Advertisement
ಇಂದಿನ ಮನೆಗಳಲ್ಲಿ ಕನ್ನಡಿಗಳನ್ನು ಅಳವಡಿಸುವುದು ಟ್ರೆಂಡ್ ಆಗಿದ್ದು ಮನೆ ಇನ್ನಷ್ಟು ಚೆಂದ ಕಾಣುವುದು ಇದರ ಹಿಂದಿನ ಉದ್ದೇಶವಾಗಿದೆ. ಅದಲ್ಲದೆ ಇದು ಇಂಟೀರಿಯರ್ ಡೆಕೊರೇಶನ್‌ಗೆ ಇನ್ನಷ್ಟು ಮೆರುಗು ನೀಡುವುದರಲ್ಲಿ ಸಂಶಯವಿಲ್ಲ.
Related Articles
ಕನ್ನಡಿ ಮನೆಯ ಅಂದ ಹೆಚ್ಚಿಸುತ್ತವೆ ಎಂದು ಕಣ್ಣಿಗೆ ಕಂಡಿದ್ದನ್ನು ಮನೆಯಲ್ಲಿ ತಂದು ಅಳವಡಿಸುವುದಲ್ಲ, ತರುವುದಕ್ಕಿಂತ ಮೊದಲು ಗೋಡೆಯ ಎತ್ತರ ಅಗಲಕ್ಕೆ ಸರಿಯಾಗಿ, ಎಷ್ಟು ದೊಡ್ಡದಾದ ಕನ್ನಡಿ ತರಬೇಕು ಎಂದು ಮೊದಲು ನಿರ್ಧರಿಸಿ ಅನಂತರ ಯಾವ ರೀತಿಯ ಕನ್ನಡಿ ಆ ಗೋಡೆಗೆ ಒಪ್ಪಬಹುದು ಎಂಬುದನ್ನು ಸರಿಯಾಗಿ ಗಮನಿಸಿ, ಇದು ನಿಮ್ಮ ಕನ್ನಡಿ ಅಳವಡಿಕೆಯಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಉದ್ದನೆಯ ಕನ್ನಡಿ, ನೀಳ ಕನ್ನಡಿ, ಚೌಕ, ಆಯತಾಕಾರದ ಕನ್ನಡಿಗಳು ಸಾಮಾನ್ಯವಾಗಿ ಚೆಂದ ಕಾಣುತ್ತವೆ.
Advertisement
ಮೊದಲು ಸರಿಯಾದ ಯೋಚನೆಯ ಜತೆಗೆ ವಾಲ್‌ಗಳಿಗೆ ಕನ್ನಡಿ ಅಳವಡಿಸಬೇಕು. ನಿಮ್ಮ ರೀತಿಯಲ್ಲಿ ಅದು ಯಾವ ರೀತಿಯಲ್ಲಿ ಇಂಪಾಕ್ಟ್ ಆಗಬಲ್ಲದು ಎಂಬುದನ್ನು ಮೊದಲು ತಿಳಿದುಕೊಳ್ಳಿ ಅನಂತರ ಯಾವ ಗಾತ್ರದಲ್ಲಿ ಇರಬೇಕು ಎನ್ನುವುದನ್ನು ಯೋಚಿಸಿ ಏಕೆಂದರೆ ಕೆಲವರು ಪೂರ್ತಿ ವಾಲ್‌ಗಳಿಗೆ ಅಳವಡಿಸುತ್ತಾರೆ, ಇನ್ನು ಕೆಲವರು ಅರ್ಧ ಗೋಡೆಗಳಿಗೆ, ಇನ್ನು ಕೆಲವರು ಎಷ್ಟು ಬೇಕೊ ಅಷ್ಟೆ ಅಳವಡಿಸಿಕೊಂಡಿರುತ್ತಾರೆ ಹಾಗಾಗಿ ಕನ್ನಡಿಯ ಆಕರ್ಷಣೆ ನಿಮಗೆ ಕೇಂದ್ರ ಬಿಂದುವಾಗಬೇಕೊ ಅಥವಾ ಅದು ಬ್ಯಾಕ್‌ಗ್ರೌಂಡ್ ರೀತಿಯಲ್ಲಿ ಕಾಣಬೇಕೊ ಎಂಬುದನ್ನು ನಿರ್ಧರಿಸಿಕೊಳ್ಳಿ.
ಇತ್ತೀಚೆಗೆ ಸಾಮಾನ್ಯವಾಗಿ ಅಪಾರ್ಟ್‌ಮೆಂಟ್‌ಗಳಲ್ಲಿ ಇದನ್ನು ಬಳಸುತ್ತಿದ್ದು ಕೋಣೆಗಳು ವಿಶಾಲವಾಗಿ ಕಾಣಲು ಕನ್ನಡಿ ಸಹಾಯಕವಾಗಿದೆ. ಇದು ಭ್ರಮೆಯನ್ನು ಹುಟ್ಟಿಸುತ್ತದೆ. ಇನ್ನು ಕೆಲವರು ಇದನ್ನು ಕಿಚನ್‌ಗಳಲ್ಲಿ ಅಳವಡಿಸಿಕೊಳ್ಳುತ್ತಾರೆ. ಏಕೆಂದರೆ ಸಾಮಾನ್ಯವಾಗಿ ಮಹಿಳೆಯರು ಕನ್ನಡಿಯನ್ನು ತುಂಬಾ ಇಷ್ಟ ಪಡುವುದರಿಂದ ಕಿಚನ್‌ಗಳಲ್ಲಿ ಇದನ್ನು ಅಳವಡಿಸುವುದರಿಂದ ಅಡಿಗೆ ಮನೆಯಲ್ಲಿ ಹೆಚ್ಚು ಹೊತ್ತು ಕಾಲ ಕಳೆಯಲು ನೆರವಾಗುತ್ತದೆ. ಇನ್ನು ಕೆಲವು ಮನೆಗಳಲ್ಲಿ ಇದನ್ನು ಮನೆಯ ಮುಖ್ಯದ್ವಾರದ ಎದುರು ಕೂಡ ಬ್ರಹೃತ್ ಕನ್ನಡಿ ಅಳವಡಿಸುತ್ತಾರೆ. ಇದು ನಿಮ್ಮ ಮನೆಗೆ ಬರುವ ಅತಿಥಿಗಳಿಗೆ ಸ್ವಾಗತ ಕೋರುತ್ತವೆ. ಈ ರೀತಿ ಯಾವುದೇ ಪ್ರದೇಶವಿರಲಿ ವಿಸ್ತೀರ್ಣ ಇನ್ನಷ್ಟು ಹೆಚ್ಚ ಬೇಕು ಎಂದಲ್ಲೆಲ್ಲಾ ಕನ್ನಡಿಯನ್ನು ಬಳಸಬಹುದಾಗಿದೆ. ಆದರೆ ಇವುಗಳನ್ನು ಅಳವಡಿಸುವ ಮೊದಲು ಒಂದು ವ್ಯವಸ್ಥಿತವಾದ ಯೋಜನೆ ಮುಖ್ಯವಾಗಿರುತ್ತದೆ. ಮತ್ತು ಯಾವ ರೀತಿಯ ಕನ್ನಡಿ ಹೊಂದಬಹುದು ಎಂಬುದನ್ನು ಕೂಡ ಯೋಚಿಸಿ ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ.
ಪ್ರೇಮ್‌ಗಳ ಆಯ್ಕೆನೀವು ಖರೀದಿಸಿ ತರುವ ಕನ್ನಡಿಯ ಜತೆಗೆ ಅದಕ್ಕೆ ಅಳವಡಿಸುವ ಪ್ರೇಮ್ ಕೂಡ ಮುಖ್ಯ ಪಾತ್ರ ವಹಿಸುತ್ತದೆ. ಯಾಕೆಂದರೆ ಒಮ್ಮೊಮ್ಮೆ ನೀವು ಆರಿಸುವ ಪ್ರೇಮ್‌ಗಳು ನಿಮ್ಮ ಗೋಡೆಯ ಬಣ್ಣಕ್ಕೆ ಸರಿ ಹೊಂದುವುದಿಲ್ಲ. ಅದಕ್ಕಿಂತ ಮಿಗಿಲಾಗಿ ಗೋಡೆಗಳಿಗೆ ತಕ್ಕನೆಯ ಪ್ರೇಮ್ ಹುಡುಕುವುದು ದೊಡ್ಡ ಸಾಹಸ. ಆದ್ದರಿಂದ ಆದಷ್ಟು ವಾಲ್‌ಗೆ ಸರಿಹೊಂದುವ ಚೌಕಟ್ಟನ್ನು ಆರಿಸಿ ಆಗ ವಾಲ್ ಇನ್ನಷ್ಟು ಚೆಂದವಾಗಿ ಕಾಣುತ್ತದೆ. ಅದಲ್ಲದೆ ನೀವು ಆಯ್ಕೆ ಮಾಡಿದ ಪ್ರೇಮ್‌ಗಳು ನಿಮ್ಮ ಅಭಿರುಚಿಯನ್ನು ಬಿಂಬಿಸುವಂತಿರಬೇಕು. ಈಗ ಕ್ಯಾಶುವಲ್ ಮತ್ತು ಮಾಡರ್ನ್ ಇಂಟೀರಿಯರ್‌ಗಳಲ್ಲಿಯೂ ಇದು ಸಾಮಾನ್ಯವಾಗಿದ್ದು, ಸದ್ಯ ಸರಳ ಪ್ರೇಮ್‌ಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. - ಪ್ರೀತಿ ಭಟ್ ಗುಣವಂತೆ