Advertisement

ಇದು ಪೊಲಿಟಿಕಲ್ ಲವ್ ಸ್ಟೋರಿ; ಎಂಎಲ್ ಎ ವೆಡ್ಸ್ ಐಎಎಸ್ ಆಫೀಸರ್!

03:43 PM May 03, 2017 | Sharanya Alva |

ತಿರುವನಂತಪುರಂ: ಇದೊಂದು ಅಚ್ಚರಿಯ ಪ್ರೇಮ ವಿವಾಹ…ಅರೇ ಇದೇನಪ್ಪಾ ಅಂತಹ ಸ್ಪೆಶಲ್ ಅಂತ ವ್ಯಂಗ್ಯವಾಡಬೇಡಿ, ಯಾಕೆ ಗೊತ್ತಾ. ಇದು ರಾಜಕಾರಣಿ ಮತ್ತು ಐಎಎಸ್ ಅಧಿಕಾರಿಣಿ ನಡುವಿನ ಪ್ರೇಮ್ ಕಹಾನಿ. ಇದು ಕೇರಳದ ಕಾಂಗ್ರೆಸ್ ಶಾಸಕ ಕೆಎಸ್ ಶಬರಿನಂದನ್ ಮತ್ತು ತಿರುವನಂತಪುರಂ ಉಪ ಜಿಲ್ಲಾಧಿಕಾರಿ ದಿವ್ಯ ಎಸ್.ಅಯ್ಯರ್ ನಡುವಿನ ಪ್ರೇಮ ವಿವಾಹದ ಕಥೆ!

Advertisement

ರಾಜಕಾರಣಿ ಶಬರಿನಂದನ್ ಹಾಗೂ ಐಎಎಸ್ ಅಧಿಕಾರಿ ದಿವ್ಯ ನಡುವಿನ ಲವ್ವಿ, ಡವ್ವಿ ಬಗ್ಗೆ ಊಹಾಪೋಹಗಳು ಹರಿದಾಡುತ್ತಿದ್ದವು. ಕೊನೆಗೂ ಶಬರಿನಂದನ್ ಫೇಸ್ ಬುಕ್ ನಲ್ಲಿ ಸ್ಟೇಟಸ್ ಅಪ್ ಡೇಟ್ ಮಾಡುವ ಮೂಲಕ ಇಬ್ಬರ ನಡುವಿನ ಪ್ರೇಮದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ನನ್ನ ಮದುವೆ ಬಗ್ಗೆ ತುಂಬಾ ಹತ್ತಿರದವರೊಬ್ಬರು ಪ್ರಶ್ನೆಯೊಂದನ್ನು ಕೇಳಿದ್ದರು.  ಹಾಗಾಗಿ ನಾನೀಗ ತುಂಬಾ ಖುಷಿಯಿಂದ ನಮ್ಮಿಬ್ಬರ ವಿವಾಹದ ಬಗ್ಗೆ ಘೋಷಿಸುತ್ತಿದ್ದೇನೆ ಎಂದು ಶಬರಿನಂದನ್ ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿದ್ದರು.

ನಾನು ತಿರುವನಂತಪುರಂನಲ್ಲಿ ಸಬ್ ಕಲೆಕ್ಟರ್ ಆಗಿದ್ದ ಡಾ.ದಿವ್ಯ ಎಸ್ ಅಯ್ಯರ್ ಅವರನ್ನು ಭೇಟಿಯಾಗಿದ್ದೆ, ಬಳಿಕ ನಾವು ತುಂಬಾ ಆಪ್ತರಾದೆವು. ನಂತರ ನಮ್ಮಿಬ್ಬರ ಇಷ್ಟ, ಆಲೋಚನೆ, ವಿಚಾರಧಾರೆಗಳೆಲ್ಲವೂ ಒಂದೇ ರೀತಿಯಾಗಿದ್ದವು. ಹೀಗೆ ನಾವು ಪ್ರೀತಿಸತೊಡಗಿದೆವು. ಹಾಗಾಗಿ ಇಬ್ಬರ ಪ್ರೀತಿಗೆ ಉಭಯ ಕುಟುಂಬಗಳ ಆಶೀರ್ವಾದ ಸಿಕ್ಕಿದೆ. ಶೀಘ್ರದಲ್ಲೇ ದಿವ್ಯ ನನ್ನ ಬಾಳ ಸಂಗಾತಿಯಾಗಳಿದ್ದಾಳೆ ಎಂದು ಫೇಸ್ ಬುಕ್ ನಲ್ಲಿ ಶಬರಿನಂದನ್ ತಿಳಿಸಿದ್ದಾರೆ.

33 ವರ್ಷದ ಶಬರಿನಂದನ್ ಹಾಗೂ 32 ವರ್ಷದ ದಿವ್ಯ ತಿರುವನಂತಪುರಂ ನಿವಾಸಿಗಳು. ಶಬರಿನಂದನ್ ಎಂಬಿಎ ಪದವೀಧರ. ರಾಜಕೀಯ ಪ್ರವೇಶಿಸುವ ಮುನ್ನ ಶಬರಿನಂದನ್ ಟಾಟಾ ಟ್ರಸ್ಟ್ ನಲ್ಲಿ ಉದ್ಯೋಗಿಯಾಗಿದ್ದರು. ತಂದೆ ಕಾರ್ತಿಕೇಯನ್ ನಿಧನದ ನಂತರ ಶಬರಿನಂದನ್ ರಾಜಕೀಯ ಪ್ರವೇಶಿಸಿದ್ದರು. 2015ರಲ್ಲಿ ಅರುವಿಕ್ಕಾರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು. 2016ರಲ್ಲಿಯೂ ಶಬರಿನಂದನ್ ಜಯ ಸಾಧಿಸಿದ್ದರು.

Advertisement

ದಿವ್ಯ ಮೆಡಿಸಿನ್ ಪದವೀಧರೆಯಾಗಿದ್ದು, 2013ರಲ್ಲಿ ಐಎಎಸ್ ಪಾಸ್ ಆಗಿದ್ದು, ಕೊಟ್ಟಾಯಂನಲ್ಲಿ ಅಸಿಸ್ಟೆಂಟ್ ಕಲೆಕ್ಟರ್ ಆಗಿ ಕಾರ್ಯನಿರ್ವಹಿಸಿದ್ದರು.

ತುಂಬಾ ಕುತೂಹಲದ ವಿಷಯ ಏನೆಂದರೆ ಶಬರಿನಂದನ್ ಕೂಡಾ ತಮ್ಮ ತಂದೆಯ ಹಾದಿಯನ್ನೇ ತುಳಿದಿದ್ದಾರೆ. ಶಬರಿನಂದನ್ ಮಾಜಿ ಸ್ಪೀಕರ್, ಕಾಂಗ್ರೆಸ್ ಮುಖಂಡ ದಿವಂಗತ ಜಿ.ಕಾರ್ತಿಕೇಯನ್ ಹಾಗೂ ಎಂಟಿ ಸುಲೇಖಾ ದಂಪತಿ ಪುತ್ರ. 

ಕೇರಳ ರಾಜಕಾರಣದಲ್ಲಿ ಅಂದು ಮಿಂಚುತ್ತಿದ್ದ ತರುಣ ರಾಜಕಾರಣಿಯಾಗಿದ್ದ ಕಾರ್ತಿಕೇಯನ್ ಹಾಗೂ ಕಾಲೇಜ್ ಪ್ರೊಫೆಸರ್ ಆಗಿದ್ದ ಸುಲೇಖಾ ಇಬ್ಬರು ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು. ಆದರೆ ಇಬ್ಬರ ಪ್ರೇಮಕ್ಕೆ ಎರಡೂ ಕುಟುಂಬದವರು ತೀವ್ರ ವಿರೋಧವ್ಯಕ್ತಪಡಿಸಿದ್ದರು. ಕೊನೆಗೂ ಕಾರ್ತಿಕೇಯನ್ ಹಾಗೂ ಸುಲೇಖಾ ವಿವಾಹವಾಗಿದ್ದರು. ತದನಂತರ ಕಾರ್ತಿಕೇಯನ್ ಮತ್ತು ಸುಲೇಖಾ ಅವರ ಪ್ರೇಮ ಮತ್ತು ವಿವಾಹದ ವಿಷಯವನ್ನಿಟ್ಟುಕೊಂಡು ನ್ಯಾಯಂ ವ್ಯಕ್ತಮಕ್ಕುನ್ನು ಎಂಬ ಮಲಯಾಳಂ ಸಿನಿಮಾ ಕೂಡಾ ಬಂದಿತ್ತು. ಇದರಲ್ಲಿ ಮಮ್ಮುಟ್ಟಿ ಹೀರೋ ಆಗಿ ನಟಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next