Advertisement

ಶೋಭೆಯಲ್ಲ… ಪ್ರೇಮಕ್ಕೆ ಪ್ರತಿಷ್ಠೆ, ಅವಿವೇಕದ ಬೇಲಿ

01:04 AM Dec 21, 2023 | Team Udayavani |

ಶುಭ ಕಾರ್ಯಕ್ರಮದ ಊಟದಲ್ಲಿ ತಾಯಿಯೊಬ್ಬಳು ಕೂತಿದ್ದರೆ ಎಲೆಗೆ ಹಾಕುವ ಸಿಹಿಯನ್ನು ಕೈಯಲ್ಲಿ ಪಡೆದುಕೊಂಡು ಕರವಸ್ತ್ರದಲ್ಲಿ ಸುತ್ತಿಟ್ಟುಕೊಂಡು ಮನೆಗೆ ತಂದು ಮಕ್ಕಳಿಗೆ ಕೊಡುವುದಿದೆ. ಇದಕ್ಕೆಲ್ಲ ಬೆಲೆ ಕಟ್ಟಲು ಸಾಧ್ಯವೇ ಇಲ್ಲ. ಕೂಲಿ ಕೆಲಸ ಮಾಡುವ ಹೆತ್ತವರು ಕೂಡ ತಮ್ಮ ಮಕ್ಕಳು ದೊಡ್ಡ ಅಧಿಕಾರಿಯಾಗಬೇಕು, ಅವರನ್ನು ಮದುವೆಯಾಗುವವರೂ ಅದೇ ರೀತಿಯ ಹುದ್ದೆ, ಅಂತಸ್ತಿನಲ್ಲಿರಬೇಕು ಎಂದು ಬಯಸುತ್ತಾರೆ. ಇದು ಆಸೆಯಲ್ಲ, ಮಕ್ಕಳ ಮೇಲಿನ ಕಾಳಜಿ.

Advertisement

ಬೆಳಗಾವಿಯಲ್ಲಿ ಮಹಿಳೆಯೋರ್ವರನ್ನು ವಿವಸ್ತ್ರಗೊಳಿಸಿ ಮೆರವಣಿಗೆ ಮಾಡಿ ಅಮಾನುಷವಾಗಿ ಹಲ್ಲೆ ಮಾಡಿರುವ ಪ್ರಕರಣ ಈಗ ದೇಶದ ಗಮನ ಸೆಳೆದು ಸಾಕಷ್ಟು ಚರ್ಚೆಯಲ್ಲಿದೆ. ಇಲ್ಲಿ ಮಾನವೀಯತೆಯನ್ನು ಬಹಿರಂಗವಾಗಿ ನೇಣಿಗೇ ರಿಸಲಾಗಿದೆ. ಇಡೀ ಪ್ರಕರಣಕ್ಕೆ ಪ್ರಮುಖ ಕಾರಣ ಇಬ್ಬರು ಪ್ರೇಮಿಗಳು ಪರಾರಿಯಾದುದು.
ಇನ್ನೊಂದು ಉಡುಪಿ ಜಿಲ್ಲೆಯಲ್ಲಿ ನಡೆದಿರುವ ಘಟನೆ. ಸಮಾಜಸೇವಕರೊಬ್ಬರು ಪತ್ನಿಯೊಂದಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡು ಅವರ ಅಪಾರ ಸಂಖ್ಯೆಯ ಅಭಿಮಾನಿ ವರ್ಗವನ್ನು ದುಃಖದ ಕಡಲಿಗೆ ನೂಕಿದ್ದಾರೆ. ಅವರಿಂದ ಸಹಾಯ ಪಡೆದ ಎಷ್ಟೋ ಮಂದಿ ದಿšೂ¾ಢರಾಗಿದ್ದಾರೆ. ಈ ಸಾವನ್ನು ಒಪ್ಪಿಕೊಳ್ಳಲು ಸಿದ್ಧರಿಲ್ಲದವರು ಅನೇಕರು. ಇದಕ್ಕೂ ಇದುವರೆಗೆ ಗೊತ್ತಾದ ಕಾರಣ ಅವರ ಅಪ್ರಾಪ್ತ ವಯಸ್ಕ ಸಾಕುಪುತ್ರಿ ಪ್ರೇಮಿಯೊಂದಿಗೆ ಪರಾರಿಯಾದುದು.

ಮದುವೆಗೆ ಮನೆಯವರು ಒಪ್ಪುತ್ತಿಲ್ಲ ಎಂದು ಈ ರೀತಿ ಪರಾರಿಯಾಗುತ್ತಿರುವ ಜೋಡಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಕೆಲವು ಪ್ರಕರಣಗಳಲ್ಲಿ ಪರಾರಿಯಾಗಿ ಮದುವೆಯಾದ ಜೋಡಿಯನ್ನು ನಿಧಾನವಾಗಿ ಮನೆಯವರು ಸ್ವೀಕರಿಸುವುದಿದೆ. ಇನ್ನು ಕೆಲವು ಪ್ರಕರಣಗಳಲ್ಲಿ ಮರ್ಯಾದೆಗಾಗಿ ಜೋಡಿಯ ಹತ್ಯೆ ನಡೆದುದೂ ಸಾಕಷ್ಟಿದೆ. ಹೆತ್ತವರು, ಒಡಹುಟ್ಟಿದವರೇ ತಮ್ಮವರ ಕೊಲೆಗಾರರಾದುದೂ ಇದೆ. ಪ್ರೇಮದ ಹೆಸರಲ್ಲಿ ಸಂಗಾತಿಯ ಆಯ್ಕೆಯಲ್ಲಿ ಇಟ್ಟ ಹೆಜ್ಜೆ ತಪ್ಪಾಗಿ ಬದುಕನ್ನು ನರಕದ ಕೂಪವಾಗಿಸಿದವರೂ ಇದ್ದಾರೆ.

ಕಾರಣಗಳು ಹಲವು
ಮಕ್ಕಳು ಪ್ರೀತಿಸಿದವರ ಜತೆ ಅವರ ಮದುವೆ ಮಾಡಲು ಮನೆಯವರು ಒಪ್ಪದಿರಲು ಕಾರಣಗಳು ಹಲವಾರು. ಒಂದು ಕಡೆ ಜಾತಿ, ಮತ್ತೂಂದೆಡೆ ಅಂತಸ್ತು, ಇನ್ನೊಂದೆಡೆ ಸಮಾನತೆ ಇಲ್ಲದಿರುವುದು ಇತ್ಯಾದಿ ಬೇರೆ ಬೇರೆ ಕಾರಣಗಳು ಪ್ರೀತಿಯ ಹೆಸರಲ್ಲಿ ಕ್ರೌರ್ಯವನ್ನು ಮೆರೆಸುತ್ತವೆ. ವಿವೇಕದಿಂದ ಚಿಂತಿಸಿದಾಗ ಮಾತ್ರ ನಮಗೆ ನಮ್ಮ ತಪ್ಪುಗಳು ಗೋಚರಿಸಲು ಸಾಧ್ಯವಾದೀತು.

ಮಕ್ಕಳ ಮೇಲಿದೆ ಹೆಚ್ಚಿನ ಜವಾಬ್ದಾರಿ
ಇಲ್ಲಿ ಮುಖ್ಯವಾಗಿ ಮಕ್ಕಳ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ. ಅವರು ಹೆತ್ತವರನ್ನು ಅವಗಣಿಸಿ ಪ್ರೇಮಿ ಜತೆ ಹೋಗುವ ಮೊದಲು ತಾವು ಬೆಳೆದು ಬಂದ ದಾರಿ, ಹೆತ್ತವರು ತೋರಿಸಿದ ಪ್ರೀತಿ, ಬೆಳೆಸಿದ ರೀತಿ, ತಮ್ಮಲ್ಲಿ ಹೆತ್ತವರು ಕಂಡುಕೊಂಡಿರುವ ಕನಸು, ತಮ್ಮ ಮೇಲೆ ಅವರಿಗಿರುವ ಭರವಸೆ, ಬದುಕನ್ನೇ ಹೆತ್ತವರು ತಮಗಾಗಿ ಮೀಸಲಿರಿಸಿದ್ದಾರೆ ಎಂಬುದಕ್ಕಿರುವ ಮಹತ್ವ ಹಾಗೂ ತಮ್ಮ ಪ್ರೇಮಿಯ ವಿಷಯದಲ್ಲಿ ತಾವು ಹೊಂದಿರುವ ಎಲ್ಲ ಭಾವನೆಗಳನ್ನು ವಿವೇಕ ಎಂಬ ತಕ್ಕಡಿಯಲ್ಲಿಟ್ಟು ತೂಗಿ ನೋಡಬೇಕು. ಮಕ್ಕಳಿಗಾಗಿ ಹೆತ್ತವರು ತೋರುವ ಪ್ರೀತಿ, ಪಡುವ ಕಷ್ಟ, ಅನುಭವಿಸುವ ನೋವು ಇತ್ಯಾದಿಗಳಿಗೆ ಇತಿಮಿತಿ ಎಂಬುದಿಲ್ಲ. ಏನಿದ್ದರೂ ಮಕ್ಕಳಿಗೆ ಎಂಬ ಭಾವನೆ ಹೆತ್ತವರದ್ದು. ಮದುವೆ ಸಹಿತ ಯಾವುದಾದರೂ ಶುಭ ಕಾರ್ಯಕ್ರಮದ ಊಟದಲ್ಲಿ ತಾಯಿಯೊಬ್ಬಳು ಕೂತಿದ್ದರೆ ಎಲೆಗೆ ಹಾಕುವ ಸಿಹಿಯನ್ನು ಕೈಯನ್ನು ಪಡೆದುಕೊಂಡು ತನ್ನ ಕರವಸ್ತ್ರದಲ್ಲಿ ಸುತ್ತಿಟ್ಟುಕೊಂಡು ಮನೆಗೆ ತಂದು ಮಕ್ಕಳಿಗೆ ಕೊಡುವುದಿದೆ. ಇದಕ್ಕೆಲ್ಲ ಬೆಲೆ ಕಟ್ಟಲು ಸಾಧ್ಯವೇ ಇಲ್ಲ. ಕೂಲಿ ಕೆಲಸ ಮಾಡುವ ಹೆತ್ತವರು ಕೂಡ ತಮ್ಮ ಮಕ್ಕಳು ದೊಡ್ಡ ಅಧಿಕಾರಿಯಾಗಬೇಕು, ಅವರನ್ನು ಮದುವೆಯಾಗುವವರೂ ಅದೇ ರೀತಿಯ ಹುದ್ದೆ, ಅಂತಸ್ತಿನಲ್ಲಿರಬೇಕು ಎಂದು ಬಯಸುತ್ತಾರೆ. ಇದು ಆಸೆಯಲ್ಲ, ಮಕ್ಕಳ ಮೇಲಿನ ಕಾಳಜಿ.
ಇದೆಲ್ಲ ನಮ್ಮ ಮಕ್ಕಳಿಗೆ ಗೊತ್ತಿಲ್ಲ ಎಂದೇನಲ್ಲ. ಆದರೆ ಅವರ ಮಹತ್ವವನ್ನು ತಿಳಿದುಕೊಳ್ಳುವಲ್ಲಿ ಅವರು ಸೋಲುತ್ತಾರೆ. ಪ್ರೇಮಿ ತೋರಿಸಿದ ಲೋಕಕ್ಕಿಂತ ಮಿಗಿಲು ಯಾವುದೂ ಇಲ್ಲ ಎಂಬ ತಪ್ಪು ಭಾವನೆ ಅವರದ್ದಾಗಿರುತ್ತದೆ. ಪ್ರಾಯಸಹಜವಾದ ಪ್ರೇಮ ಮನಃಸ್ಥಿತಿಯು ಅವರನ್ನು ವಿವೇಕಹೀನರಾಗಿಸುತ್ತದೆ. ತಾವು ಮಾಡುವುದು ತಪ್ಪು ಎಂಬುದು ಗೊತ್ತಿದ್ದರೂ, ವಿಷಯ ಗೊತ್ತಾದರೆ ಹೆತ್ತವರು ಆಘಾತಕ್ಕೀಡಾಗುತ್ತಾರೆ ಎಂಬುದು ಗೊತ್ತಿದ್ದರೂ ಕದ್ದು ಮುಚ್ಚಿ ಪ್ರೇಮ ವ್ಯವಹಾರವನ್ನು ಮುಂದುವರಿಸುತ್ತಾರೆ. ಅಂತಿಮವಾಗಿ ತಮ್ಮದೇ ನಿರ್ಧಾರಕ್ಕೆ ಬದ್ಧರಾಗಿ ಹೆತ್ತವರಿಗೆ ದೊಡ್ಡ ಅನ್ಯಾಯ ಮಾಡಿಬಿಡುತ್ತಾರೆ. ಸಾಕಿ ಸಲಹಿದ ಪ್ರತ್ಯಕ್ಷ ದೇವರಾಗಿರುವ ಹೆತ್ತವರಿಗೆ ಹೀಗೆ ಮಾಡುವುದು ಎಷ್ಟು ಸರಿ ಎಂಬ ಬಗ್ಗೆ ಒಂದಿಷ್ಟೂ ಚಿಂತಿಸುವುದಿಲ್ಲ.

Advertisement

ಒಪ್ಪಿಸುವುದು ಅತ್ಯಗತ್ಯ
ಎಲ್ಲ ಪ್ರೇಮ ಪ್ರಕರಣಗಳಲ್ಲೂ ಹೆತ್ತವರ ನಿಲುವು ಸಮರ್ಥ ನೀಯ ಎಂದು ಹೇಳಲಾಗದು. ಆದರೆ ಹೆತ್ತವರನ್ನು ಒಪ್ಪಿಸಿ ತಮ್ಮ ಪ್ರೇಮಕ್ಕೆ ಅನುಮತಿ ಪಡೆದು ಅವರ ಸಮ್ಮುಖದಲ್ಲೇ ಮದುವೆ ಯಾಗುವುದು ಮಕ್ಕಳ ಕರ್ತವ್ಯ. ಮಕ್ಕಳ ಮದುವೆಗಿಂತ ದೊಡ್ಡ ಸಂಭ್ರಮ ಹೆತ್ತವರಿಗಿಲ್ಲ. ಅದ ಕ್ಕಾಗಿ ಜೀವ ಕೈಯಲ್ಲಿ ಹಿಡಿದು ಕಾಯುವ ಹಿರಿಯರೂ ಇರುತ್ತಾರೆ. ಅಂಥ ಸಂಭ್ರಮವನ್ನು ಅವರಿಂದ ಕಸಿದುಕೊ ಳ್ಳುವುದು ಖಂಡಿತಾ ಸರಿಯಲ್ಲ. ಈಗ ನಮಗೆ ಕಾನೂನಿನ ಬಲ ಇದೆ. ಪ್ರೌಢ ವಯಸ್ಕರಿಗೆ ತಮ್ಮ ಜೀವನದ ಬಗ್ಗೆ ಸ್ವಯಂ ನಿರ್ಧಾರ ಕೈಗೊಳ್ಳಲು ಕಾನೂನು ಅವಕಾಶ ಮಾಡಿಕೊಡುತ್ತದೆ. ಹಾಗೆಂದು ನಮ್ಮನ್ನು ಸಾಕಿ ಬೆಳೆಸಿದ ಹೆತ್ತವರ ವಿರುದ್ಧ ಅಂಥ ಕಾನೂನು ಅಸ್ತ್ರವನ್ನು ಬಳಸುವಷ್ಟು ನಾವು ಕಠೊರತೆ ತೋರಬಾರದು. ಬೇರೆ ಕೋಮಿನ ಯುವಕನ ಜತೆ ಪರಾರಿಯಾಗಿ ಮದುವೆಯಾಗಿ, ಬಳಿಕ ಕೋರ್ಟಿನಲ್ಲಿ ಮುಖಾಮುಖೀಯಾದ ಮಗಳಲ್ಲಿ ತಾಯಿಯೊಬ್ಬಳು ಕಾಲಿಗೆ ಬಿದ್ದು ನನ್ನ ಜತೆಯಲ್ಲಿ ಬಾ ಮಗಳೇ ಎಂದು ಕೇಳಿಕೊಂಡು ಗೋಗರೆದು ಅತ್ತದ್ದು, ಅದಕ್ಕೆ ಕಿಂಚಿತ್ತೂ ಸ್ಪಂದಿಸದೆ ಯುವತಿಯು ತನ್ನ ಪ್ರೇಮಿಯ ಜತೆಗೆ ಹೋದದ್ದು ಎಲ್ಲವೂ ಕಾನೂನಿನ ಬಲದಿಂದಲೇ. ಕಾನೂನು ಇರುವುದು ನಮ್ಮ ಒಳಿತಿಗಾಗಿಯೇ. ತಾಯಿ-ಮಕ್ಕಳು ತನ್ನ ಬಲದಿಂದ ದೂರವಾದರೂ ಕಾನೂನು ಅಚಲವಾಗಿಯೇ ಇರುತ್ತದೆ. ಆದರೆ ಮಾನವೀಯತೆ, ಬೆಳೆದ ಮನೆಯ ಪ್ರೀತಿಯು ಎಲ್ಲ ಕಾನೂನಿಗಿಂತಲೂ ಗಟ್ಟಿಯಾಗಿರಬೇಕು.

ಹೆತ್ತವರೂ ಚಿಂತಿಸುವ ವಿಷಯವಿದೆ
ಮಕ್ಕಳು ಯಾರನ್ನೋ ಪ್ರೀತಿಸುತ್ತಿದ್ದಾರೆ ಎಂಬುದು ತಿಳಿದರೆ, ಅದೊಂದು ಮಹಾಪರಾಧ ಎಂದು ಹೆತ್ತವರು ಭಾವಿಸುವುದು ಕೂಡ ಸರಿಯಲ್ಲ. ಮಕ್ಕಳ ಪ್ರೇಮ ಪ್ರಕರಣದಲ್ಲಿ ಮಧ್ಯಸ್ಥಿಕೆ ದಾರರಾಗಿದ್ದು, ತಮ್ಮ ಮಕ್ಕಳಿಗೆ ಸೂಕ್ತ ಹುಡುಗ ಅಥವಾ ಹುಡುಗಿ ಎಂದು ತಿಳಿದುಬಂದರೆ ಹೆತ್ತವರೇ ಮುಂದೆ ನಿಂತು ಮದುವೆ ಮಾಡಿಸಬೇಕು. ಸರಿ ಹೊಂದುವುದಿಲ್ಲ ಎಂದರೆ ಅದನ್ನು ಸರಿಯಾದ ರೀತಿಯಲ್ಲಿ ಕಾರಣ ಸಹಿತ ಮಕ್ಕಳಿಗೆ ತಿಳಿಸುವ ಕೆಲಸ ಮಾಡಬೇಕು. ಇಲ್ಲಿ ಹಟ, ಪ್ರತಿಷ್ಠೆಗೆ ಅವಕಾಶ ಇರಬಾರದು.

ಅಪರಾಧ ಎಂಬ ಮನಃಸ್ಥಿತಿಯಿಂದ ದೂರವಿರೋಣ
ಯುವ ಜೋಡಿ ಪರಸ್ಪರ ಪ್ರೀತಿಸುವುದು ಅಪರಾಧ ಎಂಬ ಮನಃಸ್ಥಿತಿಯಿಂದ ಪ್ರೇಮಿಗಳು ಹಾಗೂ ಹೆತ್ತವರು ದೂರವಿರಬೇಕು. ಪ್ರೇಮದ ವಿಷಯದಲ್ಲಿ ಆರಂಭದಲ್ಲೇ ಗುಟ್ಟು ಮಾಡುವುದು ದೊಡ್ಡ ಅಪಾಯಕ್ಕೆ ನಾಂದಿ. ಪ್ರೇಮ ಬೆಳೆದಂತೆ ಗಟ್ಟಿಯಾಗುತ್ತದೆ. ಆರಂಭದಲ್ಲೇ ಪ್ರಾಮಾಣಿಕವಾಗಿ ಮನೆಯಲ್ಲಿ ತಿಳಿಸಿದರೆ ಮುಂದುವರಿಯಲು ಅಥವಾ ಕೊನೆಗೊಳಿಸಲು ಸುಲಭ. ಆದ್ದರಿಂದ ಪ್ರೇಮದ ವಿಷಯದಲ್ಲಿ ಹೆತ್ತವರು ಮತ್ತು ಮಕ್ಕಳು ಸಾಕಷ್ಟು ವಿವೇಕದಿಂದ ವರ್ತಿಸುವ ಅಗತ್ಯವಿದೆ. ಪ್ರೇಮದ ಹೆಸರಲ್ಲಿ ಹಿಂಸೆ, ದುಃಖ, ಅಪಾಯಕ್ಕೆ ಅವಕಾಶ ವಿಲ್ಲದಂತೆ ನಾಜೂಕಿನಿಂದ ಹೆಜ್ಜೆ ಇಡುವುದು ಒಳಿತು.

ಪುತ್ತಿಗೆ ಪದ್ಮನಾಭ ರೈ

Advertisement

Udayavani is now on Telegram. Click here to join our channel and stay updated with the latest news.

Next