Advertisement
ಮಹಾರಾಷ್ಟ್ರ ಮೂಲದ ಪೊಲೀಸ್ ಅಧಿಕಾರಿ ದಂಪತಿ, ತಾವು ಜಗತ್ತಿನ ಅತಿ ಎತ್ತರದ ಶಿಖರ ಎವರೆಸ್ಟ್‌ನ ತುದಿ ತಲುಪಿರುವುದಾಗಿ ನಕಲಿ ಫೋಟೋ (ಫೋಟೋಶಾಪ್ ಮಾಡಿದ ಚಿತ್ರ) ತೋರಿಸಿ ಸಾಧನೆ ಮಾಡಿದವರಂತೆ ಬೀಗಿದ್ದರು. ಆದರೆ ಆ ನಕಲಿ ಫೋಟೋದಲ್ಲಿ ಇದ್ದ ಅಸಲಿ ಸಾಧಕ ಈ ದಂಪತಿಯ ವಂಚನೆ ಬಯಲಿಗೆಳೆದಿದ್ದಾರೆ. ದಂಪತಿ “ತಪ್ಪು ಮಾಹಿತಿ ನೀಡಿ ಇಲಾಖೆಯ ಹಾದಿತಪ್ಪಿಸಿ ದ್ದಾರೆ’ ಎಂದು ಪರಿಗಣಿಸಿದ ಮಹಾರಾಷ್ಟ್ರ ಪೊಲೀಸ್ ಇಲಾಖೆ ಅವರನ್ನು ಕೆಲಸದಿಂದ ವಜಾ ಮಾಡಿದೆ.
Related Articles
ಪರ್ವತಾರೋಹಣ ಹವ್ಯಾಸ ಹೊಂದಿರುವ ಮಹಾರಾಷ್ಟ್ರದ ದಿನೇಶ್ ಹಾಗೂ ತಾರಕೇ ಶ್ವರಿ ರಾಥೋಡ್ ದಂಪತಿ, ತಾವು 2016ರ ಮೇ 23ರಂದು ಮೌಂಟ್ ಎವರೆಸ್ಟ್ ಏರಿದ್ದಾಗಿ ಹೇಳಿ, ಪರ್ವತದ ತುತ್ತ ತುದಿ ಯಲ್ಲಿ ನಿಂತು, ಭಾರತದ ಧ್ವಜ ಹಿಡಿದು ತೆಗೆಸಿಕೊಂಡ ಚಿತ್ರವೊಂದನ್ನು ಸಂಬಂಧಿ ಸಿದ ಇಲಾಖೆಗೆ ನೀಡಿದ್ದರು. ಇದನ್ನು ಸತ್ಯ ಎಂದು ನಂಬಿದ ನೇಪಾಲ ಆಡಳಿತ ಇವರಿಗೆ ಪ್ರಮಾಣಪತ್ರವನ್ನೂ ದಯಪಾಲಿ ಸಿತ್ತು. ಅಲ್ಲದೆ ಎವರೆಸ್ಟ್ ಏರಿದ ಮೊದಲ ದಂಪತಿ ಎಂಬ ಪುಕ್ಕಟೆ ಪ್ರಚಾರವೂ ಸಿಕ್ಕಿತ್ತು.
Advertisement