Advertisement
ಮತ್ತೆ ನಾಲ್ಕು ತಿಂಗಳ ನಂತರ ಅದೇ ಬಸ್ ಸ್ಟಾಪ್. ಮತ್ತದೇ ಸ್ಥಿತಿ. ಮತ್ತೆ ಅದೇ ಅಂಗಡಿಗೆ ಹೋಗಿ ನನ್ನಲ್ಲಿ ಸ್ವಲ್ಪ ಹಣವಿದೆ ಮತ್ತು ಚೇಂಜ್ ಇಲ್ಲ. ಆದರೆ ಪೇಪರ್ ಮತ್ತು ಬಾಳೇಹಣ್ಣು ಬೇಕು ಅಂತ ಕೇಳಿದೆ. ಈ ಬಾರಿಯೂ ಆತ ಏನೂ ಅನ್ನದೇ ಬಾಳೆ ಹಣ್ಣು ನೀಡಿದ. ಇದಾಗಿ ಹತ್ತೂಂಭತ್ತು ವರ್ಷ ಕಳೆದಿವೆ. ಇಂದು ನಾನು ಅದೇ ಬಸ್ ಸ್ಟಾಪ್ ನಲ್ಲಿ ಇಳಿದೆ.
Related Articles
Advertisement
ಇದನ್ನು ನನ್ನ ಮೂರ್ಖತನವೆಂದು ಹಲವರು ನಕ್ಕರು. ನಾನು ಮಾತ್ರ ಅಂದು ಎರಡು–ಬಾಳೇಹಣ್ಣು ಎರಡು ಪೇಪರ್ ಗೆ ಬದಲಿಯಾಗಿ ಆತನಿಗೆ ದೊಡ್ಡ ಸ್ಥಾನ ಕೊಟ್ಟೆ ಎಂದು ಬೀಗಿದೆ. ದಿನಕಳೆದಂತೆ ನಾನು ಅತ್ಯಂತ ನಂಬಿಕೆಯಿಟ್ಟಿದ್ದ ಮುಖ್ಯ ಸ್ಥಾನದಲ್ಲಿದ್ದವರಿಂದ ಊಹಿಸದ ಮಟ್ಟದಲ್ಲಿ ಸೋರಿಕೆಯಾಗುತ್ತಿರುವುದನ್ನು ತೋರಿಸಿಕೊಟ್ಟ. ಅದು ಹಾಗೇ ಮುಂದುವರಿದಿದ್ದರೆ ನನ್ನ ಉದ್ಯಮವೇ ಕುಸಿಯುವುದು ನಿಶ್ಚಿತವಿತ್ತು ಎನ್ನುವುದು ಗಮನಕ್ಕೆ ಬಂದಾಗ ಗಾಬರಿಯಾದೆ.
ಪಕ್ಕಾ ವ್ಯವಹಾರಸ್ಥ– ನಂಬಿಗಸ್ಥನಾದ ಆ ಚಿಕ್ಕ ಅಂಗಡಿಯವ ಅದೆಷ್ಟೋ ಕೋಟಿ ಉಳಿತಾಯ ಮಾಡಿಕೊಟ್ಟ. ದಿಗ್ಭ್ರಮೆಯಾಗಿತ್ತು ನನಗೆ . ಅವನಿಗೆ ಎರಡು ಬಾಳೆ ಹಣ್ಣಿನ ಸಹಾಯ ತೀರಿಸಲು ಹೋದ ನನಗೆ ಆತ ಮಾಡಿದ ಸಹಾಯವನ್ನು ಯಾವ ರೀತಿ ಲೆಕ್ಕ ಹಾಕಬಹುದಿತ್ತು?
ಇವು ಸ್ಮರಿಸಿಕೊಳ್ಳುವಂಥವು ಮಾತ್ರವೇ. ನೊಂದು ಬಂದು ಸೋಫಾದಲ್ಲಿ ಕುಸಿದು ಕೂತಾಗ ಪಾದ ನೆಕ್ಕುವ ನಾಯಿಗಿಂತ ನಿಯತ್ತು– ನಿಷ್ಠೆ. ಅಂದಿನಿಂದ ಆತ ನನ್ನ ಬದುಕಿನಲ್ಲಿ ಇದುವರೆಗೂ ಇದ್ದ ಎಲ್ಲರಿಗಿಂತ ಮಹತ್ವದ ಸ್ಥಾನ ಪಡೆದುಕೊಡ. ಕೊನೆಯಲ್ಲಿ ಉಯಿಲು ಬರೆಯುವಾಗ ನನ್ನನ್ನು– ಆತನನ್ನು ಪಕ್ಕ – ಪಕ್ಕ ಹೂಳಬೇಕೆಂದು ಬರೆದು ತಕ್ಕ – ಜಾಗ ಹಣದ ವ್ಯವಸ್ಥೆ ಮಾಡಿಟ್ಟೆ. ಉದ್ಯಮಿಯೊಬ್ಬರೂ ತಮ್ಮ ಕಥನದಲ್ಲಿ, ಹೀಗೆ ಬರೆದುಕೊಂಡದ್ದನ್ನು ತುಂಬಾ ಹಿಂದೆ ಓದಿದ ನೆನಪು.
ಮಾನವೀಯ ಬದುಕು : ಆಕೆಯ ಬಳಿ ಆ ಕಾಲೇಜಿನ ವಿದ್ಯಾರ್ಥಿಗಳಿಂದಹಿಡಿದು– ಅಟೆಂಡರ್ಗಳು, ಸಹೋದ್ಯೋಗಿಗಳು , ಅಡ್ಮಿನ್ ಸ್ಟಾಫ್ ಹೀಗೆ ಎಲ್ಲರೂ ಹೋಗಿದ್ದಾರೆ. ಹಾಗಂತ ಆಕೆಯೇನು ದುಡ್ಡಿದ್ದವಳ್ಳೋ ಅಥವಾ ರಾಜಕೀಯ ಲಿಂಕ್ ಇದ್ದವಳ್ಳೋ ಅಲ್ಲ. ಆಕೆಗಿದ್ದದ್ದು ಸಹೃದಯ, ಅಂತಃಕರಣ. ನಾವು– ನೀವು ಊಹಿಸಲಾರದಷ್ಟು ಪೂರ್ಣ ಮನಸ್ಸಿನಿಂದ ಎಲ್ಲರ ನೋವನ್ನು ತನ್ನದೇ ಎನ್ನುವಂತೆ ಆಲಿಸಿ, ತನಗೆ ಸಾಧ್ಯವಿರುವುದನ್ನೆಲ್ಲಾ ಮಾಡುವಂಥ ಮಾತೃ ಹೃದಯ. ಅದ್ಯಾವ ನೋವು ಉಂಡೆದ್ದು ಜೀರ್ಣಿಸಿಕೊಂಡಿದ್ದಳ್ಳೋ….ಯಾರು ನೋವೆಂದು ಬಂದರೂ ತನಗಾದದ್ದನ್ನುಮಾಡಿಯೇ ತೀರುತ್ತಿದ್ದಳು. ಹೇಳಿದರೆ ನಂಬುವುದು ಕಷ್ಟ. ಅವರ ಹೆಸರು ಉಷಾ ಮೇಡಂ. ಸಹಸ್ರ ಸಂಖ್ಯೆಯ ಆ ಕಾಲೇಜಿನಲ್ಲಿ ವಿಶೇಷ ಸ್ಥಾನ ಪಡೆದಾಕೆ. ಅದು ನಿಜ ರೀತಿಯಲ್ಲಿಮನುಷ್ಯಳಾಗಿದ್ದಕ್ಕೆ. ಆಕೆಯೊಟ್ಟಿಗೆ ಮಾತಾಡಿ ಹಿಂದಿರುಗುವ ಹಾದಿಯ ಪೂರ್ಣ ಅನಿಸಿದ್ದು ಒಂದೇ…. ಮಾನವೀಯತೆ ಎಷ್ಟು ಸುಂದರ.
ಇತ್ತೀಚೆಗಷ್ಟೇ ರಘುನಾಥ್ ಎಂಬ ಮೇಷ್ಟ್ರೊಬ್ಬರು ನಿವೃತ್ತರಾದರು. ತೀವ್ರವೆನಿಸುವ ನೋವು ಗಳೊಂದಿಗೆ ಹುಟ್ಟಿದಾತ. ಭಿಕ್ಷೆ ಬೇಡುವುದರಿಂದ– ಕಸಗುಡಿಸುವುದರಿಂದ ಎಲ್ಲವನ್ನೂ ಮಾಡಿದಾತ. ಹತ್ತನೇ ತರಗತಿ ನಪಾಸಾಗಿದ್ದರೂ ಪರಿಚಿತರೊಬ್ಬರಿಂದ ಶಿಕ್ಷಕ ವೃತ್ತಿ ದೊರೆತು, ತನ್ನಂಥದೇ ಮಾನಸಿಕ ಸ್ಥಿತಿಯಲ್ಲಿರುವ ನೂರಾರು ಜನರಿಗೆ ಸಮಾಧಾನ ಹೇಳಿ, ಆ ಸ್ಥಿತಿಯಿಂದ ಹೊರತರುವಲ್ಲಿ ಸಫಲರಾಗಿದ್ದಾರೆ. ಅಂದರೆ ನೂರಾರು ಜೀವ ಉಳಿಸಿದ್ದಾರೆ ಇಂಥವು ಕೊಳ್ಳಲು ಸಾಧ್ಯವಿದ್ದರೂ ಬಿಕರಿಗೆ ಸಿಗು ವಂಥದ್ದಲ್ಲ ಮತ್ತು ಮನದಾಳದಿಂದ ಹೊಮ್ಮುವಂಥದ್ದೇ ಆಗಿರಬೇಕು.
ಕೃತಕತೆಗೆ ಸಾಧ್ಯವಾಗುವಂಥದ್ದಲ್ಲ. ವೈದ್ಯರು ಚಿಕ್ಕ ಜ್ವರಕ್ಕೆ ದೊಡ್ಡ ಹೆಸರಿಟ್ಟು ವಸೂಲಿಗೆ ನಿಂತರೆ– ಎಲ್ಲಾ ವ್ಯವಸ್ಥೆಗಳಲ್ಲೂ ಕೆಳಗಿನ ಸಿಬ್ಬಂದಿಯ ಚಿಕ್ಕ ತಪ್ಪನ್ನು ತಾವೇ ದೊಡ್ಡದು ಮಾಡಿ, ಅವನಿಂದ ಸಾಧ್ಯವಾದಷ್ಟು ಕೀಳಲೆಂದೇ ನಿಂತ ಮೇಲಾಧಿಕಾರಿಗಳು , ಸಂಬಂಧಗಳಲ್ಲಿ ಇನ್ನೂ ಹೆಚ್ಚು ಬಡಿದಾಟ ಹಚ್ಚಿ ನಿಲ್ಲುವ ಲಾಯರ್‌ಗಳು, ಹೀಗೆ…. ಮನುಷ್ಯತ್ವವನ್ನು ಹುಡುಕಿ ಹೆಕ್ಕಬೇಕಾದ ಇಂದಿನ ಕಾಲದಲ್ಲಿ ಮಾನವೀಯತೆ ಅದೆಷ್ಟು ಸುಂದರ ಎನ್ನಿಸದಿರದು….ಹೀಗಾಗಲು, ಏನಾದರೂ ಆಗಲಿ, ಮೊದಲು ಮಾನವರಾಗುವತ್ತ ಚಿತ್ತ ಹರಿಸಬೇಕೇನೋ..
-ಮಂಜುಳಾ ಡಿ