Advertisement
ಆಧುನಿಕತೆಯ ಭರಾಟೆಯ ನಡುವೆ ಮರೆಯಾಗುತ್ತಿರುವ ಗ್ರಾಮೀಣ ಬದುಕು ಭಾವನೆಗಳ ನಡುವೆಯೂ ಕೂಡಾ ಗತಕಾಲದಿಂದಲೂ ಗ್ರಾಮೀಣ ಕೃಷಿಕರು ಕೃಷಿ ಚಟುವಟಿಕೆಗಳಿಗೆ ಬಳಸುತ್ತಿದ್ದ ಪರಿಕರ ಹಾಗೂ ಹಳೆಯ ಗೃಹೋಪಯೋಗಿ ವಸ್ತು, ಆಟಿಕೆಗಳು ಇಂದಿನ ಯುವ ಸಮುದಾಯಗಳಿಗೆ ಪರಿಚಯಿಸುವ ನಿಟ್ಟಿನಿಂದ ಮರದ ಕೆತ್ತನೆಯಲ್ಲಿ ಮಾದರಿಯನ್ನು ಸಿದ್ಧಪಡಿಸುವ ಮೂಲಕ ಜಡವಸ್ತುವಿಗೆ ಅಮೂರ್ತ ರೂಪವನ್ನು ನೀಡುವಲ್ಲಿ ಶ್ರಮಿಸುತ್ತಿದ್ದಾರೆ.
ಗತ ಕಾಲದಿಂದಲೂ ಕರಾವಳಿ ರೈತರು ತಮ್ಮ ಕೃಷಿ ಚಟುವಟಿಕೆಗಳಿಗೆ ಬಳಸುತ್ತಿದ್ದ ಎತ್ತಿನ ಗಾಡಿ, ನೇಗಿಲು, ನೊಗ, ಹಾರೆ, ತಿರಿ (ಭತ್ತದ ಕಣಜ ), ಕಳಸಿಗೆ , ಸೇರು, ಗೋರಿ, ಕೆಗೋರಿ, ಕುಟ್ಟಣಿಗೆ, ಕೊಡಲಿ ಸಂಬಳಿಗೆ (ಕೃಷಿ ಭೂಮಿಗೆ ನೀರು ಹಾಯಿಸುವ ಪರಿಕರ) ಹಾಗೂ ಹಳೆಯ ಕಾಲದ ಗೃಹೋಪಯೋಗಿ ವಸ್ತುಗಳಾದ ಅರೆಯುವ ಕಲ್ಲು, ಬೀಸುವ ಕಲ್ಲು, ಬಾಗುವ ಮರಿಗೆ, ಚಾಪೆ, ಮಣೆ, ಹಾಗೂ ಆಟಿಕೆಗಳಾದ ಚೆನ್ನೆಮಣೆ ಮೊದಲಾದ ಅಮೂಲ್ಯ ವಸ್ತುಗಳ ಮಾದರಿಗಳಿಗಾಗಿ ಅರಸಿ ಬರುವವರ ಸಂಖ್ಯೆ ಹೆಚ್ಚಾಗಿದೆ. ಈಗಾಗಲೇ ಇವರು ಸಿದ್ಧಪಡಿಸಿದ ನೂರಾರು ಮಾದರಿಗಳು ಇವರ ಕೈಚಳಕದಿಂದ ಮೂಡಿಬಂದಿದ್ದು ಈಗಾಗಲೇ ಬೇಡಿಕೆ ಹೆಚ್ಚಾಗಿದೆ. ಪ್ರಸ್ತುತ ತಾಲೂಕಿನ ಐಶಾರಾಮಿ ಹೊಟೇಲ್‌ಗಳು ಹಾಗೂ ಹಲವು ಮನೆಗಳಲ್ಲಿ ಪ್ರದರ್ಶನಕ್ಕೆ ಇರಿಸಿದ್ದಾರೆ.
ಕಲಾವಿದ ರಾಮಚಂದ್ರ ಆಚಾರ್ಯ ಅವರ ಕೈಚಳಕದಲ್ಲಿ ಮೂಡಿಬಂದ ಕೃಷಿ ಪರಿಕರಗಳ ಮಾದರಿಗಳು ಅತ್ಯಂತ ಆಕರ್ಷಕ ಹಾಗೂ ಗತ ಕಾಲದ ನೆನಪುಗಳು ಮತ್ತೆ ಮರುಕಳಿಸುತ್ತವೆ. ಇಂತಹ ಅಪರೂಪದ ಕಲಾತ್ಮಕ ವಸ್ತುಗಳನ್ನು ನೋಡಿದ ಅದೆಷ್ಟೋ ಮಂದಿ ಮೆಚ್ಚುಗೆ ವ್ಯಕ್ತಪಡಿಸಿ, ಕಲಾವಿದನ ಸೂಕ್ಷ್ಮಸಂವೇದನಾ ಶೀಲತೆಗೆಷ್ಟೆ
-ಡಾ| ಎಂ. ಕುಸುಮಾಕರ ಶೆಟ್ಟಿ , ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು
Related Articles
ಕಳೆದ ಒಂದು ವರ್ಷಗಳಿಂದಲೂ ಕೂಡಾ ಮರವನ್ನು ಬಳಸಿಕೊಂಡು ಹಿಂದಿನ ಕಾಲದ ಕೃಷಿ ಪರಿಕರ ಹಾಗೂ ಹಳೆ ಗೃಹೋಪಯೋಗಿ ವಸ್ತುಗಳ ಮಾದರಿಯನ್ನು ಮನೆಯಲ್ಲಿಯೇ ಸಿದ್ದಪಡಿಸಿರುವುದನ್ನು ಮೊದಲು ನೋಡಿದ ವೈದ್ಯರಾದ ಡಾ| ಎಂ. ಕುಸುಮಾಕರ ಶೆಟ್ಟಿ ಅವರು ಕ್ಲಿನಿಕ್ ಇರಿಸಿ ಪ್ರದರ್ಶಿಸಿದ ಮೇಲೆ ಅನಂತರ ಅಲ್ಲಿಂದ ಹಳೆಯ ಪರಂಪರೆಯ ವಸ್ತುಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಈಗಾಗಲೇ ಹಲವು ಮನೆ ಹಾಗೂ ಹೊಟೇಲ್‌ಗಳಲ್ಲಿ ಈ ವಸ್ತುಗಳನ್ನು ಪ್ರದರ್ಶಿಸಿದ್ದಾರೆ.
-ಕಕ್ಕುಂಜೆ ರಾಮಚಂದ್ರ ಆಚಾರ್ಯ, ಕಂಚುಗಾರುಬೆಟ್ಟು ತೆಕ್ಕಟ್ಟೆ
Advertisement