Advertisement

 ಪ್ರವಾಸೋದ್ಯಮ ಕ್ಷೇತ್ರಕ್ಕೆ ಹೊಸ ಆಯಾಮ

09:14 AM Feb 19, 2017 | Team Udayavani |

ಮಂಗಳೂರು: ಸ್ಮಾರ್ಟ್‌ ಸಿಟಿಯಾಗಿ ಮಂಗಳೂರು ಆಯ್ಕೆ ಯಾಗುತ್ತಿದ್ದಂತೆ ವಿದೇಶೀ ಪ್ರಯಾಣಿಕರಿಗೆ ಉಪಯೋಗವಾಗುವ ನೆಲೆ ಯಲ್ಲಿ ಮಂಗಳೂರು ವಿಮಾನ ನಿಲ್ದಾಣದಲ್ಲಿ “ಇ-ವೀಸಾ’ ಸೌಲಭ್ಯಕ್ಕೆ ಅನುಮತಿ ದೊರಕಿದೆ. ಇದು ಮಂಗಳೂರು ನಗರ ಹಾಗೂ ಅವಿಭಜಿತ ದ. ಕನ್ನಡ ಜಿಲ್ಲೆಯ ಪಾಲಿಗೆ ಪ್ರವಾಸೋದ್ಯಮ, ವೈದ್ಯಕೀಯ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಹೊಸ ಆಯಾಮವನ್ನು ತೆರೆದಿಡಲಿದೆ.

Advertisement

ಇ-ವೀಸಾ ಸೌಲಭ್ಯಕ್ಕೆ ಇಮಿಗ್ರೇಶನ್‌ (ವಲಸೆ) ಬ್ಯೂರೋದವರು ಒಪ್ಪಿಗೆ ನೀಡಿದ್ದು, ಶೀಘ್ರದಲ್ಲಿ ಇದಕ್ಕೆ ಸಂಬಂಧಪಟ್ಟ ಉಪಕರಣಗಳು ವಿಮಾನ ನಿಲ್ದಾಣದಲ್ಲಿ ಅಳವಡಿಕೆ ಯಾಗುವ ಮೂಲಕ ಇ-ವೀಸಾ ಸೌಲಭ್ಯ ಲಭ್ಯವಾಗಲಿದೆ.

ಮಂಗಳೂರು ವಿ. ನಿಲ್ದಾಣದಲ್ಲಿ ಇ-ವೀಸಾ ಸೌಲಭ್ಯ ಇಲ್ಲದ ಕಾರಣದಿಂದ ಹೊರದೇಶದಿಂದ “ಇ ವೀಸಾ’ ಮೂಲಕ ಮಂಗಳೂರಿಗೆ ಬರುವ ಪ್ರಯಾಣಿಕರಿಗೆ ಸಮಸ್ಯೆಯಾಗುತ್ತಿತ್ತು. ಹೊರದೇಶದಿಂದ ಇ ವೀಸಾ ಸೌಲಭ್ಯದೊಂದಿಗೆ ವಿಮಾನ ಏರಿ ಮಂಗಳೂರಿನಲ್ಲಿ ಇಳಿದರೆ ಇಲ್ಲಿ “ಇ ವೀಸಾ’ ಪರಿಶೀಲನಾ ಕ್ರಮಗಳು ಇಲ್ಲದಿರುವುದರಿಂದ ಅವರನ್ನು ವಿಮಾನ ನಿಲ್ದಾಣದಿಂದ ಹೊರಗಡೆ ಕರೆತರುವಂತಿರಲಿಲ್ಲ. ಹೀಗಾಗಿ ಕೆಲವು ಪ್ರಯಾಣಿಕರು ಬಂದ ದಾರಿಗೆ ಸುಂಕ ವಿಲ್ಲದಂತೆ ವಾಪಸಾಗಿದ್ದ ಹಲವು ಉದಾಹರಣೆಗಳು ಇವೆ. ಆದರೆ ಇದೀಗ ಇ-ವೀಸಾ ಸೌಲಭ್ಯ ಅನುಷ್ಠಾನವಾ ಗುವ ಮೂಲಕ ಪ್ರಯಾಣಿಕರಿಗೆ ಉಪಯೋಗವಾಗಲಿದೆ. ಇದರಿಂದ ಹೊರದೇಶದ ಪ್ರಯಾಣಿಕರು ಮಂಗಳೂರಿಗೆ ಆಗಮಿಸುವ ಮೂಲಕ ಕರಾವಳಿಯ ಪ್ರವಾಸೋದ್ಯಮ ಹಾಗೂ ಇತರ ಕ್ಷೇತ್ರಗಳ ಬೆಳವಣಿಗೆಗೆ ಇದು ಅವಕಾಶ ತೆರೆದಿಡಲಿದೆ. 

ಇ-ವೀಸಾ ಅಂದರೆ…
ಭಾರತಕ್ಕೆ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುವ ಹಾಗೂ ವೈದ್ಯಕೀಯ ಪ್ರವಾಸೋದ್ಯವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಇ-ವೀಸಾ ವ್ಯವಸ್ಥೆ ರೂಪಿಸಲಾಗಿದೆ. ಇದರಲ್ಲಿ ಒಟ್ಟು 158 ದೇಶಗಳ ಪ್ರವಾಸಿಗರಿಗೆ ಅವಕಾಶ ಕಲ್ಪಿಸಲಾಗಿದೆ. ಇ-ವೀಸಾ ಎಂದು ಕರೆ
ಯುವ ಎಲೆಕ್ಟ್ರಾನಿಕ್‌ ವೀಸಾ ಪ್ರವಾಸಿ ವೀಸಾವಾಗಿದ್ದು ಸಂಪೂರ್ಣ ಆನ್‌ಲೈನ್‌ ಪ್ರಕ್ರಿಯೆಯಲ್ಲಿ ನಡೆಯುತ್ತದೆ. ಪಾಸ್‌ಪೋರ್ಟ್‌ ಹಾಗೂ ಭಾವಚಿತ್ರ ಸೇರಿದಂತೆ ಅವಶ್ಯ ದಾಖಲೆಗಳನ್ನು ಸ್ಕ್ಯಾನ್‌ ಮಾಡಿ ಆನ್‌ಲೈನ್‌ ಮೂಲಕ ಪ್ರಯಾಣದ ಮುಂಚಿತವಾಗಿ ದಿನಗಳ
ಮೊದಲು ಸಲ್ಲಿಸಬೇಕು. ಪ್ರವಾಸದ ವೇಳೆ ಅವರು ಪಾಸ್‌ಪೋರ್ಟ್‌ನ ಮೂಲ ಪ್ರತಿಯನ್ನು ತಮ್ಮ ಜತೆಗೆ ಇಟ್ಟುಕೊಳ್ಳಬೇಕು. ಭಾರತದಲ್ಲಿ ಇದನ್ನು ಇ-ಟೂರಿಸ್ಟ್‌ ವೀಸಾ ಎಂಬುದಾಗಿ ಹೆಸರಿಸಲಾಗಿದೆ. ಇದನ್ನು ಹೊಂದಿದವರು ಗರಿಷ್ಠ ಎಂದರೆ ಭಾರತದಲ್ಲಿ 30 ದಿನ ಮಾತ್ರ ಉಳಿಯಬಹುದು. ಒಬ್ಬ ವ್ಯಕ್ತಿ ಒಂದು ವರ್ಷದಲ್ಲಿ ಎರಡು ಬಾರಿ ಮಾತ್ರ ಇ-ವೀಸಾ ಪಡೆಯಬಹುದು.

ಬೆಲ್ಜಿಯಂ ಮಹಿಳೆ  ಬಂದ ವಿಮಾನದಲ್ಲಿಯೇ  ವಾಪಸಾಗಿದ್ದರು…!
ಕಳೆದ ಎಪ್ರಿಲ್‌ನಲ್ಲಿ ಬೆಲ್ಜಿಯಂ ನಿಂದ ಉಡುಪಿಯ ಆಯುರ್ವೇದ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬಂದಿದ್ದ ಮಹಿಳೆಯೊಬ್ಬರು ಮಂಗಳೂರು ಅಂ. ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದರೂ ಅವರು ವಿಮಾನ ನಿಲ್ದಾಣದಿಂದ ಹೊರಗೆ ಬರಲು ಸಾಧ್ಯವಾಗದೆ ವಾಪಸಾಗಿದ್ದರು. ಆಕೆಯ ಬಳಿ ಇದ್ದ “ವೀಸಾ ಆನ್‌ ಅರೈವಲ್‌’ನ್ನು ಪರಿಶೀಲಿಸುವ (ಪ್ರೊಸೆಸ್‌ ಮಾಡುವ) ಸೌಲಭ್ಯ ಮಂಗಳೂರಿನ ಇಮಿಗ್ರೇಶನ್‌ ವಿಭಾಗದಲ್ಲಿ ಇಲ್ಲದ ಕಾರಣ ಇಮಿಗ್ರೇಶನ್‌ ಅಧಿಕಾರಿಗಳು ಆಕೆಯನ್ನು ನಿಲ್ದಾಣದ ಹೊರಗೆ ಹೋಗಲು ಅವಕಾಶ ನೀಡಲಿಲ್ಲ. ಹೀಗಾಗಿ ಬೆಳಗ್ಗೆ 7.30ಕ್ಕೆ ಬಂದಿದ್ದ ಆಕೆ ರಾತ್ರಿ 11 ಗಂಟೆ ತನಕ ವಿಮಾನ ನಿಲ್ದಾಣದ ಒಳಗೇ ಉಳಿದು, ಅದೇ ವಿಮಾನದಲ್ಲಿ ದುಬಾೖಗೆ ಹಿಂದಿರುಗಿದ್ದರು !

Advertisement

ನವಮಂಗಳೂರು ಬಂದರಿಗಿದೆ “ಇ-ವೀಸಾ’ ಸೌಲಭ್ಯ 
ಎಲೆಕ್ಟ್ರಾನಿಕ್‌ ವೀಸಾ ( ಇ-ವೀಸಾ) ಹೊಂದಿರುವ ವಿದೇಶಿ ಪ್ರವಾಸಿ ಗರಿಗೆ ನವಮಂಗಳೂರು ಬಂದರು ಮೂಲಕ ದೇಶದೊಳಗೆ ಬರಲು ಈಗಾಗಲೇ ಅವಕಾಶ ನೀಡಲಾಗಿದೆ. ನ. 30ರಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತುತವಿರುವ 16 ವಿಮಾನ ವಿಲ್ದಾಣಗಳ ಜತೆಗೆ 5 ಬೃಹತ್‌ ಬಂದರುಗಳಾದ ಮಂಗಳೂರು, ಕೊಚ್ಚಿ, ಚೆನ್ನೈ, ಗೋವಾ ಬಂದರುಗಳ ಮೂಲಕ ಇ-ವೀಸಾದ ಪ್ರಯಾಣಿಕರಿಗೆ ದೇಶದೊಳಗೆ ಪ್ರವೇಶಿಸಲು ಅನುಮತಿ ನೀಡಿದೆ. ಮಂಗಳೂರು ಸುಸಜ್ಜಿತ ಸರ್ವಋತು ಬಂದರು ಹೊಂದಿದೆ. ದೇಶದ ಪ್ರಮುಖ ಬೃಹತ್‌ ಬಂದರುಗಳ ಸಾಲಿನಲ್ಲಿ ನವಮಂಗಳೂರು ಗುರುತಿಸಿಕೊಂಡಿದ್ದು, ಪ್ರಪಂಚದ ಅನೇಕ ದೇಶಗಳ ಸರಕು ಮತ್ತು ಪ್ರವಾಸಿ ಹಡಗುಗಳು ಇಲ್ಲಿಗೆ ಬರುತ್ತಿವೆ. 

ಚೆನ್ನೈಯಿಂದ ಬರಲಿವೆ ಉಪಕರಣಗಳು ಮಂಗಳೂರು ವಿಮಾನ ನಿಲ್ದಾಣದಲ್ಲಿ ಇ-ವೀಸಾ ಸೌಲಭ್ಯಕ್ಕೆ ಅನುಮತಿ ದೊರ
ಕಿದೆ. ಒಂದು ವಾರದೊಳಗೆ ಚೆನ್ನೈಯಿಂದ ಇದಕ್ಕೆ ಸಂಬಂಧಪಟ್ಟ ಕಂಪ್ಯೂಟರ್‌ ಹಾಗೂ ಇತರ ಉಪಕರಣಗಳು ಆಗಮಿ
ಸಲಿವೆ. ಅದರ ಮೂಲಕ ಮಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರತ್ಯೇಕ ಕೌಂಟರ್‌ ತೆರೆದು, ಸೇವೆ ನೀಡ ಲಾಗುವುದು. 
-ಜೆ. ಟಿ. ರಾಧಾಕೃಷ್ಣನ್‌, ಮಂಗಳೂರು ಅಂ.ವಿಮಾನ ನಿಲ್ದಾಣದ ನಿರ್ದೇಶಕ

ದಿನೇಶ್‌ ಇರಾ 

Advertisement

Udayavani is now on Telegram. Click here to join our channel and stay updated with the latest news.

Next