Advertisement

ಸೂರ್ಯನಂಗಳಕ್ಕೆ ನಾಸಾ ನೌಕೆ : ಜುಲೈ 31ರಂದು ನೌಕೆಯ ಪಯಣ ಆರಂಭ

08:35 AM Apr 09, 2018 | Karthik A |

ವಾಷಿಂಗ್ಟನ್‌: ಇದೇ ಮೊದಲ ಬಾರಿಗೆ ಸೂರ್ಯನಿಗೆ ಅತ್ಯಂತ ಸಮೀಪದಲ್ಲಿ ನೌಕೆಯೊಂದು ಸುತ್ತಲಿದೆ. ನಾಸಾ ಇದಕ್ಕೆ ವ್ಯಾಪಕ ಸಿದ್ಧತೆ ನಡೆಸಿದ್ದು, ಜುಲೈ 31ರಂದು ಈ ನೌಕೆ ಭೂಮಿಯನ್ನು ತೊರೆದು ಸೂರ್ಯನೆಡೆಗೆ ಸಾಗಲಿದೆ. ಪಾರ್ಕರ್‌ ಸೋಲಾರ್‌ ಪ್ರೋಬ್‌ ಎಂಬುದು ನಾಸಾದ ಸೂರ್ಯ ಯೋಜನೆಯಾಗಿದೆ. ಸೂರ್ಯನ ವಿಪರೀತ ಶಾಖವನ್ನು ತಡೆದುಕೊಳ್ಳಬಲ್ಲ ಈ ನೌಕೆಯ ಸಾಮರ್ಥ್ಯವೇ ಅತ್ಯಂತ ಮಹತ್ವದ್ದಾಗಿದೆ. ಈ ಹಿಂದೆ ಯಾವ ಮಾನವ ನಿರ್ಮಿತ ನೌಕೆಯೂ ಹೋಗದಷ್ಟು ಸಮೀಪದಲ್ಲಿ ಸೂರ್ಯನನ್ನು ಇದು ಸುತ್ತಲಿದೆ.

Advertisement

ಸೂರ್ಯನ ವಿಪರೀತ ಉಷ್ಣತೆಯನ್ನು ಸಹಿಸಿಕೊಳ್ಳುವುದರ ಜತೆಗೆ, ಸೂರ್ಯನ ಉಷ್ಣತೆ ಹಾಗೂ ಇತರ ಅಂಶಗಳ ಬಗ್ಗೆ ಮಹತ್ವದ ಮಾಹಿತಿಯನ್ನೂ ಇದು ಕಲೆಹಾಕಲಿದೆ. ಈಗಾಗಲೇ ಪಾರ್ಕರ್‌ ಸೋಲಾರ್‌ ಪ್ರೋಬ್‌ ನೌಕೆಯು ಫ್ಲೋರಿಡಾಗೆ ಆಗಮಿಸಿದ್ದು, ಅಂತಿಮ ಸಿದ್ಧತೆ ನಡೆದಿದೆ. ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ನೌಕೆಯನ್ನು ಉಡಾವಣೆ ಮಾಡಲಾಗುತ್ತದೆ. ಮುಂದಿನ ಕೆಲವು ತಿಂಗಳವರೆಗೆ ನೌಕೆ ಕಠಿಣ ತಪಾಸಣೆಗೆ ಒಳಪಡಲಿದೆ. ಥರ್ಮಲ್‌ ಪ್ರೊಟೆಕ್ಷನ್‌ ಸಿಸ್ಟಂ ಅಥವಾ ಹೀಟ್‌ ಶೀಲ್ಡ್‌ ಅನ್ನು ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿ ತಯಾರಿಸಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next