Advertisement

ಬದಲಾದ ನದಿ ಪಾತ್ರಕ್ಕೆ ಶಾಶ್ವತ ತಡೆಗೋಡೆ

09:59 AM Oct 26, 2019 | Team Udayavani |

ಬೆಳ್ತಂಗಡಿ: ನೈಸರ್ಗಿಕ ವಿಕೋಪದಿಂದ ನದಿ ಪಾತ್ರ ಬದಲಾಗಿದ್ದು, ಹಲವು ವರ್ಷಗಳಿಂದ ಬೆಳೆದ ಕೃಷಿ ಪ್ರದೇಶ ಪ್ರವಾಹಕ್ಕೆ ತುತ್ತಾಗಿದೆ. ನದಿ ಅಂಚಿನಲ್ಲಿ ಶಾಶ್ವತ ತಡೆಗೋಡೆ ನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

Advertisement

ಅವರು ಬೆಳ್ತಂಗಡಿ ತಾಲೂಕಿನ ಅಂತರ ಮತ್ತು ಅರಣೆಪಾದೆಗೆ ಗುರುವಾರ ಭೇಟಿ ನೀಡಿ ಸಂತ್ರಸ್ತರ ಮೊರೆ ಆಲಿಸಿ ಮಾಧ್ಯಮದವರೊಂದಿಗೆ ಮಾತನಾಡಿದರು.
ಪ್ರವಾಹದಿಂದ ವಿಶೇಷವಾಗಿ ವೆಂಟೆಡ್‌ ಡ್ಯಾಂಗಳಿಗೆ ಹಾನಿಯಾಗಿದೆ. ಸರಕಾರ ನದಿ ಪಾತ್ರ ಕೊಚ್ಚಿಹೋಗಿರುವಲ್ಲಿ ಹೆಕ್ಟೇರ್‌ಗೆ 10 ಸಾವಿರ ಇದ್ದಲ್ಲಿ ಹೆಚ್ಚುವರಿ 38 ಸಾವಿರ ರೂ. ಪರಿಹಾರ ಘೋಷಿಸಿದೆ. ಶಾಶ್ವತ ಪರಿಹಾರವಾಗಿ ನದಿಯ ಎರಡೂ ಬದಿ ಶಾಶ್ವತ ತಡೆಗೋಡೆ ಮತ್ತು ಸೇತುವೆ ಮರು ನಿರ್ಮಾಣಕ್ಕೆ ಸರಕಾರ ಶೀಘ್ರ ಕ್ರಮ ಕೈಗೊಳ್ಳಲಿದೆ. ನದಿ ಬದಿ 3 ಕಿ.ಮೀ. ತಡೆಗೋಡೆ ನಿರ್ಮಿಸಲು ಶಾಸಕರು ಮನವಿ ಮಾಡಿದ್ದು, ಶೀಘ್ರ ಮಂಜೂರು ಮಾಡಿಸುವುದಾಗಿ ಭರವಸೆ ನೀಡಿದರು.

ಇದೇವೇಳೆ ಸಚಿವರು ಗ್ರಾಮಸ್ಥರ ಬೇಡಿಕೆಗಳನ್ನು ಆಲಿಸಿದರು. ಅರಣೆಪಾದೆಗೆ ಹೊಸ ಸೇತುವೆಯನ್ನು ಮಂಜೂರು ಮಾಡುವ ಕುರಿತು ಮುಖ್ಯಮಂತ್ರಿ ಅವರೊಂದಿಗೆ ಮಾತುಕತೆ ನಡೆಸಿ ಮುಂದಿನ ಬಜೆಟ್‌ನಲ್ಲಿ ಅನುದಾನ ಒದಗಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಶಾಸಕ ಹರೀಶ್‌ ಪೂಂಜಾ, ಚಾರ್ಮಾಡಿ ಗ್ರಾ.ಪಂ. ಅಧ್ಯಕ್ಷೆ ಶಶಿಕಲಾ, ತಾ.ಪಂ. ಸದಸ್ಯರಾದ ಕೊರಗಪ್ಪ, ಶಶಿಧರ ಕಲ್ಮಂಜ, ತಾಲೂಕು ಬಿಜೆಪಿ ಅಧ್ಯಕ್ಷ ಜಯಂತ ಕೋಟ್ಯಾನ್‌, ತಾಲೂಕು ಬಿಜೆಪಿ ಮಾಜಿ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಬಿಜೆಪಿ ತಾಲೂಕು ಕಾರ್ಯದರ್ಶಿ ಸೀತಾರಾಮ ಬಿ.ಎಸ್‌., ಐಜಿ ಮಿಥುನ್‌ ಚಕ್ರವರ್ತಿ, ಎಸ್ಪಿ ಲಕ್ಷ್ಮೀಪ್ರಸಾದ್‌, ತಹಶೀಲ್ದಾರ್‌ ಗಣಪತಿ ಶಾಸಿŒ, ಸರ್ಕಲ್‌ ಇನ್‌ಸ್ಪೆಕ್ಟರ್‌ಸಂದೇಶ್‌ ಪಿ.ಜಿ., ಧರ್ಮಸ್ಥಳ ಎಸ್‌. ಐ. ಅವಿನಾಶ್‌ ಉಪಸ್ಥಿತರಿದ್ದರು.

ಮಾದಕ ವಸ್ತು ನಿಯಂತ್ರಣಕ್ಕೆ ಮಂಗಳೂರು, ಮಣಿಪಾಲದಲ್ಲಿ ಹೊಸ ಠಾಣೆ
ಮಾದಕ ದ್ರವ್ಯ ನಿಯಂತ್ರಣಕ್ಕಾಗಿ ಕಠಿನ ಕ್ರಮ ಕೈಗೊಳ್ಳವುಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ. ಮಾದಕದ್ರವ್ಯಗಳ ಮಾರಾಟವನ್ನು ನಿಯಂತ್ರಿಸುವ ಗುರಿಯೊಂದಿಗೆ ಉಡುಪಿ ಮಣಿಪಾಲ ಹಾಗೂ ಮಂಗಳೂರಿಗೆ ಹೊಸ ಠಾಣೆಗಳನ್ನು ಆರಂಭಿಸಲಾಗುವುದು. ಕರಾವಳಿ ಕಾವಲು ಪಡೆಯನ್ನು ಬಲಿಷ್ಠಗೊಳಿಸಲು ಬೋಟ್‌ಗಳು ಮತ್ತು ಶಸ್ತ್ರಾಸ್ತ್ರಗಳನ್ನು ಒದಗಿಸಲಾಗುವುದು ಎಂದು ಬೊಮ್ಮಾಯಿ ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next