Advertisement

ಸಾರ್ವಜನಿಕ ಸಂಪರ್ಕ ಇಲಾಖೆಗೆ ನೂತನ ಕಟ್ಟಡ: ಶಿಲಾನ್ಯಾಸ

01:00 AM Feb 28, 2019 | Team Udayavani |

ಕಾಸರಗೋಡು: ರಾಜ್ಯ ಸರಕಾರ ಒಂದು ಸಾವಿರ ದಿನ ಪೂರೈಸಿದ್ದು ಎಲ್ಲ ವಲಯಗಳಲ್ಲಿ ಬೃಹತ್‌ ಯೋಜನೆಗಳನ್ನು ಜಾರಿಗೊಳಿಸಿದೆ ಎಂದು ರಾಜ್ಯ ಕಂದಾಯ ಸಚಿವ ಇ. ಚಂದ್ರಶೇಖರನ್‌ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಜಿಲ್ಲಾ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗಾಗಿ ನಿರ್ಮಿಸಲಾಗುವ ನೂತನ ಕಟ್ಟಡದ ಶಿಲಾನ್ಯಾಸ ನಡೆಸಿ, ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

Advertisement

ಸರಕಾರದ ಸಂದೇಶಗಳನ್ನು ಕ್ಲಪ್ತ ಸಮಯದಲ್ಲಿ ಜನತೆಗೆ ತಲುಪಿಸುವ ಹೊಣೆಯನ್ನು ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಿರ್ವಹಿಸುತ್ತಿದೆ. ಜತೆಗೆ ಸರಕಾರ ಮತ್ತು ಸಾರ್ವಜನಿಕರ ನಡುವೆ ಕೊಂಡಿಯಾಗಿ ಚಟುವಟಿಕೆ ನಡೆಸುತ್ತಿರುವುದು ಪ್ರಶಂಸನೀಯ ಎಂದರು.

ಶಿಕ್ಷಣ ಇಲಾಖೆಗೆ ಮಾತ್ರ ಒಂದು ಸಾವಿರ ಕೋಟಿ ರೂ. ಮೀಸಲಿರಿಸಿದೆ. ಯುವಜನತೆಗಾಗಿ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಲಾಗಿದೆ. 18,896 ಹುದ್ದೆಗಳನ್ನು ಸೃಷ್ಟಿಸಲಾಗಿದೆ. ಬರಿದಾಗಿರುವ ಹುದ್ದೆಗಳಿಗೆ ನೇಮಕಾತಿಗೂ ಸರ್ವ ಯತ್ನ ನಡೆಸಿದೆ. ಅಭಿವೃದ್ಧಿಗಾಗಿ ಬಳಸುವ ನಿಧಿಗಳನ್ನು ಸೂಕ್ತ ಅವಧಿಯಲ್ಲಿ ಬಳಸಲಾಗಿದೆ. ಮೂರು ವರ್ಷಗಳ ಅವಧಿಯಲ್ಲಿ ಬಹುತೇಕ ಯೋಜನೆಗಳು ಪೂರ್ಣಗೊಳ್ಳಲಿವೆ ಎಂದವರು ನಿರೀಕ್ಷೆ ವ್ಯಕ್ತಪಡಿಸಿದರು.

ಸಂಸದ ಪಿ. ಕರುಣಾಕರನ್‌ ಅಧ್ಯಕ್ಷತೆ ವಹಿಸಿದ್ದರು. ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಿರ್ದೇಶಕ ಪಿ.ಎಸ್‌.ರಾಜಶೇಖರನ್‌ ಯೋಜನೆ ಮಾಹಿತಿ ನೀಡಿದರು. ಲೋಕೋಪಯೋಗಿ ಕಾರ್ಯಕಾರಿ ಎಂಜಿನಿಯರ್‌ ಸಿ. ರಾಜೇಶ್‌ ಚಂದ್ರನ್‌ ತಾಂತ್ರಿಕ ವರದಿ ಸಲ್ಲಿಸಿದರು. ಶಾಸಕ ಕೆ. ಕುಂಞಿರಾಮನ್‌, ಹೆಚ್ಚುವರಿ ದಂಡನಾಧಿ ಕಾರಿ ಎನ್‌. ದೇವಿದಾಸ್‌, ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಕೆ.ಪಿ.ಅಬ್ದುಲ್‌ ಖಾದರ್‌, ಜಿಲ್ಲಾ  ಕ್ರೀಡಾ ಮಂಡಳಿ ಅಧ್ಯಕ್ಷ ಹಬೀಬ್‌ ರಹಮಾನ್‌, ರಾಜ್ಯ ಕಾರ್ಯಕಾರಿ ಸದಸ್ಯ ಬಾಲನ್‌ ಮಾಣಿಯಾಟ್‌, ಎಚ್‌.ಎ.ಎಲ್‌.ಎ.ಜಿ.ಎಂ. ಸಿ.ಎ.ರಾವ್‌, ಪ್ರಸ್‌ ಕ್ಲಬ್‌ ಅಧ್ಯಕ್ಷ ಟಿ.ಎ.ಶಾಫಿ, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ನ್ಯಾಯವಾದಿ ಗೋವಿಂದನ್‌ ಪಳ್ಳಿಕಾಪಿಲ್‌, ಕೈಪ್ರತ್‌ ಕೃಷ್ಣನ್‌ ನಂಬ್ಯಾರ್‌, ಕೆ.ವಿ.ಯು ಧಿಷ್ಠಿರನ್‌, ಮಾಟುಮ್ಮಲ್‌ ಹಸನ್‌ ಮೊದಲಾದವರು ಉಪಸ್ಥಿತರಿದ್ದರು.

ಜಿಲ್ಲಾಧಿಕಾರಿ ಡಾ| ಡಿ.ಸಜಿತ್‌ ಬಾಬು ಸ್ವಾಗತಿಸಿದರು. ಜಿಲ್ಲಾ ಮಾಹಿತಿ ಅಧಿಕಾರಿ ಮಧುಸೂದನನ್‌ ಎಂ. ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next