ಶಾಲಾ ಕಾಲೇಜುಗಳನ್ನು, ಕ್ಲಬ್ ಗಳನ್ನು ಕೇಂದ್ರಿಕರಿಸಿಕೊಂಡು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊ ಳ್ಳಲಾಗಿದ್ದು, ಹೊಸಂಗಡಿ ಪೇಟೆಯಲ್ಲಿ ಜರುಗಿದ ಮ್ಯಾರಥಾನ್ ಅಭೂತಪೂರ್ವ ಯಶಸ್ಸನ್ನು ಕಂಡಿತು. ಸುಮಾರು 500ಕ್ಕೂ ಮಿಕ್ಕಿದ ಯುವಕರು ಈ ಓಟದಲ್ಲಿ ಭಾಗಿಯಾಗಿ ಅಮಲು ಪದಾರ್ಥಗಳ ವಿರುದ್ಧ ಪ್ರತಿಜ್ಜೆ ಕೈಗೊಂಡರು.
ಉಪ್ಪಳ ಮಣ್ಣಂಗುಳಿ ಮೈದಾನದಲ್ಲಿ ನಡೆಯುತ್ತಿರುವ ಬಿಚ್ಚು ಬಾಯ್ಸ ಆರ್ಟ್ಸ್ ಮತ್ತು ನ್ಪೋರ್ಟ್ಸ್ ಕ್ಲಬ್ಬಿನ ಪ್ರಿಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟದ ವೇದಿಕೆಯು ಮಾದಕವಸ್ತುಗಳ ವಿರುದ್ಧದ ಚಿತ್ರಲಹರಿ ಕಾರ್ಯಕ್ರಮಕ್ಕೆ ಸಾಕ್ಷಿಯಾಯಿತು. ಮಂಜೇಶ್ವರದ ಜನಮೈತ್ರಿ ಪೊಲೀಸರು ವಿವಿಧ ಸಂಘಟನೆಗಳ ಜೊತೆಗೂಡಿ ಹಮ್ಮಿಕೊಂಡ ಈ ಕಾರ್ಯಕ್ರಮದಲ್ಲಿ ಕಾಸರಗೋಡು ಜಿಲ್ಲೆಯ ಹತ್ತಕ್ಕೂ ಮಿಕ್ಕಿದ ಕಲಾವಿದರು ಪಾಲ್ಗೊಂಡರು.
Advertisement
ಅಂತಾರಾಷ್ಟ್ರೀಯ ಖ್ಯಾತಿಯ ವಿಕಲಚೇತನ ಕಲಾವಿದ ಗಣೇಶ್ ಕುಮಾರ್ ಕುಂಞಮಂಗಳಂ ಬಾಯಿಯ ಮೂಲಕ ಚಿತ್ರ ರಚಿಸುವ ಮೂಲಕ ಚಿತ್ರಲಹರಿಗೆ ಚಾಲನೆಯನ್ನು ನೀಡಿದರು. ಬಾಯಿಯಲ್ಲಿ ಬ್ರಶ್ ಇಟ್ಟು ಮಾದಕದ್ರವ್ಯ ಬಳಕೆಯಿಂದಾಗುವ ಮಾರಕತೆಯ ಕುರಿತು ಕ್ಷಣಾರ್ಧದಲ್ಲಿ ಅವರು ರಚಿಸಿದ ಚಿತ್ರ ಎಲ್ಲರನ್ನೂ ದಿಗೂ¾ಢಗೊಳಿಸಿತು.ಕಾಸರಗೋಡು ಜಿಲ್ಲೆಯ ಸುಪ್ರಸಿದ್ಧ ಚಿತ್ರಕಲಾವಿದರಾದ ಅಶೋಕನ್ ಇ.ವಿ, ನಾರಾಯಣ ಮಾಸ್ತರ್, ಬಾಬು ಮೇಕಾಡನ್, ಸುರೇಶ್ ಎಂ, ಶಿವನ್ ಕೈಲಾಶ್‌ಮ ಮೋಹನಚಂದ್ರನ್,ಕೆಆರ್ ಸಿ ತಾಯನ್ನೂರ್, ಶಿಶುಪಾಲನ್ ಮಾಯಿಚ್ಚ ತಮ್ಮ ಕಲ್ಪನೆಯ ಚಿತ್ತಾರಕ್ಕೆ ಸೃಷ್ಟಿ ನೀಡಿದರು. ಕ್ರಿಕೆಟ್ ಕ್ರೀಡಾಂಗಣದಲ್ಲಿ ನೆರೆದ ಯುವಕ್ರೀಡಾಳುಗಳು ಈ ಅದ್ಭುತ ಕ್ಷಣಗಳಿಗೆ ಸಾಕ್ಷಿಯಾದರು. ಕವಿ ವಿನೋದ್ ಕುಮಾರ್ ಪರಂಬಳ ಕಾವ್ಯವಾಚನಗೈದರು.
Related Articles
Advertisement
ಮಾದಕವಸ್ತುಗಳ ವಿರುದ್ಧದ ಸಂದೇಶದೊಂದಿಗೆ ಹಮ್ಮಿಕೊಳ್ಳಲಾದ ಎಂಪಿಎಲ್ ಕ್ರಿಕೆಟ್ ಪಂದ್ಯಾಟವನ್ನು ಕಾಸರಗೋಡು ಜಿಲ್ಲಾಧಿಕಾರಿ ಉದ್ಘಾಟಿಸಿದರು. ಕ್ರಿಕೆಟ್ ಆಡುವ ಮೂಲಕ ಪಂದ್ಯಾಟಕ್ಕೆ ಚಾಲನೆ ನೀಡಿದ ಅವರು ಬಾಲನ್ನು ಬೌಂಡರಿಗಟ್ಟಿದರು.