ವಾರ್ಡ್‌ಗಳನ್ನೂ ತಲುಪುವ ದೃಷ್ಟಿಯಿಂದ ಪುರಸಭೆಗೆ ನೂತನ 8 ತ್ಯಾಜ್ಯ ಸಂಗ್ರಹ ವಾಹನಗಳು ಆಗಮಿಸಲಿವೆ. ತ್ಯಾಜ್ಯದ ಸಮಸ್ಯೆಗೆ ಮುಕ್ತಿ ನೀಡುವ ನಿಟ್ಟಿನಲ್ಲಿ ಪುರಸಭೆ ಹಲವು ಪ್ರಯತ್ನಗಳನ್ನು ಮಾಡಿದ್ದು, ಇದೀಗ ತ್ಯಾಜ್ಯ ರಾಶಿಗಳು ಕಂಡುಬರುತ್ತಿರುವ ಪ್ರದೇಶ ಗಳಲ್ಲಿ ಹಗಲು – ರಾತ್ರಿ ಸಿಬಂದಿ ನಿಯೋಜಿಸಿ ತ್ಯಾಜ್ಯ ಹಾಕುವವರನ್ನು ಪತ್ತೆಹಚ್ಚುವ ಕಾರ್ಯಕ್ಕೆ ಮುಂದಾಗಿದೆ.
Advertisement
ಈ ನಡುವೆ ಅಲ್ಲಲ್ಲಿ ತ್ಯಾಜ್ಯದ ಸಮಸ್ಯೆಗೆ ಶಾಶ್ವತ ಪರಿಹಾರ ನೀಡುವ ನಿಟ್ಟಿನಲ್ಲಿ ಪುರಸಭೆಯ ಎಲ್ಲ ವಾರ್ಡ್‌ಗಳಲ್ಲಿ ಪ್ರತಿ ಮನೆಯ ತ್ಯಾಜ್ಯ ಸಂಗ್ರಹದ ದೃಷ್ಟಿಯಿಂದ 8 ವಾಹನಗಳು ಆಗಮಿಸಲಿದ್ದು, ಇವು ಗಳ ಕಾರ್ಯಾಚರಣೆ ಆರಂಭಗೊಂಡರೆ ಸಾರ್ವ ಜನಿಕರು ರಸ್ತೆ ಬದಿ ಅಥವಾ ನದಿಗೆ ತ್ಯಾಜ್ಯ ಎಸೆಯುವುದು ಕಡಿಮೆಯಾಗಲಿದೆ. ಈಗಲೂ ಸಾರ್ವಜನಿಕರು ತ್ಯಾಜ್ಯ ಇರುವ ಕುರಿತು ಪುರಸಭೆಗೆ ಕರೆ ಮಾಡಿ ಮಾಹಿತಿ ನೀಡಿದರೆ ತ್ಯಾಜ್ಯ ಸಂಗ್ರಹ ಕಾರ್ಯ ಮಾಡುತ್ತೇವೆ. ಆದರೂ ಸಾರ್ವಜನಿಕರು ರಸ್ತೆ ಬದಿ ತ್ಯಾಜ್ಯ ಎಸೆಯುತ್ತಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪುರಸಭೆ ವ್ಯಾಪ್ತಿಯ ಬಿ.ಸಿ. ರೋಡ್‌ನ ಲಯನ್ಸ್ ಸೇವಾ ಮಂದಿರ, ರಿಕ್ಷಾ ಭವನ, ರೈಲ್ವೇ ನಿಲ್ದಾಣ, ಟಿಎಚ್‌ಒ ಕಚೇರಿ, ಪಾಣೆಮಂಗಳೂರಿನಿಂದ ನಂದಾವರಕ್ಕೆ ಹೋಗುವ ರಸ್ತೆ, ಪಾಣೆಮಂಗಳೂರು ಸೇತುವೆ, ನಂದಾವರ ಶಾಲಾ ಬಳಿ, ಬ್ರಹ್ಮರಕೂಟ್ಲು, ಬಂಟ್ವಾಳ ಬಡ್ಡಕಟ್ಟೆ ಶ್ಮಶಾನದ ಬಳಿ ಹೀಗೆ ಹತ್ತಾರು ಕಡೆಗಳಲ್ಲಿ ರಾಶಿಗಟ್ಟಲೆ ತ್ಯಾಜ್ಯ ಕಂಡುಬರುತ್ತಿದೆ. ನೇತ್ರಾವತಿ ನದಿ ಕಿನಾರೆಯಲ್ಲೂ ತ್ಯಾಜ್ಯ ವನ್ನು ನೇರವಾಗಿ ನದಿಗೆ ಬಿಡುವ ಕೆಲಸಗಳೂ ನಡೆಯುತ್ತಿದೆ. ಜತೆಗೆ ಕಿಡಿಗೇಡಿಗಳು ತಮ್ಮ ಮನೆಯ ತ್ಯಾಜ್ಯವನ್ನು ನದಿ, ರಸ್ತೆ ಬದಿಯಲ್ಲಿ ಹಾಕುವ ಕಾರ್ಯಮಾಡುತ್ತಿದ್ದಾರೆ. ಅಂತಹ ಕಿಡಿಗೇಡಿಗಳನ್ನು ಪತ್ತೆಹಚ್ಚುವ ನಿಟ್ಟಿನಲ್ಲಿ ಪ್ರಯತ್ನ ನಡೆಸಿದರೂ ಮತ್ತೆ ಮತ್ತೆ ಅದೇ ಸಮಸ್ಯೆ ಪುನರಾವರ್ತನೆಯಾಗುತ್ತಿದೆ.
Related Articles
ಹಾಲಿ ಬಂಟ್ವಾಳ ಪುರಸಭೆಯಿಂದ ಮನೆ ಮನೆ ತ್ಯಾಜ್ಯ ಸಂಗ್ರಹ ಕಾರ್ಯ ನಡೆಯುತ್ತಿದ್ದರೂ ಇನ್ನೂ ಎಲ್ಲ ಕಡೆಗಳಲ್ಲೂ ಸಂಗ್ರಹ ಕಾರ್ಯ ನಡೆಸಲು ಸಾಧ್ಯವಾಗಿಲ್ಲ. ಅಂದರೆ ತ್ಯಾಜ್ಯ ಸಂಗ್ರಹಿಸಲು 2 ಸ್ವಂತ ವಾಹನಗಳು ಹಾಗೂ 2 ಬಾಡಿಗೆ ವಾಹನಗಳು ಸಹಿತ ಒಟ್ಟು 4 ವಾಹನಗಳು ಕಾರ್ಯಾಚರಿಸುತ್ತಿವೆ.
Advertisement
ಆದರೆ ಇದರಿಂದ ಎಲ್ಲ ಕಡೆಗಳಿಗೂ ತಲುಪುವುದು ಅಸಾಧ್ಯವಾಗಿರುವುದರಿಂದ ನೂತನ 8 ತ್ಯಾಜ್ಯ ಸಂಗ್ರಹ ವಾಹನ ಖರೀದಿಗೆ ಈಗಾಗಲೇ ಟೆಂಡರ್ ಪ್ರಕ್ರಿಯೆ ಆರಂಭಗೊಂಡಿದೆ. ಮುಂದಿನ ಒಂದೂವರೆತಿಂಗಳಲ್ಲಿ ಈ ವಾಹನಗಳು ಕಾರ್ಯಾರಂಭದ ಕುರಿತು ಪುರಸಭೆಯ ಮೂಲಗಳು ತಿಳಿಸಿವೆ.
ಪುರಸಭೆಯಲ್ಲಿ 41 ಪೌರ ಕಾರ್ಮಿಕರು ದುಡಿಯುತ್ತಿದ್ದು, ನೂತನವಾಗಿ ಆಗಮಿಸುವ ವಾಹನಗಳಲ್ಲೂ ಇವರೇ ಕರ್ತವ್ಯ ನಿರ್ವಹಿಸಲಿದ್ದಾರೆ. ಆದರೆ ನೂತನ ವಾಹನಗಳಿಗೆ ಹೆಚ್ಚುವರಿಯಾಗಿ ಬೇಕಿರುವ ಚಾಲಕರನ್ನು ಪುರಸಭೆಯು ಹೊರಗುತ್ತಿಗೆಯಿಂದ ನೇಮಿಸಿಕೊಳ್ಳಲಿದೆ. ಭಾರೀ ದಂಡ
ರಸ್ತೆ ಬದಿ, ನದಿಗೆ ತ್ಯಾಜ್ಯ ಎಸೆಯುವವರ ಕುರಿತು ಕ್ರಮ ಜರಗಿಸಲು ಪುರಸಭೆಯು ಪರಿಸರ ವಿಭಾಗದ ಮೂಲಕ ಹಗಲು-ರಾತ್ರಿ ಸಿಬಂದಿ ನಿಯೋಜನೆ ಮಾಡುವ ಕಾರ್ಯ ಮಾಡಿದೆ. ತ್ಯಾಜ್ಯ ಎಸೆಯುವರು ಕಂಡುಬಂದಲ್ಲಿ ಅವರಿಗೆ ಭಾರೀ ದಂಡ ವಿಧಿಸಲಿದ್ದೇವೆ. ಮುಂದೆ ಮನೆ ಮನೆ ಕಸ ಸಂಗ್ರಹಕ್ಕೆ 8 ವಾಹನಗಳು ಬರಲಿದ್ದು, ಟೆಂಡರ್ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದೆ.
– ರಾಯಪ್ಪ, ಪ್ರಭಾರ ಮುಖ್ಯಾಧಿಕಾರಿ, ಬಂಟ್ವಾಳ ಕಿರಣ್ ಸರಪಾಡಿ