Advertisement

ವಾಡಿ ಪೊಲೀಸರಿಂದ ಹದ್ದಿನ ಕಣ್ಣು-ಎಚ್ಚರ

04:13 PM Sep 16, 2022 | Team Udayavani |

ವಾಡಿ: ಕರ್ತವ್ಯಕ್ಕೆ ಹಾಜರಾದ ಕೆಲವೇ ದಿನಗಳಲ್ಲಿ ಪೊಲೀಸ್‌ ಠಾಣೆಗೆ ನೂತನ ಸ್ಪರ್ಶ ನೀಡಿ ಗಮನ ಸೆಳೆದಿದ್ದ ಪಿಎಸ್‌ಐ ಮಹಾಂತೇಶ ಜಿ.ಪಾಟೀಲ ಫೋಲೀಸ್‌ ಸಿಬ್ಬಂದಿಘೇ ಕ್ರೀಡಾಂಗಣ ನಿರ್ಮಿಸುವ ಜತೆಗೆ ಠಾಣೆಯ ಕೊಠಡಿಗಳಿಗೆ ನವೀಕರಣ ಭಾಗ್ಯ ಕರುಣಿಸಿ ಎಸ್‌ಪಿ ಇಶಾ ಪಂತ್‌ ಅವರಿಂದ ಮೆಚ್ಚುಗೆ ಗಳಿಸಿದ್ದರು. ಇದೀಗ ಪಟ್ಟಣದ ಪ್ರತಿಯೊಂದು ವೃತ್ತಕ್ಕೂ ಸಿಸಿ ಕ್ಯಾಮೆರಾ ಅಳವಡಿಸುವ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ.

Advertisement

ಇತ್ತೀಚೆಗೆ ನಗರ ಠಾಣೆ ವ್ಯಾಪ್ತಿಯಲ್ಲಿ ನಿರಂತರವಾಗಿ ಕೆಲವು ಕೊಲೆ ಘಟನೆಗಳು ನಡೆದಿದ್ದವು. ಹೀಗಾಗಿ ಎಚ್ಚೆತ್ತುಕೊಂಡಿರುವ ಠಾಣಾಧಿಕಾರಿ ಮಹಾಂತೇಶ ಜಿ.ಪಾಟೀಲ, ಪೋಲಿ ಹುಡುಗರ ಗುಂಪು ಘರ್ಷಣೆಗಳಿಗೆ ಕಡಿವಾಣ ಹಾಕಲು ಮತ್ತು ಗಾಂಜಾ ಮಾರಾಟ, ಮಟಕಾ ದಂಧೆ, ಅಕ್ರಮ ಮರಳು ಸಾಗಾಣಿಕೆ, ಜೂಜಾಟ, ಕಳ್ಳತನ, ದರೋಡೆ ಸೇರಿದಂತೆ ಇತರ ಅಪರಾಧ ಕೃತ್ಯಗಳಿಗೆ ಕಡಿವಾಣ ಹಾಕಲು ಸಿಸಿ ಕ್ಯಾಮೆರಾಗಳ ಮೊರೆ ಹೋಗಿದ್ದಾರೆ. ಮಾರುಕಟ್ಟೆ, ಬಸ್‌ ನಿಲ್ದಾಣ, ಬಸವೇಶ್ವರ ವೃತ್ತ, ಕಾಮ್ರೆಡ್‌ ಶ್ರೀನಿವಾಸಗುಡಿ ವೃತ್ತ, ಅಂಬೇಡ್ಕರ್‌ ವೃತ್ತ, ರೈಲು ನಿಲ್ದಾಣ, ಶಿವಾಜಿ ಚೌಕ್‌, ಮೌಲಾನಾ ಅಬ್ದುಲ್‌ ಕಲಾಂ ಆಜಾದ್‌ ವೃತ್ತ, ಚೌಡೇಶ್ವರ ಚೌಕ್‌, ರೆಸ್ಟ್‌ಕ್ಯಾಂಪ್‌ ತಾಂಡಾ, ಬಳಿರಾಮ ಚೌಕ್‌, ಇಂದಿರಾ ಕಾಲೋನಿ, ಶಿವರಾಯ ಚೌಕ್‌ ಹಾಗೂ ವಿವಿಧೆಡೆ ಒಟ್ಟು 60 ಸಿಸಿ ಕ್ಯಾಮೆರಾ ಅಳವಡಿಸಿದ್ದಾರೆ.

ಕಳೆದ ಐದಾರು ದಿನಗಳಿಂದ ನಗರದ ಕೆಲ ವೃತ್ತಗಳ ವಿದ್ಯುತ್‌ ಕಂಬಗಳಿಗೆ ಸಿಸಿ ಕ್ಯಾಮೆರಾ ಅಳವಡಿಕೆ ಮಾಡಲಾಗುತ್ತಿದೆ. ಹೀಗಾಗಿ ಠಾಣೆ ವ್ಯಾಪ್ತಿಯಲ್ಲಿ ನೂರಾರು ಸಂಖ್ಯೆಯಲ್ಲಿರುವ ರೌಡಿ ಶೀಟರ್‌ಗಳ ಮೇಲೂ ಈ ಸಿಸಿ ಕ್ಯಾಮೆರಾಗಳು ನಿಗಾವಹಿಸಲಿವೆ.

-ಮಡಿವಾಳಪ್ಪ ಹೇರೂರ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next