ಜಗದಾಲ್ಪುರ್(ಚತ್ತೀಸ್ ಗಢ):ಚತ್ತೀಸ್ ಗಢದ ಕಂಗೇರ್ ವ್ಯಾಲಿ ರಾಷ್ಟ್ರೀಯ ಉದ್ಯಾನದಲ್ಲಿ ಅಪರೂಪದ, ಸಂಭಾವ್ಯ ಅಪಾಯಕಾರಿ ಪ್ರಭೇದದ ಕಿತ್ತಳೆ ಬಣ್ಣದ ಬಾವಲಿ ಕಾಣಿಸಿಕೊಂಡಿರುವುದಾಗಿ ಅಧಿಕಾರಿಗಳು ಬುಧವಾರ (ಜನವರಿ 18) ತಿಳಿಸಿರುವುದಾಗಿ ವರದಿಯಾಗಿದೆ.
ಇದನ್ನೂ ಓದಿ:ವೀಸಾ ಅರ್ಜಿಯಲ್ಲಿ ನಕಲಿ ದಾಖಲೆ: ನವಾಬ್ ಮಲಿಕ್ ಪುತ್ರ, ಸೊಸೆ ವಿರುದ್ಧ ಎಫ್ ಐಆರ್
“ಬಣ್ಣದ ಬಾವಲಿ” ಎಂದು ಕರೆಯಲ್ಪಡುವ ಈ ಬಾವಲಿ ಕಡು ಕಿತ್ತಳೆ ಬಣ್ಣ ಮತ್ತು ಕಪ್ಪು ರೆಕ್ಕೆಗಳನ್ನು ಹೊಂದಿದೆ. ಈ ಬಾವಲಿ ಸೋಮವಾರ ಉದ್ಯಾನದ ಪರಾಲಿ ಬೋಡಾಲ್ ಗ್ರಾಮದ ಬಾಳೆ ತೋಟದಲ್ಲಿ ಕಂಡು ಬಂದಿರುವುದಾಗಿ ನ್ಯಾಷನಲ್ ಪಾರ್ಕ್ ನ ನಿರ್ದೇಶಕ ಧಮ್ಮಶಿಲ್ ಗನ್ವೀರ್ ಪಿಟಿಐಗೆ ತಿಳಿಸಿದ್ದಾರೆ.
ಕಡು ಕಿತ್ತಳೆ ಬಣ್ಣದ ಬಾವಲಿಯು ಕಂಗೇರ್ ಕಣಿವೆ ರಾಷ್ಟ್ರೀಯ ಉದ್ಯಾನದಲ್ಲಿ ಕಳೆದ ಕೆಲವು ವರ್ಷಗಳಲ್ಲಿ ಮೂರನೇ ಬಾರಿ ಕಾಣಿಸಿಕೊಂಡಿರುವುದಾಗಿ ಗನ್ವೀರ್ ಮಾಹಿತಿ ನೀಡಿದ್ದಾರೆ. ಕಂಗೇರ್ ರಾಷ್ಟ್ರೀಯ ಉದ್ಯಾನವು ಸುಣ್ಣದಕಲ್ಲಿನ ಗುಹೆಗಳಿಗೆ ಹೆಸರುವಾಸಿಯಾಗಿದೆ. ತಜ್ಞರ ಅಭಿಪ್ರಾಯದ ಪ್ರಕಾರ ಈ ಗುಹೆ ಬಾವಲಿಗಳ ವಾಸಕ್ಕೆ ಪ್ರಸಕ್ತ ಸ್ಥಳವಾಗಿದೆ.
ಬಣ್ಣದ ಬಾವಲಿಯ ವೈಜ್ಞಾನಿಕ ಹೆಸರು ಕೆರಿವೌಲಾ ಪಿಕ್ಟಾ ಎಂದಾಗಿದ್ದು, ಇದು ಸಂಭಾವ್ಯ ಅಪಾಯಕಾರಿ ಪ್ರಭೇದದವಾಗಿದೆ. ಈ ಬಾವಲಿಯು ಸಾಮಾನ್ಯವಾಗಿ ಬಾಂಗ್ಲಾದೇಶ, ಭಾರತ, ಮ್ಯಾನ್ಮಾರ್, ಕಾಂಬೋಡಿಯಾ, ಚೀನಾ, ಇಂಡೋನೇಷ್ಯಾ, ಮಲೇಷ್ಯಾ, ನೇಪಾಳ, ಶ್ರೀಲಂಕಾ, ಥಾಯ್ ಲ್ಯಾಂಡ್ ಮತ್ತು ವಿಯೆಟ್ನಾಂನಲ್ಲಿ ಕಂಡುಬರುವುದಾಗಿ ಗನ್ವೀರ್ ತಿಳಿಸಿದ್ದಾರೆ.