Advertisement
ಅರೆಹೊಳೆ ಮದಗ ಹಾಗೂ ಅಲ್ಲಿನ ಸುತ್ತಮುತ್ತಲಿನ ಹಾಡಿಯ ನೀರು ಈ ರಾಜಕಾಲುವೆಯಲ್ಲಿ ಹರಿದು ಬಂದು, ಸೌಪರ್ಣಿಕ ನದಿ ಸೇರಬೇಕು. ಆದರೆ ಈ ಕಾಲುವೆ ಮಣ್ಣಿನಿಂದ ನಿರ್ಮಿಸುವುದರಿಂದ ಭಾರೀ ಮಳೆಗೆ ಅಲ್ಲಲ್ಲಿ ಒಡೆದು ಹೋಗಿ ಕೃಷಿ ಭೂಮಿಗಳಿಗೆ ಗುಡ್ಡದ ಮಣ್ಣು ನುಗ್ಗಿ, ಕೃಷಿ ಚಟುವಟಿಕೆ ತುಂಬಾ ತೊಂದರೆ ಆಗುತ್ತಿದೆ.
Related Articles
Advertisement
ಶೀಘ್ರ ತಡೆಗೋಡೆ ನಿರ್ಮಿಸಿ
ಈ ರಾಜಕಾಲುವೆಗೆ 100 ವರ್ಷಗಳ ಇತಿಹಾಸವಿದೆ. ಹಿಂದೆ ಗುಡ್ಡದಿಂದ ಹರಿದು ಬರುವ ನೀರಿನ ಪ್ರಮಾಣ ಅಷ್ಟೊಂದು ಇರಲಿಲ್ಲ. ಹಾಗಾಗಿ ಸಮಸ್ಯೆ ಯಾಗುತ್ತಿರಲಿಲ್ಲ. ಈಗ ಅಂದರೆ ಕಳೆದ 5 ವರ್ಷಗಳಿಂದ ನೀರಿನ ಹರಿವು ಹೆಚ್ಚಿದ್ದು, ಮಣ್ಣಿನಿಂದ ನಿರ್ಮಿಸುವ ತಡೆಗೋಡೆ ಭಾರೀ ಮಳೆ ಬಂದಾಗ ಒಡೆದು ಹೋಗುತ್ತದೆ. ಅದಕ್ಕಾಗಿ ಶಾಶ್ವತ ಅಂದರೆ ಕಲ್ಲುಗಳನ್ನು ಕಟ್ಟಿ, ಸಿಮೆಂಟ್ (ರಿವಿಟ್‌ಮೆಂಟ್) ಹಾಕಿ ತಡೆಗೋಡೆ ನಿರ್ಮಿಸಿದರೆ ಈ ಸಮಸ್ಯೆ ಇರುವುದಿಲ್ಲ. ಈಗಿನ್ನು ಮುಂಗಾರು ನಾಟಿ ಕಾರ್ಯ ಆರಂಭವಾಗಲಿದ್ದು, ತಡೆಗೋಡೆ ನಿರ್ಮಿಸ ದಿದ್ದರೆ ಮತ್ತೆ ಕೃಷಿಗೆ ಹಾನಿಯಾಗುವ ಭೀತಿಯಿದೆ ಎಂದು ಇಲ್ಲಿನ ರೈತರು ಆತಂಕ ವ್ಯಕ್ತಪಡಿಸಿದ್ದಾರೆ.
ಸುದಿನ ವರದಿ
ಅರೆಹೊಳೆಯ ರಾಜಕಾಲುವೆ ಒಡೆದು, ಇಲ್ಲಿನ ಕೃಷಿ ಪ್ರದೇಶಗಳಿಗೆ ಹಾನಿಯಾಗುತ್ತಿರುವ ಬಗ್ಗೆ, ಶಾಶ್ವತ ತಡೆಗೋಡೆ ಬೇಕು ಎನ್ನುವ ಕುರಿತಂತೆ ‘ಉದಯವಾಣಿ ಸುದಿನ’ವು ಕಳೆದ ವರ್ಷದ ಜು. 20ರಂದು ವಿಶೇಷ ವರದಿ ಪ್ರಕಟಿಸಿತ್ತು.
ಮನವಿ ನೀಡಿದರೂ ಪ್ರಯೋಜನವಾಗಿಲ್ಲ
ಈ ಕಾಲುವೆ ಅಲ್ಲಲ್ಲಿ ಒಡೆದು ಹೋಗಿ ಕೃಷಿ ಭೂಮಿಗಳಿಗೆ ಗುಡ್ಡದ ಮಣ್ಣು ನುಗ್ಗಿ ಕೃಷಿ ಚಟುವಟಿಕೆಗೆ ತೊಂದರೆಯಾಗುತ್ತಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಗ್ರಾ.ಪಂ. ಅಧ್ಯಕ್ಷರ ಸಹಿತ ಎಲ್ಲರಿಗೂ ಮನವಿ ಮಾಡಿದರೂ, ಏನೂ ಪ್ರಯೋಜನವಾಗಿಲ್ಲ. -ಮಂಜುನಾಥ್ ನಾವುಂದ ಕೆಳಾಬದಿ, ಕೃಷಿಕರು