Advertisement

ಕೆಸರಿನ ಗದ್ದೆಯಾದ ಗ್ರಾಮೀಣ ಶಾಲೆ ಮೈದಾನ

01:07 PM Jul 21, 2022 | Team Udayavani |

ಚಿಂಚೋಳಿ: ಸೇಡಂ ವಿಧಾನಸಭೆ ಮತ ಕ್ಷೇತ್ರಕ್ಕೆ ಒಳಪಟ್ಟಿರುವ ತಾಲೂಕಿನ ರುದನೂರ, ಚಿಂತಪಳ್ಳಿ, ಭೂತಪೂರ, ಶಿರೋಳಿ ಗ್ರಾಮಗಳ ಸರ್ಕಾರಿ ಶಾಲೆಗಳ ಆವರಣದಲ್ಲಿ ಮಳೆ ನೀರು ನಿಂತು, ಕೋಣೆಗಳು ಸೋರಿಕೆಯಾಗಿ ವಿದ್ಯಾರ್ಥಿಗಳು, ಶಿಕ್ಷಕರು ಪರ ದಾಡುವಂತೆ ಆಗಿದೆ ಎಂದು ಟಿಎಪಿಸಿಎಂಎಸ್‌ ನಿರ್ದೇ ಶಕ ಮಲ್ಲಿಕಾರ್ಜುನ ಕೊಡದೂರ ಅಸ ಮಾಧಾನ ವ್ಯಕ್ತಪಡಿಸಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2008ರಲ್ಲಿ ವಿಧಾನಸಭೆ ಮತಕ್ಷೇತ್ರಗಳ ಪುನರ್‌ ವಿಂಗಡಣೆಯಾದ ಸಂದರ್ಭದಲ್ಲಿ ತಾಲೂಕಿನ ಸುಲೇಪೇಟ ಹೋಬಳಿ ವ್ಯಾಪ್ತಿಯಲ್ಲಿ ಬರುವ ಎಲ್ಲ 35 ಹಳ್ಳಿಗಳು ಸೇಡಂ ವಿಧಾನಸಭೆ ಮತಕ್ಷೇತ್ರಕ್ಕೆ ಸೇರ್ಪಡೆಯಾದವು. ಅಂತಹ ಗ್ರಾಮಗಳಲ್ಲಿ ರುದನೂರ, ಚಿಂತಪಳ್ಳಿ, ಶಿರೋಳಿ, ಭೂತಪುರ ಗ್ರಾಮಗಳು ಒಳಗೊಂಡಿವೆ. ಈ ಗ್ರಾಮಗಳಲ್ಲಿನ ಸರ್ಕಾರಿ ಶಾಲೆಗಳು ಅತ್ಯಂತ ದುಸ್ಥಿತಿಯಲ್ಲಿವೆ ಎಂದು ತಿಳಿಸಿದರು.

ಮಳೆಗಾಲದಲ್ಲಿ ಶಾಲೆ ಕೋಣೆಗಳು ಸಂಪೂರ್ಣ ಸೋರುತ್ತಿವೆ. ಇದರಿಂದ ಮಕ್ಕಳಿಗೆ ಬೆಚ್ಚನೆ ಕುಳಿತುಕೊಳ್ಳಲು ಜಾಗವಿಲ್ಲದಂತೆ ಆಗಿದೆ. ಶಾಲಾ ಬ್ಯಾಗ್‌, ಪುಸ್ತಕಗಳು ಮಳೆ ನೀರಿನಿಂದ ನೆನೆಯುತ್ತಿವೆ. ಮೈದಾನಗಳು ಕೆಸರಿನ ಗದ್ದೆಗಳಾಗಿವೆ. ಮಕ್ಕಳು ಶಾಲೆ ಒಳಗೆ ಮತ್ತು ಹೊರಗೆ ಹೋಗಲು ಪರದಾಡುವಂತೆ ಆಗಿದೆ. ಆದ್ದರಿಂದ ಮಳೆ ಬಂದರೆ ಸಾಕು ಭೂತಪೂರ ಸರ್ಕಾರಿ ಶಾಲೆಗೆ ರಜೆ ನೀಡಲಾಗುತ್ತಿದೆ ಎಂದರು.

ಬಿಇಒ, ಪಿಡಿಒ, ಬಿಆರ್‌ಸಿ, ಸಿಆರ್‌ಪಿ, ಬಿಆರಪಿ ಸಂಯೋಜಕರು ಈ ಶಾಲೆಗಳಿಗೆ ಭೇಟಿ ನೀಡಿ ಸ್ಥಿತಿಗತಿ ಪರಿಶೀಲಿಸಿ, ಸರ್ಕಾರಕ್ಕೆ ವರದಿ ನೀಡಬೇಕು. ಇಲ್ಲದಿದ್ದರೆ ಇಲ್ಲಿನ ಮಕ್ಕಳು ಸ್ವಚ್ಛತೆಯಿಲ್ಲದ ಜಾಗದಲ್ಲಿ ಬಿಸಿಯೂಟ ಸೇವಿಸಬೇಕಾಗುತ್ತದೆ. ಇಲ್ಲಿ ಶುದ್ಧ ಕುಡಿಯುವ ನೀರೂ ಇಲ್ಲ. ಶೌಚಾಲಯಗಳಿಲ್ಲ, ಡೆಸ್ಕ್‌ಗಳಿಲ್ಲ, ಕಂಪ್ಯೂಟರ್‌ಗಳಿಲ್ಲ, ವಿದ್ಯುತ್‌ ಸಂಪರ್ಕವಿಲ್ಲ, ಶಿಕ್ಷಕರ ಕೊರತೆಯೂ ಇದೆ ಎಂದು ಸಮಸ್ಯೆಗಳನ್ನು ತಿಳಿಸಿದ ಅವರು, ಕೂಡಲೇ ಕ್ರಮ ಕೈಗೊಳ್ಳುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next