Advertisement

ರಾಷ್ಟ್ರಭಕ್ತಿ ಮೂಡಿಸುವ ಪಾಠ ಅವಶ್ಯ

12:15 PM Jul 10, 2018 | |

ಬೀದರ: ಶೈಕ್ಷಣಿಕ ಪಠ್ಯಗಳಲ್ಲಿ ರಾಷ್ಟ್ರ ಭಕ್ತಿ ಮೂಡಿಸುವ ಪಾಠಗಳನ್ನು ಅಳವಡಿಸುವ ಅವಶ್ಯಕತೆ ಇದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಪ್ರೇಮಸಾಗರ ದಾಂಡೆಕರ ಹೇಳಿದರು.

Advertisement

ನಗರದ ಸಿದ್ಧಾರೂಢ ಆಶ್ರಮದ ಕಲ್ಯಾಣ ಮಂಟಪದಲ್ಲಿ ನಡೆದ ಅಖೀಲ ಭಾರತೀಯ ವಿದ್ಯಾರ್ಥಿ ಪರಿಷತ್‌ ಸಂಘಟನೆಯ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಇಂದಿನ ಯುವಶಕ್ತಿಯ ಮೇಲೆ ರಾಷ್ಟ್ರದ ಭವಿಷ್ಯ ನಿಂತಿದ್ದು, ಪ್ರತಿಯೊಬ್ಬರು ಸ್ವದೇಶಿ ವಸ್ತುಗಳನ್ನು ಬಳಸುವುದರ ಮೂಲಕ ರಾಷ್ಟ್ರ ಪ್ರೇಮ ಬೆಳೆಸಿಕೊಳ್ಳಬೇಕು. ಅಲ್ಲದೆ ಇಂದಿನ ಶೈಕ್ಷಣಿಕ ಪಠ್ಯಕ್ರಮದಲ್ಲಿ ರಾಷ್ಟ್ರ ಭಕ್ತಿಯ ಪಾಠ ಅಳವಡಿಸುವ ಅವಶ್ಯಕತೆ ಹೆಚ್ಚಿದ್ದು, ಯುವಕರಲ್ಲಿ ದೇಶ ಪ್ರೇಮ ಜಾಗೃತಗೊಳಿಸುವ ಕಾರ್ಯ ನಡೆಯಬೇಕಿದೆ. ಈ ಮೂಲಕ ಉತ್ತಮ ಸಮಾಜ ನಿರ್ಮಿಸಲು ಸಾಧ್ಯ ಎಂದರು.

ಪ್ರೊ| ರಮೇಶ ಕುಲಕರ್ಣಿ ಮಾತಾನಾಡಿ, ಇಂದಿನ ಯುವಕ ಯುವತಿಯರು ಪಾಶ್ಚಿಮಾತ್ಯ ಸಂಸ್ಕೃತಿಗೆ ಆಕರ್ಷಿತರಾಗುತ್ತಿದ್ದಾರೆ.  ಭಾರತದ ಸಂಸ್ಕೃತಿಯನ್ನು ಇಡೀ ವಿಶ್ವವೇ ಅನುಸರಿಸುತ್ತಿರುವ ಈ ದಿನಗಳಲ್ಲಿ ನಾವೇ ಇತರ ದೇಶದ ಸಂಸ್ಕೃತಿಗೆ ಮೊರೆ ಹೋಗಬಾರದು. ದೇಶದ ಸಂಸ್ಕೃತಿ ಮತ್ತು ಪರಂಪರೆ ಉಳಿಸಿ ಬೆಳೆಸುವ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಎಬಿವಿಪಿ ರಾಜ್ಯ ಸಹ ಕಾರ್ಯದರ್ಶಿ ರೇವಣಸಿದ್ಧ ಜಾಡರ ಮಾತನಾಡಿ, ಆದರ್ಶ ವ್ಯಕ್ತಿಗಳನ್ನು ನಿರ್ಮಿಸುವ ನಿಟ್ಟಿನಲ್ಲಿ ಸಂಘಟನೆ ಕೆಲಸ ನಿರ್ವಹಿಸುತ್ತಿದೆ. ಭ್ರಷ್ಟಾಚಾರ ಮುಕ್ತ, ಬಡತನ ಮುಕ್ತ ಹಾಗೂ ಸಮಾನತೆಗಾಗಿ ಸಂಘಟನೆ ಅನೇಕ ಹೋರಾಟಗಳನ್ನು ಮಾಡಿಕೊಂಡು ಬಂದಿದೆ. 

Advertisement

ದೇಶದ ಮೂಲ ಸಂಸ್ಕೃತಿ, ಪರಂಪರೆ ಉಳಿಸುವ ನಿಟ್ಟಿನಲ್ಲಿ ಕೂಡ ಸಂಘಟನೆ ಕಾರ್ಯ ನಿರ್ವಹಿಸುತ್ತಿದ್ದು, ಎಬಿವಿಪಿ ಮೂಲಕ ವಿದ್ಯಾರ್ಥಿಗಳಲ್ಲಿ ದೇಶ ಪ್ರೇಮ ಮೂಡಿಸುವ ಕಾರ್ಯ ಇಂದಿಗೂ ನಡೆಯುತ್ತಿದೆ ಎಂದು ಹೇಳಿದರು. 

ಇಂದಿರಾಬಾಯಿ ಗುರತಪ್ಪಾ ಶೆಟ್ಟಕಾರ, ಲಕ್ಷ್ಮಣ ಪೂಜಾರಿ, ಕಾರ್ಯಕಾರಣಿ ಸದಸ್ಯ ಸಂಗಮೇಶ ಲದ್ದೆ, ಶಿವನಂದಾ, ಭವಾನಿ, ಸಚೀನ, ಎಬಿವಿಪಿ ನಗರ ಉಪಧ್ಯಕ್ಷ ಅರವಿಂದ ಸುಂದಳಕರ ಹಾಗೂ ಅನೇಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next