆ.

Advertisement

ಮಣ್ಣಿನ ಮಡಕೆಯಲ್ಲಿಟ್ಟಿರುವ ನೀರು ಸ್ವಾಭಾವಿಕವಾಗಿಯೇ ತಂಪಾಗಿರುವುದರಿಂದ ಈ  ನೀರು ಕುಡಿಯುವುದರಿಂದ ದೇಹ ಕೂಡ ತಂಪಾಗುತ್ತ¤ದೆ. ಮಡಕೆ ನೀರಿನಿಂದ ನಮ್ಮ ದೇಹದ ಚಯಾಪಚಯ ಕ್ರಿಯೆ ಕೂಡ ಸುಧಾರಿಸುತ್ತದೆ. ಜೀರ್ಣಕ್ರಿಯೆ ವೃದ್ಧಿಸುತ್ತದೆ. ಹಾಗೂ ದೇಹದ ತೇವಾಂಶ ಕಾಪಾಡುವಲ್ಲೂ ಪ್ರಮುಖ ಪಾತ್ರ ವಹಿಸುತ್ತದೆ. ಒಟ್ಟಾರೆ ಬೇಸಿಗೆ ಕಾಲದಲ್ಲಿ ಮಣ್ಣಿನ ಮಡಕೆಯ ನೀರು ಕುಡಿಯುವುದು ತಂಬಾ ಒಳ್ಳೆಯದು.

ಬೇಸಿಗೆ ಕಾಲದಲ್ಲಿ ಹೆಚ್ಚಿನ ಸಂಖ್ಯೆಯ ಜನರು ಫ್ರಿಡ್ಜ್ ನಲ್ಲಿಟ್ಟಿರುವ ನೀರನ್ನು ಕುಡಿಯುತ್ತಾರೆ. ಆದರೆ ಇದು ಅನೇಕ ಆರೋಗ್ಯ ಸಮಸ್ಯೆಗಳಿಗೆ ನಾಂದಿಯಾಗಬಹುದು.

ಮಣ್ಣಿನ ಪಾತ್ರೆಯ ಲಾಭ

ಮಣ್ಣಿನ ಪಾತ್ರೆಗಳಲ್ಲಿ ಅಡುಗೆ ಮಾಡುವ ಸಂದರ್ಭ ಕಡಿಮೆ ಎಣ್ಣೆ ಬಳಕೆಯಾಗುವುದು, ಅದೇ ರೀತಿ ಮಣ್ಣಿನ ಮಡಕೆಯಲ್ಲಿ ಮಾಡಿದ ಆಹಾರ ಒಂದು ಆಹ್ಲಾದಕರ ರುಚಿಯನ್ನು ಪಡೆದಿರುತ್ತದೆ. ಮಣ್ಣಿನ ಪಾತ್ರೆಗಳಲ್ಲಿ ಆಹಾರ ಬೇಯಿಸುವುದರಿಂದ ನಮ್ಮ ದೇಹಕ್ಕೆ ಕಬ್ಬಿಣದ ಅಂಶ, ಕ್ಯಾಲ್ಸಿಯಂ ಅಂಶ ಹೇರಳವಾಗಿ ದೊರೆಯುತ್ತವೆ ಮತ್ತು ಮಣ್ಣಿನಲ್ಲಿ ಸಣ್ಣ ಸಣ್ಣ ರಂಧ್ರಗಳಿಂದ ಉಷ್ಣ ಮತ್ತು ತೇವಾಂಶ ಎರಡು ಸಮ ಪ್ರಮಾಣದಲ್ಲಿ ಪ್ರಸಾರವಾಗುತ್ತವೆ. ಈ ಎಲ್ಲ ಕಾರಣಗಳಿಂದ ಮಣ್ಣಿನ ಮಡಿಕೆಗಳು ತುಂಬಾ ಲಾಭದಾಯಕವಾಗಿವೆ. ಈ ಎಲ್ಲ ಕಾರಣಗಳಿಂದ ಮಣ್ಣಿನ ಮಡಕೆಯನ್ನು ಬಡವರ ಫ್ರಿಡ್ಜ್ ಎಂದೇ ಕರೆಯಬಹುದು.

-ಸುನಂದಾ ಪಟ್ಟಣಶೆಟ್ಟಿ

ವಿ. ವಿ. ವಿಜಯಪುರ

Advertisement

Udayavani is now on Telegram. Click here to join our channel and stay updated with the latest news.

Next