Advertisement
ಇದೇ ಮೊದಲ ಸಲ ಕನ್ನಡದ ಈ ಚಿತ್ರದಲ್ಲಿ ತುಳು ಗೀತೆ ಬಳಸಲಾಗಿದ್ದರ ಕುರಿತು ಹೇಳಲಾಗಿತ್ತು ಈಗ ಈ ಚಿತ್ರದ ಹೊಸ ಸುದ್ದಿಯೆಂದರೆ, “ಕಮರೊಟ್ಟು ಚೆಕ್‌ಪೋಸ್ಟ್’ ಚಿತ್ರದ ಗೇಮ್‌ವೊಂದನ್ನು ರೂಪಿಸಲಾಗಿದೆ. ಪ್ಲೇಸ್ಟೋರ್‌ನಲ್ಲಿ “ಕಮರೊಟ್ಟು ಚೆಕ್‌ಪೋಸ್ಟ್’ ಟೈಪ್ ಮಾಡಿ ಹುಡುಕಿದರೆ, ಗೇಮ್ ಕಾಣಿಸಲಿದೆ. ಅದನ್ನು ಡೌನ್‌ಲೋಡ್ ಮಾಡಿಕೊಂಡು ಗೇಮ್‌ವೊಂದನ್ನು ಆಡಬಹುದಾಗಿದೆ.
Related Articles
Advertisement
ಆರಂಭದಿಂದ ಕ್ಲೈಮ್ಯಾಕ್ಸ್‌ನವರಿಗೂ ಸಾಕಷ್ಟು ಕುತೂಹಲಗಳೊಂದಿಗೆ ಚಿತ್ರ ಮೂಡಿಬಂದಿದೆ. ಚಿತ್ರದಲ್ಲಿ ಕಾಣುವ ಪಾತ್ರಗಳಲ್ಲಿ ವಿಶೇಷವಿದೆ. ಇನ್ನೊಂದು ವಿಷಯವೆಂದರೆ, ಇಲ್ಲಿ ಏಕಕಾಲಕ್ಕೆ ಭವಿಷ್ಯತ್‌ಕಾಲ ಮತ್ತು ಭೂತಕಾಲ ಈ ಎರಡರ ಅನುಭವ ಪಡೆಯುವಂತಹ ಅಂಶಗಳು ದ್ವಿತಿಯಾರ್ಧದಲ್ಲಿವೆ. ಚಿತ್ರಕಥೆಯಲ್ಲಿ ಹೊಸದೊಂದು ರೂಪುರೇಷೆ ಕಟ್ಟಿಕೊಟ್ಟಿರುವುದು ವಿಶೇಷ’ ಎಂಬುದು ಚೇತನ್‌ರಾಜ್ ಅವರ ಮಾತು.
ನಿರ್ದೇಶಕ ಪರಮೇಶ್ ಅವರು ಈ ಕಥೆ ಮಾಡಿಕೊಂಡಾಗ, ಹಲವು ವ್ಯಕ್ತಿಗಳ ಜೊತೆ ಚರ್ಚಿಸಿದ್ದಾಗಿ ಹೇಳುತ್ತಾರೆ. ವೈಜ್ಞಾನಿಕವಾಗಿ ಹೇಳುವ ಕಥೆ ಇದಾಗಿರುವುದರಿಂದ ಅದಕ್ಕೆ ಸಂಬಂಧಿಸಿದ ವ್ಯಕ್ತಿಗಳನ್ನು ಭೇಟಿ ಮಾಡಿ, ಚರ್ಚಿಸಿ, ಸಲಹೆ ಪಡೆದು, ಕೆಲ ರಿಯಲ್ ಅಂಶಗಳನ್ನೂ ಇಲ್ಲಿ ಹೇಳಿದ್ದಾರಂತೆ. ಚಿತ್ರದಲ್ಲಿ ಇನ್ನೊಂದು ವಿಶೇಷವೂ ಇದೆ.
ಇದೇ ಮೊದಲ ಬಾರಿಗೆ ಊಸರವಳ್ಳಿಯ ಅನಿಮೇಷನ್ ಪಾತ್ರವೊಂದನ್ನು ಚಿತ್ರದುದ್ದಕ್ಕೂ ಬಳಕೆ ಮಾಡಲಾಗಿದೆ. ವಿಶೇಷ ಎನಿಸುವ ಈ ಪ್ರಾಣಿ ಚಿತ್ರದ ಮತ್ತೂಂದು ಹೈಲೆಟ್ ಆಗಿದ್ದು, ಚಿತ್ರದಲ್ಲಿನ್ನೂ ಹಲವು ವಿಶೇಷತೆಗಳೂ ತುಂಬಿಕೊಂಡಿವೆ ಎಂಬುದು ಪರಮೇಶ್ ಮಾತು.
ಅಂದಹಾಗೆ, ಇದು ಚೆಕ್‌ಪೋಸ್ಟ್ ಬಳಿ ನಡೆದ ಆಕ್ಸಿಡೆಂಟ್‌ವೊಂದರ ಸತ್ಯಘಟನೆ ಆಧರಿಸಿ ಚಿತ್ರ ಮಾಡಲಾಗುತ್ತಿದೆ. ಈ ಚಿತ್ರಕ್ಕೆ ಸನತ್ ಮತ್ತು ಉತ್ಪಲ್ ನಾಯಕರಾದರೆ, ಅವರಿಗೆ ಸ್ವಾತಿಕೊಂಡೆ ಹಾಗೂ ಅಹಲ್ಯಾ ನಾಯಕಿಯರಾಗಿ ನಟಿಸಿದ್ದಾರೆ. ಮಡಿಕೇರಿ, ಮಂಗಳೂರು ಸುತ್ತಮುತ್ತ ಸುಮಾರು 35 ದಿನಗಳ ಕಾಲ ಚಿತ್ರೀಕರಣವಾಗಿದೆ. ಚಿತ್ರಕ್ಕೆ ಎ.ಟಿ.ರವೀಶ್ ಅವರ ಸಂಗೀತವಿದೆ.