Advertisement
ಜತೆಗೆ, “ಅಭಿವೃದ್ಧಿಹೊಂದಿದ ಭಾರತವನ್ನು ನಿರ್ಮಿಸಬೇಕೆಂದರೆ ಬಲಿಷ್ಠವಾದ ಸಂಪರ್ಕವೂ ಅತ್ಯಗತ್ಯ’ ಎಂದು ಅಭಿಪ್ರಾಯಪಟ್ಟರು.
Related Articles
Advertisement
ಗಂಗಾ ವಿಲಾಸ ಕ್ರೂಸ್ ನೌಕೆಯ ಮೊದಲ ಪ್ರಯಾಣದಲ್ಲಿ ಭಾಗಿಯಾಗುತ್ತಿರುವ 32 ಮಂದಿ ಸ್ವಿಜರ್ಲೆಂಡ್‌ನ ಪ್ರವಾಸಿಗರನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಇಂದು ಭಾರತದಲ್ಲಿ ಎಲ್ಲವೂ ಇದೆ ಮತ್ತು ನಿಮ್ಮ ಕಲ್ಪನೆಗೂ ಮೀರಿದ್ದನ್ನು ನೀವು ನೋಡಬಹುದಾಗಿದೆ ಎಂದರು. ದೇಶದಲ್ಲೀಗ ಪ್ರವಾಸೋದ್ಯಮದ ಹೊಸ ಯುಗ ಆರಂಭವಾಗಿದೆ ಎಂದೂ ತಿಳಿಸಿದರು.
ಪ್ರವಾಸಿಗರನ್ನು ಸೆಳೆಯಲಿದೆ ಟೆಂಟ್ ಸಿಟಿವಾರಾಣಸಿಯಲ್ಲಿ ಶುಕ್ರವಾರ ಲೋಕಾರ್ಪಣೆಗೊಂಡ ಟೆಂಟ್ ಸಿಟಿ ಗಂಗಾ ನದಿ ತೀರದಲ್ಲಿ ನಿರ್ಮಾಣವಾಗಿದ್ದು, ಪ್ರವಾಸಿಗರನ್ನು ಆಕರ್ಷಿಸಲಿದೆ. ವಾರಾಣಸಿಯ ಬೇರೆ ಬೇರೆ ಘಾಟ್‌ಗಳಿಂದ ಬೋಟ್‌ಗಳ ಮೂಲಕ ಪ್ರವಾಸಿಗರು ಟೆಂಟ್ ಸಿಟಿಯನ್ನು ತಲುಪಬಹುದು. ಅಕ್ಟೋಬರ್‌ನಿಂದ ಜೂನ್‌ವರೆಗೆ ಮಾತ್ರ ಇದು ತೆರೆದಿರಲಿದ್ದು, ಉಳಿದ 3 ತಿಂಗಳಲ್ಲಿ ನೀರಿನ ಮಟ್ಟ ಹೆಚ್ಚಳವಾಗುವ ಕಾರಣ, ಈ ಅವಧಿಯಲ್ಲಿ ಕಾರ್ಯನಿರ್ವಹಿಸುವುದಿಲ್ಲ. ಇಲ್ಲಿ ಒಟ್ಟು 200 ಟೆಂಟ್‌ಗಳಿವೆ. ಇಲ್ಲಿಗೆ ಬರುವವರು ಗಂಗಾನದಿಯ ಮತ್ತೂಂದು ತೀರದಲ್ಲಿನ ಎಲ್ಲ ಮನಮೋಹಕ ಘಾಟ್‌ಗಳನ್ನು ಕಣ್ತುಂಬಿಕೊಳ್ಳಬಹುದು. ಶಾಸ್ತ್ರೀಯ ಸಂಗೀತ, ಸಂಜೆ ಆರತಿ, ಯೋಗ ಸೆಷನ್‌ಗಳೂ ಇರಲಿವೆ. ಗಂಗಾ ವಿಲಾಸದ ವೈಶಿಷ್ಟ್ಯ
ಒಟ್ಟು ಎಷ್ಟು ದೂರ ಪ್ರಯಾಣ? – 3,200 ಕಿ.ಮೀ.
ಒಟ್ಟು ದಿನಗಳು- 51
ಮೊದಲ ಪ್ರಯಾಣದಲ್ಲಿನ ಪ್ರಯಾಣಿಕರು- 32
ಪ್ರತಿ ದಿನಕ್ಕೆ ಟಿಕೆಟ್ ದರ- 25,000-50,000 ರೂ.
51 ದಿನಗಳ ಪ್ರಯಾಣಕ್ಕೆ ಟಿಕೆಟ್ ದರ – 20 ಲಕ್ಷ ರೂ.
ನೌಕೆಯ ಉದ್ದ- 62 ಮೀಟರ್
ಅಗಲ- 12 ಮೀಟರ್
ಎಷ್ಟು ಪ್ರವಾಸಿ ತಾಣಗಳಿಗೆ ಭೇಟಿ?- 50 ಏನೇನಿದೆ?
ಪಂಚತಾರಾ ತೇಲುವ ಹೋಟೆಲ್‌ನಲ್ಲಿ 18 ಸ್ಯೂಟ್‌ಗಳಿದ್ದು, 36 ಮಂದಿ ಪ್ರಯಾಣಿಸಬಹುದಾಗಿದೆ. ಇದಲ್ಲದೇ, 40 ಮಂದಿ ಸಿಬ್ಬಂದಿಗೂ ವಸತಿ ವ್ಯವಸ್ಥೆಯಿದೆ. ಕ್ರೂಸ್ ನೌಕೆಯು ವಿಶ್ವ ಪಾರಂಪರಿಕ ತಾಣಗಳು, ರಾಷ್ಟ್ರೀಯ ಉದ್ಯಾನಗಳು, ಘಾಟ್‌ಗಳು, ಪ್ರಮುಖ ನಗರಗಳು ಸೇರಿದಂತೆ ಒಟ್ಟು 50 ಪ್ರವಾಸಿ ತಾಣಗಳಲ್ಲಿ ಸಂಚರಿಸಲಿದೆ. ನೌಕೆಯಲ್ಲಿ ಸ್ಪಾ, ಸಲೂನ್, ಜಿಮ್ ಮತ್ತಿತರ ಸೌಲಭ್ಯಗಳಿವೆ. ಮಾಲಿನ್ಯರಹಿತ ವ್ಯವಸ್ಥೆ ಹಾಗೂ ಶಬ್ದ ನಿಯಂತ್ರಣ ತಂತ್ರಜ್ಞಾನವನ್ನೂ ನೌಕೆ ಹೊಂದಿದೆ.