Advertisement

ಪತ್ನಿಯನ್ನು ಕೊಂದವನಿಗೆ ಕಠಿನ ಜೀವಾವಧಿ ಶಿಕ್ಷೆ

02:20 AM Jul 14, 2017 | Team Udayavani |

ಮಡಿಕೇರಿ: ಪತ್ನಿಯ ನಡತೆ ಬಗ್ಗೆ ಸಂಶಯಗೊಂಡು ಆಕೆಗೆ ಮಾರಣಾಂತಿಕವಾಗಿ ಥಳಿಸಿ ಕೊಲೆಗೈದ ಆರೋಪ ಸಾûಾÂಧಾರಗಳಿಂದ ದೃಢಪಟ್ಟ ಹಿನ್ನೆಲೆಯಲ್ಲಿ ಇಲ್ಲಿನ ನ್ಯಾಯಾಲಯವು ವ್ಯಕ್ತಿಯೊಬ್ಬನಿಗೆ ದಂಡ ಸತ ಕಠಿನ ಜೀವಾವಧಿ ಶಿಕ್ಷೆ ಧಿಸಿ ತೀರ್ಪು ನೀಡಿದೆ. 

Advertisement

ನಾಪೋಕ್ಲು ಸಮೀಪದ ಕೋಕೇರಿ ಗ್ರಾಮದ ಪಿ.ಎ.ಪಳಂಗಪ್ಪ ಎಂಬವರ ತೋಟದ ಲೈನ್‌ ಮನೆಯಲ್ಲಿ ವಾಸವಿದ್ದ ಜೇನು ಕುರುಬರ ಚಂದ್ರ ಯಾನೆ ಮರಿ ಎಂಬಾತ ಪತ್ನಿ ಜಯಾ ಅವರೊಂದಿಗೆ ವಾಸವಾಗಿದ್ದು, 2016ರ ಜೂ. 27ರಂದು ಪಳಂಗಪ್ಪ ಅವರು ದಂಪತಿಯನ್ನು ನಾಪೋಕ್ಲುಗೆ ಕರೆದೊಯ್ದು ಮನೆ ಸಾಮಗ್ರಿಗಳನ್ನು ಖರೀದಿಸಿ ಕೊಟ್ಟು, ಅನಂತರ ವಾಪಾಸು ಲೈನ್‌ ಮನೆಗೆ ಬಿಟ್ಟಿದ್ದರು. 

ಮರುದಿನ ಬೆಳಗ್ಗೆ 7.30 ಗಂಟೆಗೆ ಪಳಂಗಪ್ಪ ಅವರು ಲೈನ್‌ ಮನೆಗೆ ಬಂದು ನೋಡಿದಾಗ ಜಯಾ ಸಂಶಯಾಸ್ಪದವಾಗಿ ಮೃತ ಪಟ್ಟಿದ್ದರಲ್ಲದೆ, ಪತಿ ಚಂದ್ರ  ಮಾತ್ರ ಸ್ಥಳದಲ್ಲಿರಲಿಲ್ಲ. ಇದನ್ನು ಗಮನಿಸಿದ ಪಳಂಗಪ್ಪ ಅವರು, ಅನುಮಾನಗೊಂಡು ಕೂಡಲೇ ನಾಪೋಕ್ಲು ಪೊಲೀಸ್‌ ಠಾಣೆಗೆ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದರು.  

2016ರ ಜು. 17ರಂದು ಆರೋಪಿಯನ್ನು ಪತ್ತೆ ಮಾಡಿ ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಚಂದ್ರ ತನ್ನ ಪತ್ನಿ ಜಯಾ,  ಕೂಲಿ ಕೆಲಸಕ್ಕೆ ಬರುತ್ತಿದ್ದ ಪರ ಪುರುಷರೊಂದಿಗೆ ಸಲುಗೆಯಿಂದ ವರ್ತಿಸುತ್ತಿದ್ದಳು. ಇದನ್ನು ಪ್ರಶ್ನಿಸಿದಾಗ ಆಕೆ  ನಾನು ಯಾರ ಜತೆ ಬೇಕಾದರೂ ಹರಟೆ ಹೊಡೆಯುತ್ತೇನೆ. ಇದು ನಿನಗೆ ಸಂಬಂಧವಲ್ಲದ ವಿಷಯ ಎಂದು ತಿಳಿಸಿದಳೆನ್ನಲಾಗಿದ್ದು,  ಈ ಬಗ್ಗೆ ಪತಿ-ಪತ್ನಿಯ ನಡುವೆ ಮಾತಿನ ಚಕಮಕಿ ನಡೆದಾಗ ಕೋಪಗೊಂಡ ಚಂದ್ರ ಆಕೆಗೆ ಥಳಿಸಿದ್ದಲ್ಲದೆ   ದೊಣ್ಣೆಯಿಂದ ಹೊಡೆದು ಕೊಲೆ ಮಾಡಿರುವುದು ಬೆಳಕಿಗೆ ಬಂದಿತ್ತು.  

ಆರೋಪಿಯ ವಿರುದ್ಧ ಕೊಲೆ ಆರೋಪದಡಿ ಸಲ್ಲಿಸಿದ ದೋಷಾರೋಪಣಾ ಪಟ್ಟಿಯ ವಿಚಾರಣೆ ನಡೆಸಿದ ಇಲ್ಲಿನ ಒಂದನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯದ ನ್ಯಾಯಾಧೀಶ ಡಿ. ಪವನೇಶ್‌ ಅವರು, ಆರೋಪಿ ಚಂದ್ರನು ಪತ್ನಿ ಜಯಾಳನ್ನು ಕೊಲೆ ಮಾಡಿರುವುದು ಸಾûಾÂಧಾರಗಳಿಂದ ದೃಢಪಟ್ಟ  ಹಿನ್ನೆಲೆಯಲ್ಲಿ ಆತನಿಗೆ ಕಠಿನ ಜೀವಾವಧಿ ಶಿಕ್ಷೆಯೊಂ ದಿಗೆ 5 ಸಾವಿರ ರೂ.ಗಳನ್ನು  ದಂಡವಾಗಿ ಪಾವತಿಸುವಂತೆ ತೀರ್ಪು ನೀಡಿದ್ದಾರೆ.

Advertisement

ಒಂದನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯದ ಸರಕಾರಿ ಅಭಿಯೋಜಕಿ ಎಂ. ಕೃಷ್ಣವೇಣಿ ಅವರು ಸರಕಾರದ ಪರ ವಾದ ಮಂಡಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next