Advertisement

ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಹೊಸದೊಂದು ತಿರುವು

01:09 PM Sep 14, 2017 | Team Udayavani |

ಬೆಂಗಳೂರು: ಬಾಗಲಗುಂಟೆ ಠಾಣೆ ವ್ಯಾಪ್ತಿಯ ಟಿ.ದಾಸರಹಳ್ಳಿಯ ಖಾಸಗಿ ಶಾಲೆ ಯೊಂದರ ಬಾಲಕಿ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣ ಹೊಸ ತಿರುವು ಪಡೆದಿದೆ.

Advertisement

ಶಾಲೆಯ ಸಿಸಿಟಿವಿ ದೃಶ್ಯಗಳ ಪ್ರಕಾರ ಬಾಲಕಿ ಮೇಲೆ ಯಾವುದೇ ಲೈಂಗಿಕ ದೌರ್ಜನ್ಯ ನಡೆದಿಲ್ಲ. ಆದರೆ, ಬಾಲಕಿ ಗೊಂದ ಲದ ಹೇಳಿಕೆ ನೀಡುತ್ತಿದ್ದು, ಗಾಬರಿಗೊಂಡಿ ರುವ ಸಾಧ್ಯತೆಯಿದೆ. ಸಂಪೂರ್ಣವಾಗಿ ಚೇತರಿಸಿಕೊಂಡ ಬಳಿಕ ಕೌನ್ಸಿಲಿಂಗ್‌ ನಡೆಸಿ ಆಕೆಯಿಂದ ಘಟನೆಯ ಸತ್ಯಾಂಶ ತಿಳಿಯ ಬೇಕಿದೆ ಎಂದು ಡಿಸಿಪಿ ಚೇತನ್‌ ಕುಮಾರ್‌ ರಾಥೋಡ್‌ “ಉದಯವಾಣಿ’ಗೆ ತಿಳಿಸಿದ್ದಾರೆ.

ಟಿ.ದಾಸರಹಳ್ಳಿಯಲ್ಲಿನ ಬಾಲಕಿ, ಮನೆ ಸಮೀಪದ ಖಾಸಗಿ ಶಾಲೆಯಲ್ಲಿ ಎಲ್‌ಕೆಜೆ ವ್ಯಾಸಂಗ ಮಾಡುತ್ತಿದ್ದು, ಬೆಳಗ್ಗೆ 10 ಗಂಟೆಗೆ ಶಾಲೆಗೆ ಹೋಗಿ ಮಧ್ಯಾಹ್ನ 2 ಗಂಟೆಗೆ ಮನೆಗೆ ಮರಳುತ್ತಿದ್ದಳು. ಮಂಗಳವಾರ ಮನೆಗೆ ಬಂದ ಬಾಲಕಿ ಐದಾರು ಬಾರಿ ವಾಂತಿ ಮಾಡಿ ದ್ದಾಳೆ. ಗಾಬರಿಗೊಂಡ ಪೋಷಕರು ವಿಚಾರಿಸಿ ದಾಗ “ಸೆಕ್ಯೂರಿಟಿ ಗಾರ್ಡ್‌ ಅಂಕಲ್‌ ಮೈ, ಕೈ ಮುಟ್ಟಿ, ಬಾತ್‌ರೂಮ್‌ನಲ್ಲಿ ಪ್ಯಾಂಟ್‌
ಬಿಚ್ಚಿದರು’ ಎಂದು ಹೇಳಿದ್ದಾಳೆ. ಇದರಿಂದ ಗಾಬರಿಗೊಂಡ ಪೋಷಕರು, ಬಾಲಕಿಯನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದು ಲೈಂಗಿಕ ದೌರ್ಜನ್ಯದ ಬಗ್ಗೆ ಶಂಕಿಸಿದ್ದಾರೆ. ಬಳಿಕ ಎಂ.ಎಸ್‌.ರಾಮಯ್ಯ ಆಸ್ಪತ್ರೆಯಲ್ಲಿ ಪರೀಕ್ಷೆ ನಡೆಸಿದ್ದು, ಲೈಂಗಿಕ ದೌರ್ಜನ್ಯ ನಡೆದಿಲ್ಲ ಎಂಧು ವೈದ್ಯರು ಸ್ಪಷ್ಟಪಡಿಸಿದ್ದಾರೆ. ಯಾವು ದಕ್ಕೂ ಒಮ್ಮೆ ಪೊಲೀಸರಿಗೆ ಮಾಹಿತಿ ನೀಡಿ ಎಂದು ಸೂಚಿಸಿದ್ದಾರೆ. ಅದರಂತೆ ಪೋಷಕರು
ದೂರು ನೀಡಿದ್ದರು. ತಕ್ಷಣ ಬಾಲಕಿ ಹೇಳಿಕೆ ಪಡೆದ ಪೊಲೀಸರು, ಶಾಲೆಯ ಐವರು ಸೆಕ್ಯೂರಿಟಿ ಗಾರ್ಡ್‌ಗಳನ್ನು ವಿಚಾರಣೆ ಒಳ ಪಡಿಸಿದ್ದಾರೆ. ಬುಧವಾರ ಬೆಳಗ್ಗೆ ಮತ್ತೂಮ್ಮೆ ಬಾಲಕಿಯ ಹೇಳಿಕೆ ದಾಖಲಿಸಿಕೊಂಡು, ಆರೋಪಿಗಳನ್ನು ಪತ್ತೆ ಹಚ್ಚಲು ಸೂಚಿಸಿದಾಗ ಬಾಲಕಿ ಸ್ಪಷ್ಟವಾಗಿ ಗುರುತಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಮತ್ತೂಮ್ಮೆ ವಿಚಾರಣೆ: ಘಟನೆಯಿಂದ ಆತಂಕಗೊಂಡಿರುವ ಬಾಲಕಿ ಜ್ವರದಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆಯತ್ತಿದ್ದಾಳೆ. ಆಕೆ ಚೇತರಿಸಿಕೊಂಡ ಬಳಿಕ ಕೌನ್ಸೆಲಿಂಗ್‌ ನಡೆಸಿ ಸತ್ಯಾಂಶ ತಿಳಿಯಬೇಕಿದೆ. ಅದುವರೆಗೂ ಐವರು ಸೆಕ್ಯೂರಿಟಿ ಗಾರ್ಡ್‌ಗಳಿಗೆ ಎಲ್ಲಿಗೂ ಹೋಗದ್ದಂತೆ ಸೂಚಿಸಲಾಗಿದೆ.

ಪೋಷಕರ ಪ್ರತಿಭಟನೆ: ಶಾಲೆಯಲ್ಲಿ ಅಪ್ರಾಪೆ¤ ಮೇಲೆ ನಡೆದ ದೌರ್ಜನ್ಯ ಖಂಡಿಸಿ ಇತರೆ ಮಕ್ಕಳ ಪೋಷಕರು ಶಾಲೆಯ
ಮುಂದೆ ಪ್ರತಿಭಟನೆ ನಡೆಸಿದರು. ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು, ಪೋಷಕರಿಗೆ ವಸ್ತು ಸ್ಥಿತಿ ವಿವರಿಸಿ, ಸಂತ್ರಸ್ತೆಯ ಪೋಷಕರು ಮತ್ತು ಪ್ರತಿಭಟನಾಕಾರರಿಗೆ ಸಿಸಿಟಿವಿ ದೃಶ್ಯಾವಳಿ ತೋರಿಸಿದ್ದು, ಬಳಿಕ ಪ್ರತಿಭಟನೆ ಹಿಂಪಡೆದಿದ್ದಾರೆ. ಶಾಲೆಯಲ್ಲಿ ಮಗು ಊಟ ಮಾಡಿದ ಬಳಿಕ ಕೊಠಡಿಯ ಟೆಬಲ್‌ ಗೆ ತಲೆ ಕೊಟ್ಟು ಮಲಗಿದೆ. ಇದಾದ ಒಂದು ಗಂಟೆ ಬಳಿಕ ಅಲ್ಲಿಯೇ ವಾಂತಿ ಮಾಡಿದೆ. ಆದರೆ, ಎಲ್ಲಿಯೂ ಮಗುವನ್ನು ಯಾರೂ ಮುಟ್ಟಿ ರುವುದು ಸಿಸಿಟಿವಿ ದೃಶ್ಯಾವಳಿಯಲ್ಲಿ ಕಂಡು ಬಂದಿಲ್ಲ. 

Advertisement

ಮಗಳಿಗೆ ಮಾಹಿತಿ ನೀಡಿದ್ದರಾ ಪೋಷಕರು?
ಇತ್ತೀಚೆಗೆ ಹರಿಯಾಣದ ಗುರುಗ್ರಾಮದ ಶಾಲೆಯೊಂದರಲ್ಲಿ ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಅಲ್ಲಿನ ಸಿಬ್ಬಂದಿ ಕೊಂದಿದ್ದರು. ಕಳೆದ ಎರಡು ದಿನಗಳಿಂದ ಈ ಘಟನೆ ಟಿವಿಯಲ್ಲಿ ಪ್ರಸಾರವಾಗುತ್ತಿತ್ತು. ಇದನ್ನು ಕಂಡ ತಾಯಿ, ತನ್ನ ಮಗಳಿಗೆ ಆ ಶಾಲೆಯಲ್ಲಿ ನಡೆದ ಘಟನೆಯನ್ನು ವಿವರಿಸಿದ್ದಾರೆ ಎನ್ನಲಾಗಿದೆ. ಒಳ್ಳೆಯ ಮತ್ತು ಕೆಟ್ಟ ಸ್ಪರ್ಶದ ಯಾವುದು? ಪುರುಷರು ಎಲ್ಲಿ ಸ್ಪರ್ಶಿಸಿದರೆ ಏನಾಗುತ್ತದೆ ಎಂದೆಲ್ಲ ತಿಳಿ ಹೇಳಿರಬೇಕು. ಇದನ್ನೇ ಸಂತ್ರಸ್ತೆ ಅಂದು ಶಾಲೆಯಿಂದ ಬಂದಾಗ ಹೇಳಿರುವ ಸಾಧ್ಯತೆಯಿದೆ. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಮಗುವಿನ ಹೇಳಿಕೆಯೇ ಅಂತಿಮ. ಆಕೆಯ ನೀಡುವ ಹೇಳಿಕೆ ಮೇಲೆ ಆರೋಪಿಗಳನ್ನು ಬಂಧಿಸುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next