Advertisement

ವ್ಯಕ್ತಿ ಕೊಂದಿದ್ದ ಸಲಗಗಳು ಕಾಡಿನತ್ತ

09:37 PM May 05, 2019 | Team Udayavani |

ಎಚ್‌.ಡಿ.ಕೋಟೆ: ಕಾಡಿನಿಂದ ತಪ್ಪಿಸಿಕೊಂಡು ನಾಡಿಗೆ ಬಂದು ಕೂಲಿ ಕಾರ್ಮಿಕನೋರ್ವನನ್ನು ದಾರುಣವಾಗಿ ಕೊಂದು ಹಾಕಿದ್ದ ಎರಡು ಸಲಗಗಳನ್ನು ಕಾರ್ಯಚರಣೆ ನಡೆಸಿ ಕಾಡಿಗಟ್ಟುವಲ್ಲಿ ಎಚ್‌.ಡಿ.ಕೋಟೆ ಸಾಮಾಜಿಕ ವಲಯಾರಣ್ಯದ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.

Advertisement

ಮೇ 4ರ ಶನಿವಾರ ಹೆಬ್ಟಾಳ ಜಲಾಶಯದ ನಾಲೆ ಲೈನಿಂಗ್‌ ಕಾಮಗಾರಿ ಕೆಲಸಕ್ಕೆ ಬಂದಿದ್ದ ಉತ್ತರ ಕರ್ನಾಟಕದ ಯಾದಗಿರಿ ಜಿಲ್ಲೆ ಶಹಾಪುರ ದಸರಾ ಆನೆಗಳಿಂದ ಕಾರ್ಯಾಚರಣೆ: ತಾಲೂಕಿನ ಕಿಕ್ಕೇರಿ ಗ್ರಾಮದ ನಿವಾಸಿ ಹನುಮಂತರಾಯಪ್ಪ 53 ವರ್ಷ ಎಂಬುವವರ ಮೇಲೆ ತಾಲೂಕಿನ ಮಾದಾಪುರ ಗ್ರಾಮದ ದೇವರಾಜ ಕಾಲೋನಿ ಸಮೀಪ ಆನೆ ದಾಳಿ ಮಾಡಿ ದಂತದಿಂದ ಚುಚ್ಚಿ ಕೊಂದು ಹಾಕಿತ್ತು.

ಘಟನೆ ಬಳಿಕ ಎಚ್ಚೆತ್ತ ಅರಣ್ಯಾಧಿಕಾರಿಗಳು ಹೆಚ್ಚಿನ ಸಿಬ್ಬಂದಿ ಜತೆಗೆ ದಸರಾ ಆನೆಗಳನ್ನು ಕರೆಸಿ ಸಂಜೆ 6 ನಂತರ ಕಾಡಾನೆಗಳನ್ನು ಮತ್ತೆ ಕಾಡಿಗಟ್ಟಲು ಕಾರ್ಯಚರಣೆ ಪ್ರಾರಂಭಿಸಿ ಸುಮಾರು ರಾತ್ರಿ 8 ಗಂಟೆ ವೇಳೆಗೆ ಸರಗೂರು ಸಾಮಾಜಿಕ ವಲಯಾರಣ್ಯದ ಚಿಕ್ಕದೇವಮ್ಮ ಬೆಟ್ಟದ ಕಾಡಿಗೆ ಸೇರಿಸುವಲ್ಲಿ ಯಶಸ್ವಿಯಾದರು.

ಓಂಕಾರ್‌ ಅರಣ್ಯಕ್ಕೆ: ಈ ಪ್ರದೇಶದ ಸಂರಕ್ಷಿತಾ ಅರಣ್ಯ ಪ್ರದೇಶವಾಗಿದ್ದು, ಮತ್ತೆ ಇಲ್ಲಿಂದ ಸಲಗಗಳು ಹೊರಗೆ ಬರುವ ಸಾಧ್ಯತೆ ಇರುವ ಬಗ್ಗೆ ಮಾಹಿತಿ ತಿಳಿದಿರುವ ಅಧಿಕಾರಿಗಳು, ಭಾನುವಾರ ಕಾರ್ಯಚರಣೆ ನಡೆಸಿ, ಆನೆಗಳನ್ನು ಬಂಡೀಪುರ ವನ್ಯಜೀವಿ ವಲಯದ ಓಂಕಾರ್‌ ಅರಣ್ಯ ಪ್ರದೇಶಕ್ಕೆ ಸೇರಿಸಲಾಗುವುದು ಎಂದು ಎಚ್‌.ಡಿ.ಕೋಟೆ ಸಾಮಾಜಿಕ ವಲಯಾರಣ್ಯಾಧಿಕಾರಿಗಳು “ಉದಯವಾಣಿ’ಗೆ ತಿಳಿಸಿದ್ದಾರೆ.

ದಂತದಿಂದ ಚುಚ್ಚಿದ್ದವು: ಕಾಡಾನೆಗಳು ಮೇ 4 ರ ಶನಿವಾರ ಮೊದಲು ಬೆಳಗ್ಗೆ 6ರ ಸಮಯದಲ್ಲಿ ಪಡುಕೋಟೆಯಲ್ಲಿ ಕಾಣಿಸಿಕೊಂಡವು. ನಂತರ ಕೊಡಸೀಗೆ ಗ್ರಾಮದ ಮುಖ್ಯ ರಸ್ತೆಯಲ್ಲಿ ಸಾಗಿ ಮಲಾರ ಕಾಲೋನಿ ಮಾರ್ಗವಾಗಿ ಮಾದಾಪುರ ತಲುಪಿದವು.

Advertisement

ಗ್ರಾಮದ ದೇವರಾಜ ಕಾಲೋನಿ ಬಳಿ ನಡೆಯುತ್ತಿರುವ ಹೆಬ್ಟಾಳ ನಾಲೆಗಳ ಲೈನಿಂಗ್‌ ಕಾಮಗಾರಿ ಕೆಲಸಕ್ಕಾಗಿ ತೆರಳಿದ್ದ ಹನುಮಂತರಾಯಪ್ಪ ಅವರ ಮೇಲೆ ಕಾಡಾನೆಗಳು ದಾಳಿ ಮಾಡಿ ತನ್ನ ದಂತದಿಂದ ಚುಚ್ಚಿ ಗಂಭೀರವಾಗಿ ಗಾಯಗೊಳಿಸಿದ್ದರಿಂದ ಹನುಮಂತಪ್ಪ ಸಾವನ್ನಪ್ಪಿದ್ದರು.

ಕಾರ್ಯಾಚರಣೆಗೆ ತೊಂದರೆ: ತಾಲೂಕಿನ ಮಾದಾಪುರ ಗ್ರಾಮದ ದೇವರಾಜ ಕಾಲೋನಿ ಬಳಿ ಕಾಡಾನೆ ದಾಳಿ ಮಾಡಿ ಬಡ ಕೂಲಿ ಕಾರ್ಮಿಕನನ್ನು ಕೊಂದು ಹಾಕಿದ್ದ ವಿಷಯ ಮಾದಾಪುರ ಗ್ರಾಮ ಸೇರಿ ಅಕ್ಕಪಕ್ಕದ ಗ್ರಾಮದ ಸುಮಾರು 2 ಸಾವಿರಕ್ಕಿಂತಲೂ ಹೆಚ್ಚು ಜನರು ಕಾಡಾನೆಗಳನ್ನು ನೋಡಲು ಸೇರಿದ್ದರಿಂದ ಕಾರ್ಯಚರಣೆ ವಿಳಂಬ ಆಯ್ತು.

ಇನ್ನಾದರೂ ಕಾರ್ಯಚರಣೆ ಸಂದರ್ಭ ಜನರು ಸಾಗರೋಪಾದಿಯಲ್ಲಿ ಸೇರಿ ಕಾರ್ಯಾಚರಣೆಗೆ ಮತ್ತು ಕಾಡು ಪ್ರಾಣಿಗಳಿಗೆ ತೊಂದರೆ ಆಗದಂತೆ ಜಾಗೃತರಾಗಿ ಅರಣ್ಯ ಇಲಾಖೆ ಜೊತೆ ಸಹಕರಿಸುವಂತೆ ಎಚ್‌.ಡಿ.ಕೋಟೆ ಸಾಮಾಜಿಕ ವಲಯಾರಣ್ಯದ ಅಧಿಕಾರಿಗಳು ಮನವಿ ಮಾಡಿದ್ದಾರೆ.

ಘಟನೆಗೆ ನೊಂದ ಅರಣ್ಯಾಧಿಕಾರಿ: ಕಾಡಿನಿಂದ ತಪ್ಪಿಸಿಕೊಂಡು ಬಂದು ತಾಲೂಕಿನ ಕೆಲ ಗ್ರಾಮಗಳ ಬಳಿ ಕಾಣಿಸಿಕೊಂಡಿದ್ದ ಕಾಡಾನೆಗಳನ್ನು ಕಂಡ ಜನರು ಸಿಳ್ಳೆ, ಕೂಗಾಟ, ಹುಚ್ಚಾಟದಿಂದಾಗಿ ಗಾಬರಿಗೊಂಡಿದ್ದವು.

ಈ ಕಾಡಾನೆಗಳು ಅದೇ ಹೆಬ್ಟಾಳ ನಾಲೆಯ ಲೈನಿಂಗ್‌ ಕಾಮಗಾರಿಯಲ್ಲಿ ತೊಡಗಲು ನಾಲೆ ಏರಿ ಮೇಲೆ ನಡೆದು ಬರುತ್ತಿದ್ದ ಹನುಮಂತರಾಯಪ್ಪ ಎಂಬ ಕೂಲಿ ಕಾರ್ಮಿಕನ ಮೇಲೆ ದಾಳಿ ಮಾಡಿ ಕೊಂದು ಹಾಕಿವೆ ಎಂದು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಅರಣ್ಯ ಅಧಿಕಾರಿಯೊಬ್ಬರು ಮರುಕ ವ್ಯಕ್ತಪಡಿಸಿದ್ದಾರೆ.

* ಬಿ.ನಿಂಗಣ್ಣಕೋಟೆ

Advertisement

Udayavani is now on Telegram. Click here to join our channel and stay updated with the latest news.

Next