Advertisement

ವ್ಯಕ್ತಿ ನಿರ್ಮಾಣಕ್ಕೆ ಮನಸ್ಸು , ಹೃದಯದ ಶಿಕ್ಷಣ ಅಗತ್ಯ

01:16 AM Oct 10, 2021 | Team Udayavani |

ಉಡುಪಿ: ವ್ಯಕ್ತಿ ನಿರ್ಮಾಣಕ್ಕೆ ಮನಸ್ಸು ಮತ್ತು ಹೃದಯದ ಶಿಕ್ಷಣ ಅಗತ್ಯ ಎಂದು ಬ್ರಿಟಿಷ್‌ ಕೊಲಂಬಿಯಾ ವಿ.ವಿ. ಅಧ್ಯಕ್ಷ ಮತ್ತು ಕುಲಪತಿ ಡಾ| ಸಾಂತಾ ಜೆರೊಮಿ ಓನೋ ಹೇಳಿದ್ದಾರೆ.

Advertisement

ಶನಿವಾರ ಮಣಿಪಾಲ ಮಾಹೆ ವಿ.ವಿ.ಯ 29ನೇ ಘಟಿಕೋತ್ಸವದ ಮೊದಲ ದಿನದ ಸಮಾರಂಭದಲ್ಲಿ ಅವರು ಆನ್‌ಲೈನ್‌ ಮೂಲಕ ಮಾತನಾಡಿದರು.

ಅನಾರೋಗ್ಯ, ಹವಾಮಾನ ಬದಲಾವಣೆ, ಪರಿಸರ ನಾಶ, ಬಡತನ ಮತ್ತು ಯುದ್ಧ ಹೀಗೆ ವಿವಿಧ ಸವಾಲುಗಳನ್ನು ಜಗತ್ತು ಎದುರಿಸುತ್ತಿದೆ. ನಾವು ಈ ಸವಾಲುಗಳನ್ನು ಎದುರಿಸಬೇಕು ಮತ್ತು ಪದವೀಧರರು ಸ್ವಯಂಪ್ರೇರಣೆಯಿಂದ ಇದಕ್ಕೆ ನೆರವಾಗಬೇಕು ಎಂದರು.

ನಮ್ಮ ವಿದ್ಯಾರ್ಥಿಗಳು ಪದವೀಧರರಾಗುತ್ತಿದ್ದು ಅವರಿಗೆ ಉತ್ತಮ ಭವಿಷ್ಯವನ್ನು ಹಾರೈಸುತ್ತೇವೆ. ಮಾಹೆಯ ವಿದ್ಯಾರ್ಥಿಗಳಾಗಿ ಮಾಹೆಗೆ ಮತ್ತು ಪೋಷಕರಿಗೆ ಹೆಮ್ಮೆ ತರುತ್ತೀರಿ ಎಂಬ ವಿಶ್ವಾಸವಿದೆ ಎಂದು ಸಹಕುಲಾಧಿಪತಿ ಡಾ| ಎಚ್‌.ಎಸ್‌.ಬಲ್ಲಾಳ್‌ ಹೇಳಿದರು.

ಇದನ್ನೂ ಓದಿ:ಐಟಿ ದಾಳಿಯ ಹಿಂದೆ ಅನೇಕ ಲೆಕ್ಕಾಚಾರ: ಡಿ.ಕೆ.ಶಿವಕುಮಾರ್‌

Advertisement

ಶ್ರೇಷ್ಠ ವಿ.ವಿ.ಗಳಲ್ಲಿ ಮಾಹೆ
31 ವಿಭಾಗಗಳಲ್ಲಿ 375 ಶೈಕ್ಷಣಿಕ ಕಾರ್ಯಕ್ರಮಗಳ 2,125 ವಿದ್ಯಾರ್ಥಿಗಳಿಗೆ ಶುಭಹಾರೈಸಲು ಸಂತೋಷ ಪಡುತ್ತಿದ್ದೇನೆ.ಕೊರೊನಾ ಕಾಲಘಟ್ಟದಲ್ಲಿ ಅವಿರತವಾಗಿ ಮಾಹೆ ಕುಟುಂಬ ಶ್ರಮಿಸಿದೆ. ನ್ಯಾಶನಲ್‌ ಇನ್‌ಸ್ಟಿಟ್ಯೂಶನಲ್‌ ರ್‍ಯಾಂಕಿಂಗ್‌ ಫ್ರೇಮ್ ವರ್ಕ್‌ (ಎನ್‌ಐಆರ್‌ಎಫ್) ಭಾರತದ ಶ್ರೇಷ್ಠ ವಿ.ವಿ.ಗಳಲ್ಲಿ ಒಂದಾಗಿ ಮಾಹೆಯನ್ನು ಪರಿಗಣಿಸಿದೆ. ಇದುವೇ ಡಾ| ಟಿಎಂಎ ಪೈಯವರ ಕನಸಾಗಿತ್ತು. ಇದೀಗ ಸಮೂಹ ಯತ್ನದಿಂದ ನನಸಾಗುತ್ತಿದೆ ಎಂದು ಕುಲಪತಿ ಲೆ| ಜ| ಡಾ| ಎಂ.ಡಿ. ವೆಂಕಟೇಶ್‌ ಹರ್ಷ ವ್ಯಕ್ತಪಡಿಸಿದರು.

ನಾವು ಈಗ ಪದವೀಧರ ಸಮಾವೇಶ ದಲ್ಲಿ ಹೆಮ್ಮೆ ಪಡುತ್ತಿದ್ದೇವೆ. ನಮಗೆಲ್ಲರಿಗೂ ಕಠಿನ ಸಮಯವಿದು. ಆದರೆ ನಮ್ಮ ದೃಢತೆ ಸವಾಲುಗಳಿಂದ ಹೊರಬರಲು ಸಹಕಾರಿಯಾಗಲಿದೆ ಎಂದು ಸಹಕುಲಪತಿ ಡಾ| ಪಿಎಲ್‌ಎನ್‌ಜಿ ರಾವ್‌ ಹೇಳಿದರು.

ಮಾಹೆ ಟ್ರಸ್ಟ್‌ನ ಟ್ರಸ್ಟಿ ವಸಂತಿ ಆರ್‌. ಪೈ, ಅಕಾಡೆಮಿ ಆಫ್ ಜನರಲ್‌ ಎಜುಕೇಶನ್‌ ಕುಲಸಚಿವ ಮತ್ತು ಮಾಹೆ ಟ್ರಸ್ಟ್‌ ಅಧ್ಯಕ್ಷ ಡಾ| ರಂಜನ್‌ ಆರ್‌. ಪೈ, ಸಹಕುಲಪತಿಗಳಾದ ಡಾ| ಸಿ.ಎಸ್‌. ತಮ್ಮಯ್ಯ, ಡಾ| ದಿಲೀಪ್‌ನಾಯ್ಕ, ಡಾ|ಪ್ರಜ್ಞಾ ರಾವ್‌, ಮೌಲ್ಯಮಾಪನ ಕುಲಸಚಿವ ಡಾ| ವಿನೋದ್‌ ವಿ. ಥಾಮಸ್‌ ಉಪಸ್ಥಿತರಿದ್ದರು. ಕುಲಸಚಿವ ಡಾ| ನಾರಾಯಣ ಸಭಾಹಿತ್‌ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next