Advertisement

Evolution: ಆಧುನಿಕ ಮಾನವನ ವಿಕಸನಕ್ಕೆ ಹೊಸ ತಿರುವು

09:14 AM May 20, 2023 | Pranav MS |

ಲಂಡನ್‌: ಮಾನವನ ವಿಕಸನದ ಕಥೆಗೆ ಈಗ ಹೊಸ ಟ್ವಿಸ್ಟ್‌ ಸಿಕ್ಕಿದೆ. ಆಫ್ರಿಕಾದಿಂದ ವಲಸೆಬಂದ ಮನುಷ್ಯರೇ ನಮ್ಮ ಪೂರ್ವಜರು ಎಂದು ಈವರೆಗೆ ಹೇಳಿಕೊಂಡು ಬರಲಾಗುತ್ತಿತ್ತು.

Advertisement

ಆದರೆ, ಈಗ ನಡೆದ ಮಾನವ ವಿಕಾಸದ ಹೊಸ ಅಧ್ಯಯನವು, ಆಧುನಿಕ ಮಾನವನ ಮೂಲದ ಬಗ್ಗೆ ಬೇರೆಯೇ ಕಥೆ ಹೇಳುತ್ತಿದೆ. ಲಕ್ಷಾಂತರ ವರ್ಷಗಳ ಕಾಲ ಆಫ್ರಿಕಾದಲ್ಲಿ ವಾಸಿಸುತ್ತಿದ್ದ ಎರಡು ಭಿನ್ನ ಬಗೆಯ ಜನರಿಂದ ಆಧುನಿಕ ಮಾನವನು ವಿಕಸನಗೊಂಡ ಎನ್ನುತ್ತಿದೆ ಈ ವರದಿ. ಮೊದಲು ಆಫ್ರಿಕಾದಲ್ಲಿ ಹುಟ್ಟಿದ ಈ ಜನಸಂಖ್ಯೆಯು ನಂತರದಲ್ಲಿ ಬೇರೆ ಬೇರೆ ಖಂಡಗಳಲ್ಲಿ ವಿಲೀನಗೊಂಡವು ಎಂದೂ ಇದು ಹೇಳಿದೆ. ಈ ಮೂಲಕ ಮನುಷ್ಯನ ಮೂಲಕ ಒಂದೇ ಅಲ್ಲ ಎಂಬುದನ್ನು ಈ ಅಧ್ಯಯನ ತಿಳಿಸಿದೆ.

ಜಗತ್ತಿನ ಬೇರೆ ಬೇರೆ ಸಂಸ್ಥೆಗಳ ಸಂಶೋಧಕರ ತಂಡವು ಸುಮಾರು 290 ವ್ಯಕ್ತಿಗಳ ವಂಶವಾಹಿಗಳನ್ನು ವಿಶ್ಲೇಷಿಸಿ, ಪ್ರಸ್ತುತ ಆಫ್ರಿಕಾದಲ್ಲಿರುವ ವಿಭಿನ್ನ ಜನಸಂಖ್ಯೆಯ ಮಾಹಿತಿಯನ್ನು ಸಾಫ್ಟ್ವೇರ್‌ಗೆ ಅಳವಡಿಸಿ, ಮಾನವ ಇತಿಹಾಸದ ಕುರಿತು ದೊಡ್ಡ ಮಟ್ಟದ ಸಂಶೋಧನೆಯನ್ನು ನಡೆಸಿದೆ.

ಆಫ್ರಿಕಾದಲ್ಲಿರುವ ಜನರ ಗುಂಪು, ಪಶ್ಚಿಮ ಆಫ್ರಿಕಾದ ಸಿಯೆರಾ ಲಿಯೋನ್‌ನಲ್ಲಿ ಬದುಕುತ್ತಿರುವ ರೈತರು, ಇಥಿಯೋಪಿಯಾದ ಬೇಟೆಗಾರರ ಸಮೂಹ, ಇಥಿಯೋಪಿಯಾದ ಅಮ್ಹಾರಾ ಕೃಷಿಕರು, ದಕ್ಷಿಣ ಆಫ್ರಿಕಾದಲ್ಲಿ ನೆಲೆಸಿರುವ ನಾಮಾ ಬೇಟೆಗಾರರ ಗುಂಪು ಸೇರಿದಂತೆ ಭಿನ್ನ ಗುಂಪುಗಳ ಡಿಎನ್‌ಎಯನ್ನು ಈ ತಂಡ ವಿಶ್ಲೇಷಿಸಿದೆ. ಆಫ್ರಿಕನ್ನರ ಡಿಎನ್‌ಎ ಜತೆಗೆ ಬ್ರಿಟನ್‌ ನಿವಾಸಿಯ ಡಿಎನ್‌ಎಯನ್ನು ಹೋಲಿಕೆ ಮಾಡಿದಾಗ, ಕ್ರೋಷಿಯಾದಲ್ಲಿ ಸಿಕ್ಕ 50 ಸಾವಿರ ವರ್ಷ ಹಳೆಯ ವಂಶವಾಹಿಯನ್ನು ಪ್ರಾಚೀನ ಮಾನವನ ಸಂಬಂಧಿಯ ವಂಶವಾಹಿಯೊಂದಿಗೆ ಹೋಲಿಸಿದಾಗ, ಮಾನವರ ಮೂಲ ಒಂದೇ ಅಲ್ಲ. ಎರಡು ಬಗೆಯ ಜನಸಂಖ್ಯೆಯಿಂದ ಮನುಷ್ಯನ ವಿಕಸನವಾಯಿತು ಎಂಬುದು ತಿಳಿದುಬಂತು ಎಂದಿದ್ದಾರೆ ಸಂಶೋಧಕರು.

Advertisement

Udayavani is now on Telegram. Click here to join our channel and stay updated with the latest news.

Next