Advertisement

75ರ ಇಳಿ ಹರೆಯದಲ್ಲಿಯೂ ಬತ್ತದ ಉತ್ಸಾಹದ ಕೃಷಿಕ

10:02 AM Dec 20, 2019 | mahesh |

ಹೆಸರು: ಚುಕುಡ ಮೂಲ್ಯ
ಏನೇನು ಕೃಷಿ: ಭತ್ತ, ತೆಂಗು, ಕಂಗು, ಮಲ್ಲಿಗೆ , ಹೈನುಗಾರಿಕೆ
ಎಷ್ಟು ವರ್ಷ : ಸುಮಾರು 50 ವರ್ಷಗಳಿಂದ
ಕೃಷಿ ಪ್ರದೇಶ : 3 ಎಕರೆ

Advertisement

ನಾವು ಅದೆಷ್ಟು ಆಧುನಿಕಗೊಂಡರೂ ಉಣ್ಣುವ ಅನ್ನವನ್ನು ಸೃಷ್ಟಿಸಲಾರೆವು; ಆದ್ದರಿಂದಲೇ ಭೂಮಿಯ ಜತೆಗೆ ಒಡನಾಡುವ ಕೃಷಿಗೆ ಮಹತ್ವದ ಸ್ಥಾನ. ಇದೇ ಹಿನ್ನೆಲೆಯಲ್ಲಿ ಉದಯವಾಣಿಯು ಕಿಸಾನ್‌ ದಿನಾಚರಣೆಯ ಸಂದರ್ಭ ರೈತರ ಸಾಧನೆಯ ಚಿತ್ರಣ ನೀಡುವ “ಕೃಷಿ ಕಥನ’ವನ್ನು ಆರಂಭಿಸಿದೆ. ಈ ಹೊಸ ಸರಣಿಯು ಇನ್ನಷ್ಟು ಮಂದಿಗೆ ಪ್ರೇರಣೆಯಾಗಲೆಂದು ಸರಕಾರದಿಂದ ಪ್ರಶಸ್ತಿ ಪುರಸ್ಕಾರಗಳಿಂದ ಗುರುತಿಸಲ್ಪಟ್ಟ ರೈತರನ್ನು ಪರಿಚಯಿಸುವ ಪ್ರಯತ್ನ.

ಬೆಳ್ಮಣ್‌: ಒಂದು ಕಾಲದಲ್ಲಿ ರೈತರ ಪಾಲಿಗೆ ಮೂಲ ಕೃಷಿಯೇ ಭತ್ತ. ಆದರೆ ನಗರೀಕರಣ, ವಾಣಿಜ್ಯ ಬೆಳೆಗಳ ಭರಾಟೆಯಲ್ಲಿ ಭತ್ತ ಕೃಷಿಯೇ ಕಣ್ಮರೆಯಾಗುತ್ತಿದ್ದು ಹೊಲ-ಗದ್ದೆ ಬೆಳೆಯುತ್ತಿರುವ ರೈತರೇ ಅಪರೂಪವಾಗುತ್ತಿದ್ದಾರೆ. ಮುಂಡ್ಕೂರು ಮುಲ್ಲಡ್ಕ ನಾನಿಲ್ತಾರ್‌ನ 75ರ ಹರೆಯದ ಚುಕುಡ ಮೂಲ್ಯ ಈಗಲೂ ಸುಮಾರು 3 ಎಕರೆ ಜಮೀನಿನಲ್ಲಿ ಭತ್ತ, ತೆಂಗು, ಕಂಗು, ಮಲ್ಲಿಗೆ ಬೆಳೆ ಬೆಳೆಯುವುದರ ಜತೆಗೆ ಪ್ರಗತಿಪರ ಕೃಷಿಕರೆನಿಸಿದ್ದು 2015ರ ಕಾರ್ಕಳ ತಾಲೂಕು ಮಟ್ಟದ ಉತ್ತಮ ಕೃಷಿಕ ಪ್ರಶಸ್ತಿ ಗಳಿಸಿ ಯುವ ಪೀಳಿಗೆಗೆ ಮಾದರಿ ಎನಿಸಿದ್ದಾರೆ. ತೋಟಗಾರಿಕಾ ಬೆಳೆಗಳ ಭರಾಟೆಯಲ್ಲಿ ಭತ್ತದ ಕೃಷಿ ನಷ್ಟ ಎಂದು ಹೇಳುವರಿಗೆ ಇವರು ದೊಡ್ಡ ಸ್ಫೂತಿಯಾಗಿದ್ದಾರೆ.ಪ್ರತೀ ವರ್ಷ 50 ಕ್ವಿಂಟಾಲ್‌ಗ‌ೂ ಮಿಕ್ಕಿ ಭತ್ತ ಬೆಳೆಯುವುದರ ಜತೆಗೆ ಅಡಿಕೆ, ತೆಂಗು, ಮಲ್ಲಿಗೆ ಕೃಷಿಯಲ್ಲಿಯೂ ಉತ್ತಮ ಲಾಭ ಗಳಿಸುತ್ತಿದ್ದಾರೆ.

ಹಿರಿಯರ ಪರಂಪರೆ
ಹಿರಿಯರ ಕೃಷಿ ಪರಂಪರೆಯನ್ನು ಉಳಿಸುವ ಉದ್ದೇಶದಿಂದ ಮುಂಬೈನ ಉದ್ಯಮವನ್ನು ಕೈ ಬಿಟ್ಟ ಚುಕುಡ ಮೂಲ್ಯರಿಗೆ ಹುಟ್ಟೂರ ಕೃಷಿ ಬದುಕು ಕೈಹಿಡಿಯಿತು. 6 ಗಂಡು ಮಕ್ಕಳ ತಂದೆಯಾಗಿ ಮಕ್ಕಳಿಗೂ ಕೃಷಿ ಬದುಕಿನ ಪಾಠ ಹೇಳಿಕೊಟ್ಟ ಇವರ ಓರ್ವ ಪುತ್ರ ಗಣೇಶ್‌ ಇಡೀ ದಿನ ಹೊಲ ಗದ್ದೆಗಳಲ್ಲಿ ಕೃಷಿ ಕಾಯಕ ನಡೆಸುತ್ತಾ ತಂದೆಯ ಕೃಷಿ ಚಟುವಟಿಕೆಗಳಿಗೆ ಆಸರೆಯಾಗಿದ್ದಾರೆ. ಗಣೇಶ ಮೂಲ್ಯರ ಜತೆ ಊರವರಿಗೂ ಕೃಷಿಯ ಅನುಭವ ಹಂಚುವ ಇವರ ಈ ಉಲ್ಲಾಸ ಯುವಕರಿಗೆ ಮಾದರಿಯಾಗಿದೆ.

ಮಿಶ್ರಬೆಳೆ ಮಾಡಿ
ಒಂದೇ ಬೆಳೆ ಮಾಡಿ ಬೆಲೆಯಿಲ್ಲ ಎಂದು ನಷ್ಟ ಅನುಭವಿಸುವಂತಾಗಬಾರದು. ಏಕ ರೂಪದ ಕೃಷಿಯ ಬದಲು ಹತ್ತಾರು ಕೃಷಿ ಎಂಬ ಪ್ರಯೋಗಾತ್ಮಕ ಕೃಷಿಯಲ್ಲಿ ತಮ್ಮನ್ನು ತೊಡಗಿಸಿ ಕೊಂಡು ಸಣ್ಣ ಜಾಗದಲ್ಲಿ ಬೇರೆ ಬೇರೆ ಮಿಶ್ರ ಕೃಷಿ ಮಾಡುವ ಮೂಲಕ ಕೃಷಿಯೂ ಲಾಭದಾಯಕವಾಗುತ್ತದೆ. ಯಂತ್ರಗಳನ್ನು ಜಾಸ್ತಿ ಬಳಸಿದರೆ ಕಡಿಮೆ ಖರ್ಚಾಗುತ್ತದೆ ಎನ್ನುತ್ತಾರೆ.

Advertisement

ಅಕ್ಕಿ ಮಾರಾಟ
ಇವರು ಬೆಳೆದ ಭತ್ತವನ್ನು ಮಿಲ್‌ಗೆ ನೀಡಿ ತಮಗೆ ಬೇಕಾದ ಅಕ್ಕಿ ಪಡೆದುಕೊಂಡು ಬಾಕಿ ಉಳಿದ ಅಕ್ಕಿಯನ್ನು ಮಾರಾಟ ಮಾಡು ತ್ತಾರೆ. ತೆಂಗು, ಅಡಿಕೆ, ಮಲ್ಲಿಗೆಯನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಾರೆ.

ಉನ್ನತ ಪ್ರಶಸ್ತಿ ಜತೆ ಸಮ್ಮಾನ
2015ರಲ್ಲಿ 75 ಕ್ವಿಂಟಾಲ್‌ ಭತ್ತ ಬೆಳೆದು ಸರಕಾರದ ಕೃಷಿ ಇಲಾಖೆಯ ತಾಲೂಕು ಮಟ್ಟದ ಪ್ರಥಮ ಪ್ರಶಸ್ತಿಗೆ ಭಾಜನರಾಗಿದ್ದಾರೆ.ಯಾವ ಕಾಲದಲ್ಲಿ ಯಾವ ಬೆಳೆ ಬೆಳೆಯಬೇಕು, ಯಾವ ಇಳುವರಿಗೆ ಎಷ್ಟು ನೀರು ಬೇಕು ಮತ್ತಿನ್ನಿತರ ಹವಾಮಾನಗಳ ಮುನ್ಸೂಚನೆಗಳ ಅರಿವಿನ ಜತೆ ಕೃಷಿ ಚಟುವಟಿಕೆ ನಡೆಸುವ ಜಾಣ್ಮೆಯ ಕೃಷಿಕ ಚುಕುಡ ಮೂಲ್ಯರಿಗೆ ಈ ಉನ್ನತ ಪ್ರಶಸ್ತಿಯ ಜತೆ ನೂರಾರು ಸಮ್ಮಾನಗಳು ನಡೆದಿವೆ.

2015ರಲ್ಲಿ 75 ಕ್ವಿಂಟಾಲ್‌ ಭತ್ತ ಬೆಳೆದು ಸರಕಾರದ ಕೃಷಿ ಇಲಾಖೆಯ ತಾಲೂಕು ಮಟ್ಟದ ಪ್ರಥಮ ಪ್ರಶಸ್ತಿಗೆ ಭಾಜನರಾಗಿದ್ದಾರೆ.ಯಾವ ಕಾಲದಲ್ಲಿ ಯಾವ ಬೆಳೆ ಬೆಳೆಯಬೇಕು, ಯಾವ ಇಳುವರಿಗೆ ಎಷ್ಟು ನೀರು ಬೇಕು ಮತ್ತಿನ್ನಿತರ ಹವಾಮಾನಗಳ ಮುನ್ಸೂಚನೆಗಳ ಅರಿವಿನ ಜತೆ ಕೃಷಿ ಚಟುವಟಿಕೆ ನಡೆಸುವ ಜಾಣ್ಮೆಯ ಕೃಷಿಕ ಚುಕುಡ ಮೂಲ್ಯರಿಗೆ ಈ ಉನ್ನತ ಪ್ರಶಸ್ತಿಯ ಜತೆ ನೂರಾರು ಸಮ್ಮಾನಗಳು ನಡೆದಿವೆ.

ಶರತ್‌ ಶೆಟ್ಟಿ ಬೆಳ್ಮಣ್‌

Advertisement

Udayavani is now on Telegram. Click here to join our channel and stay updated with the latest news.

Next