Advertisement

ಪಾರಂಪರಿಕ ಶಿಕ್ಷಣಕ್ಕೆ ಹೊಸ ಭಾಷ್ಯ

09:33 AM Aug 18, 2019 | Team Udayavani |

ಬೆಂಗಳೂರು: ಭಾರತೀಯ ಪಾರಂಪರಿಕ ಶಿಕ್ಷಣ ಪದ್ಧತಿ ಜತೆಗೆ ಶಿಕ್ಷಣಕ್ಕೆ ಹೊಸ ಭಾಷ್ಯ ಬರೆಯಲು ಬೆಂಗಳೂರಿನ ಬಸವೇಶ್ವರ ನಗರದ ಬಿಇಎಂಎಲ್ ಬಡಾವಣೆಯ ಮ್ಯಾಕ್ಸ್‌ಮುಲ್ಲರ್‌ ಶಿಕ್ಷಣ ಸಂಸ್ಥೆ ಮುಂದಾಗಿದೆ.

Advertisement

ಗುರುಕುಲದ ಶಿಕ್ಷಣದಲ್ಲಿ ವಿಚಾರ ಚಿಂತನೆ, ವಿಷಯ ಮಂಡನೆ ಎಲ್ಲವೂ ವಿಶಿಷ್ಟತೆಯಿಂದ ಕೂಡಿತ್ತು. ಬಳಿಕ ವಿದೇಶಿಗರ ದಾಳಿಯಿಂದ ನಮ್ಮ ಸಂಸ್ಕೃತಿ ಶಿಕ್ಷಣ ಪದ್ಧತಿ, ಜೀವನ ಕ್ರಮವೆಲ್ಲಾ ಪಾಶ್ಚಾತ್ಯ ವ್ಯವಸ್ಥೆ ಕಡೆ ವಾಲಿತು. ಪ್ರಸ್ತುತ ಪುರಾತನ ಕಾಲದಲ್ಲಿದ್ದ ನಮ್ಮಲ್ಲಿನ ಶಿಕ್ಷಣದ ಶ್ರೇಷ್ಠತೆಯನ್ನು ವಿದೇಶಿಗರು ಅಳವಡಿಸಿಕೊಳ್ಳುತ್ತಿದ್ದಾರೆ. ಈ ನಿಟ್ಟಿನಲ್ಲಿ ಭಾರತೀಯತೆಯನ್ನು ಒಳಗೊಂಡ ಶಿಕ್ಷಣ ಮಾದರಿ ಮಾರ್ಗದಲ್ಲಿ ಮ್ಯಾಕ್ಸ್‌ಮುಲ್ಲರ್‌ ಶಿಕ್ಷಣ ಸಂಸ್ಥೆ ಸಾಗುತ್ತಿದೆ.

ಅಜ್ಞಾನದಿಂದ ಹೊರಬರಲು ಶಿಕ್ಷಣ ಅವಶ್ಯಕ ಇದರಿಂದ ವೈಚಾರಿಕತೆ ಬೆಳೆಯುತ್ತದೆ. ಹೀಗಾಗಿ, ರಾಜ್ಯ ಪಠ್ಯಕ್ರಮವನ್ನು ಒಳಗೂಂಡ ಶಿಕ್ಷಣ ಸಂಸ್ಥೆಯನ್ನು ಗಂಗಾಧರ್‌ರವರು ಸ್ಥಾಪಿಸಿದರು. ಪ್ರಾರಂಭದಲ್ಲಿ ಒಂದು ಸಣ್ಣ ಕಟ್ಟಡದಲ್ಲಿ ತನ್ನ ಕಾರ್ಯವನ್ನು ಆರಂಭಿಸಿ ಇಂದು ಸುಮಾರು ಮೂರು-ನಾಲ್ಕು ಅಂತಸ್ತಿನ 4 ಕಟ್ಟಡಗಳಲ್ಲಿ ವಿದ್ಯಾರ್ಥಿಗಳಿಗೆ ಜ್ಞಾನವನ್ನು ಧಾರೆ ಎರೆಯುತ್ತಿದೆ. ಪ್ರಸ್ತುತ ಶಾಲೆಯನ್ನು ಜನಾರ್ದನ್‌ ಅವರು ಮುಂದುವರಿಸಿಕೂಂಡು ಬಂದಿದ್ದಾರೆ. ಪ್ರಾರಂಭದಲ್ಲಿ 45 ವಿದ್ಯಾರ್ಥಿಗಳಿದ್ದ ಈ ಶಾಲೆಯಲ್ಲಿ ಪ್ರಸ್ತುತ ರಾಜ್ಯ ಪಠ್ಯಕ್ರಮದಲ್ಲಿ 2,500ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವುದು ಸಂಸ್ಥೆಯ ಅಭಿವೃದ್ಧಿ ಪಥವನ್ನು ಸೂಚಿಸುತ್ತದೆ. ಸಂಸ್ಥೆಯ ಅಧ್ಯಕ್ಷ ಜನಾರ್ದನ್‌ರಿಗೆ ಅವರ ಪತ್ನಿ ಹೇಮಲತಾ ಜನಾರ್ದನ್‌ ಅವರು ಬೆನ್ನೆಲುಬಾಗಿ ನಿಂತು ಸ್ಫೂರ್ತಿ ತುಂಬುತ್ತಿದ್ದಾರೆ. ಮ್ಯಾಕ್ಸ್‌ ಮುಲ್ಲರ್‌ ಶಾಲೆಯು ಅತಿ ಕಡಿಮೆ ಅವಧಿಯಲ್ಲಿ ಅಪಾರ ಸಾಧನೆ ಮಾಡಿರುವ ಶಾಲೆ, ಪ್ರಗತಿ ಪಥದಲ್ಲಿ ಸಾಗುತ್ತಿದೆ. ಇದರ ಹಿಂದೆ ಮುಳ್ಳಿನ ಹಾದಿಯಲ್ಲಿ ಕಠಿಣ ಪರಿಶ್ರಮವಿದೆ. ಸತತ ಪ್ರಯತ್ನವಿದ್ದರೆ ಬೆಳೆವಣಿಗೆಯ ಉತ್ತುಂಗದ ಶಿಖರಕ್ಕೇರಬಹುದು ಎಂಬುದನ್ನು ಮ್ಯಾಕ್ಸ್‌ ಮುಲ್ಲರ್‌ ಸಂಸ್ಥೆ ಸಾಧಿಸಿ ತೋರಿಸಿದೆ.

ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಫ‌ಲಿತಾಂಶ: 2018ರವರೆಗೆ 18 ಎಸ್‌ಎಸ್‌ಎಸ್‌ಸಿ ಬ್ಯಾಚುಗಳು ಉತ್ತಮ ಫ‌ಲಿತಾಂಶದೊಂದಿಗೆ ಹೂರ ಬಂದಿವೆ. 2019ರಲ್ಲಿ ರಾಜ್ಯ ಪಠಕ್ರಮದ 189 ಎಸ್‌ಎಸ್‌ಎಲ್ಸಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಉತ್ತಮ ಫ‌ಲಿತಾಂಶ ಸಾಧಿಸಲು ಸಾಕಷ್ಟು ಪರಿಶ್ರಮ ಹಾಕಲಾಗುತ್ತಿದೆ. ಶಾಲೆಯಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿಸಿದ ಕೀರ್ತಿ ಶಾಲೆಯ ಪ್ರಾಂಶುಪಾಲರಾದ ಹೇಮಲತಾ ಜನಾರ್ದನ್‌ ಅವರಿಗೆ ಸಲ್ಲುತ್ತದೆ. ಇವರು ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಸುತ್ತಿದ್ದು, ಎಲ್ಲ ಪೋಷಕರು, ಶಿಕ್ಷಕರು, ಶಾಲೆಯ ಇನ್ನಿತರ ಸಿಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳೊಂದಿಗೆ ಉತ್ತಮ ಒಡನಾಟವನ್ನು ಹೊಂದಿದ್ದಾರೆ. ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ಸದಾ ಉತ್ತಮ ಮಾರ್ಗದರ್ಶನ ಹಾಗೂ ಸೂಚನೆ ನೀಡತ್ತಾ, ಶಾಲೆಯಲ್ಲಿ ಶಿಸ್ತು ಸಂಯಮದ ವಾತಾವರಣ ನೆಲೆಗೊಳ್ಳುವಂತೆ ಮಾಡಿದ್ದಾರೆ.

ಕ್ರೀಡೆಯಲ್ಲೂ ಮುಂದು: ಶಾಲೆಯ ಸಾಕಷ್ಟು ವಿದ್ಯಾರ್ಥಿಗಳು ಕ್ಲಸ್ಟರ್‌ ಮಟ್ಟ, ತಾಲೂಕು ಮಟ್ಟ ಹಾಗೂ ಜಿಲ್ಲಾ ಮಟ್ಟದ ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಸಿ ಬಹುಮಾನಗಳನ್ನು ಗೆದ್ದು ಶಾಲೆಗೆ ಕೀರ್ತಿ ತಂದಿದ್ದಾರೆ. ಶಾಲೆಯ ವಿದ್ಯಾರ್ಥಿಗಳು ರಾಜ್ಯಮಟ್ಟದ ಕ್ಯಾಂಪ್‌ಗ್ಳಲ್ಲಿ ಭಾಗವಸಿ ಅತ್ಯುತ್ತಮ ಪ್ರದರ್ಶನ ತೋರಿ ಅನೇಕ ಪ್ರಶಸ್ತಿ ಹಾಗೂ ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ.

Advertisement

ಶಾಲೆಯ ಸೌಲಭ್ಯಗಳು: ಸಂಸ್ಥೆಯು ಗುಣಮಟ್ಟ ಮತ್ತು ಮೂಲ ಸೌಕರ್ಯದಲ್ಲಿ ಯಾವ ಹಂತದಲ್ಲೂ ರಾಜಿ ಮಾಡಿಕೊಂಡಿಲ್ಲ. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಬೃಹತ್‌ ಕಟ್ಟಡಗಳನ್ನು ಹೊಂದಿರುವ ಜತೆಗೆ, ಲ್ಯಾಬ್‌ನಲ್ಲಿ ಎಲ್ಸಿಡಿ ಪ್ರೊಜೆಕ್ಟರ್‌, ಧ್ವನಿ-ದೃಶ್ಯ ಸಂವಹನ ಸಲಕರಣೆ, ಉತ್ತಮ ದರ್ಜೆಯ ಪೀಠೊಪಕರಣ ಮತ್ತು ಅತ್ಯುನ್ನತ ಶೈಕ್ಷಣಿಕ ಗುಣಮಟ್ಟದ ಕೌನ್ಸಿಲ್ ಜತೆ ವಿದ್ಯಾರ್ಥಿಗಳ ಆಪ್ತ ಸಮಾಲೋಚನೆ ಮತ್ತು ಜೀವನ ಕೌಶಲ್ಯಗಳನ್ನು ತಿಳಿಸುವ ಶಿಕ್ಷಣ ಇಲ್ಲಿ ಲಭ್ಯವಿದೆ. ಪ್ರಾಂಶುಪಾಲರು, ಮುಖ್ಯಶಿಕ್ಷಕರ ಮಾರ್ಗದರ್ಶನ ಹಾಗೂ ಶಾಲೆಯಲ್ಲಿರುವ ಅನುಭವಿ ಶಿಕ್ಷಕರ ಪರಿಶ್ರಮದಿಂದ ಆರಂಭದ ವರ್ಷದಿಂದಲೂ ಎಸ್‌ಎಸ್‌ಎಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ.100ರಷ್ಟು ಫ‌ಲಿತಾಂಶವನ್ನು ಮ್ಯಾಕ್ಸ್‌ಮುಲ್ಲರ್‌ ಶಾಲೆ ದಾಖಲಿಸುತ್ತಾ ಬಂದಿದೆ. ಮ್ಯಾಕ್ಸ್‌ ಮುಲ್ಲರ್‌ ಸಂಸ್ಥೆಯ ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಅನಾವರಣಗೊಳಿಸುವ ನಿಟ್ಟಿನಲ್ಲಿ ಸಂಸ್ಕೃತಿ 2019ರ ಜನವರಿ 19 ಹಾಗೂ 20ರಂದು ಬಸವೇಶ್ವರ ನಗರದ ಡಾ.ಬಿ.ಆರ್‌ ಅಂಬೇಡ್ಕರ್‌ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿತ್ತು.

ಭವಿಷ್ಯದ ಯೋಜನೆಗಳು: ಕೇಂದ್ರ ಪಠ್ಯಕ್ರಮದ ಐಸಿಎಸ್‌ಇ ಶಾಲೆಯನ್ನು ಹಾಗೂ ವಿಜ್ಞಾನ, ವಾಣಿಜ್ಯ ಪಿಯು ಕಾಲೇಜು ಸ್ಥಾಪನೆ ಮಾಡುವ ಉದ್ದೇಶವನ್ನು ಶಾಲಾ ಪ್ರಾಂಶುಪಾಲರು ಹೊಂದಿದ್ದಾರೆ. ಹಳೆಯ ವಿದ್ಯಾರ್ಥಿಗಳ ಸಂಘವೊಂದನ್ನು ಕಟ್ಟುವ ಹಾಗೂ ಮಾಹಿತಿ ತಂತ್ರಜ್ಞಾನವನ್ನು ವಿಸ್ತರಿಸುವ ಉದ್ದೇಶವಿದೆ.

ಶಿಸ್ತು ಕಲಾತ್ಮಕತೆ: ಮ್ಯಾಕ್ಸ್‌ ಮುಲ್ಲರ್‌ ಶಿಕ್ಷಣ ಸಂಸ್ಥೆಯಲ್ಲಿ ಶಿಸ್ತಿಗೆ ಪ್ರಥಮ ಆದ್ಯತೆ ಸಮಯ ಪಾಲನೆಗೂ ಮಾನ್ಯತೆ ನೀಡಲಾಗಿದೆ. ಸಂಸ್ಥೆಯಲ್ಲಿ ವಸ್ತ್ರಸಂಹಿತೆ ಕಟ್ಟು ನಿಟ್ಟಾಗಿ ಜಾರಿಯಲ್ಲಿದೆ. ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ, ಗಾಂಧಿಜಯಂತಿ, ಮಕ್ಕಳ ದಿನಾಚರಣೆ, ಯೋಗಾದಿನ, ವಿಶ್ವಪರಿಸರ ದಿನ, ಸ್ವಾತಂತ್ರ್ಯ ದಿನಾಚರಣೆ, ಕನ್ನಡ ರಾಜ್ಯೋತ್ಸವ ಮೊದಲಾದ ಕಾರ್ಯಕ್ರಮಗಳಲ್ಲಿ ಮಕ್ಕಳು ಶಿಸ್ತು ಸಂಭ್ರಮ ದೇಶಭಕ್ತಿ ನೋಡುವುದೇ ಸೊಗಸು. ಇನ್ನು ಸಂಸ್ಥೆಯು ಜಾತಿ, ಮತ, ಧರ್ಮ ಹಾಗೂ ರಾಜಕೀಯ ಆಧಾರದಿಂದ ನಿಂತಿಲ್ಲ. ನಾವು ಅನುಸರಿಸುತ್ತಿರುವುದು ಸಾಮಾಜಿಕ ನ್ಯಾಯದ ಮೌಲ್ಯ ಎಂದು ಪ್ರಾಂಶುಪಾಲರಾದ ಹೇಮಲತಾ ಜನಾರ್ದನ್‌ ತಿಳಿಸುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next